ದೇವರ ದಯೆ ಆರೋಪ ಮುಕ್ತನಾದೆ : ದಯಾನಾಯಕ್

ಭೂಗತ ಪಾತಕಿ ಹಾಗೂ ಉಗ್ರರನ್ನು ಬೆಂಡತ್ತಿ ಸುಮಾರು 86ಕ್ಕೂ ಹೆಚ್ಚು ಎನ್ ಕೌಂಟರ್ ನಡೆಸಿ ಹೆಸರುವಾಸಿಯಾಗಿದ್ದ ದಯಾನಾಯಕ್ ಕನ್ನಡಿಗರು ಎನ್ನುವುದು ವಿಶೇಷ. ಸುಮಾರು 5 ವರ್ಷಗಳ ಕಾಲ ಅವರನ್ನು ಬೆನ್ನು ಬಿಡದೆ ಕಾಡಿದ ಭ್ರಷ್ಟಾಚಾರ ಆರೋಪಗಳು ತೆರೆಬಿದ್ದಿದೆ. 2002 ರಲ್ಲಿ ತನ್ನೂರು ಕಾರ್ಕಳ ತಾಲ್ಲೂಕಿನ ಎಣ್ಣೆಹೊಳೆಯಲ್ಲಿ ಮಕ್ಕಳಿಗಾಗಿ ಪ್ರೌಢಶಾಲೆ ನಿರ್ಮಿಸಿದ ಬಳಿಕ ಭ್ರಷ್ಟಾಚಾರ ನಿಗ್ರಹ ಬ್ಯೂರೋ ಕೆಂಗಣ್ಣಿಗೆ ಗುರಿಯಾಗಿದ್ದರು.
ಶಾಲೆ ಉದ್ಘಾಟನೆಗೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸೇರಿ ಮೊದಲಾದ ಗಣ್ಯರು ಆಗಮಿಸಿದ್ದರು. ಈ ವಿಷಯವೇ ದಯಾನಾಯಕ್ ರನ್ನು ವಿವಾದಕ್ಕೆ ಸಿಲುಕಿಸಿತ್ತು. ಭೂಗತ ಲೋಕದೊಂದಿಗೆ ನಂಟು, ಶಾಲೆ ನಿರ್ಮಾಣ ಮತ್ತು ಅಕ್ರಮ ಆಸ್ತಿಗೆ ಸಂಬಂಧಿಸಿ ಭ್ರಷ್ಟಾಚಾರ ನಿಗ್ರಹ ಬ್ಯೂರೋ 2004ರಲ್ಲಿ ದಯಾನಾಯಕ್ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ದೇವರ ದಯೆ ಹಾಗೂ ಹಿರಿಯ ಅಧಿಕಾರಿಗಳ ನಿಷ್ಪಕ್ಷಪಾತ ತನಿಖೆಯಿಂದ ನಾನು ಆರೋಪ ಮುಕ್ತನಾಗಲು ಸಾಧ್ಯವಾಗಿದೆ ಎಂದು ದಯಾನಾಯಕ್ ಸಂತಸ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications