ಖನಿಜ ಸಂಪತ್ತು ಲೂಟಿ: ಯಡಿಯೂರಪ್ಪ

Yeddyurappa
ಬೆಂಗಳೂರು, ನ.11 : ರಾಜ್ಯದಲ್ಲಿ ಅರಣ್ಯ ಮತ್ತು ಖನಿಜ ಸಂಪತ್ತು ಲೂಟಿಯಾಗುತ್ತಿದೆ. ಅದನ್ನು ರಕ್ಷಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಅರಣ್ಯ ಭವನದಲ್ಲಿ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಅರಣ್ಯ ಮತ್ತು ಖನಿಜ ಸಂಪತ್ತು ಕೆಲವರ ಕಪಿಮುಷ್ಠಿಯಲ್ಲಿ ಸಿಕ್ಕಿ ಲೂಟಿಯಾಗುತ್ತಿದೆ. ದೇಶ ಸಂಕಟದ ಪರಿಸ್ಥಿತಿಯಲ್ಲಿದೆ. ದೇಶವನ್ನು ಮುನ್ನೆಡೆಸಲು ಆಡಳಿತಕ್ಕೆ ಮತ್ತಷ್ಟು ಶಕ್ತಿ ಬರಬೇಕಾಗಿದೆ. ನಾಡಿನ ಜನತೆ ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಹೋಗಲು ಸಹ ನಮ್ಮಿಂದ ಆಗುತ್ತಿಲ್ಲ ಎಂದು ಹೇಳಿದರು.

ಚುನಾಯಿತ ಪ್ರತಿನಿಧಿಗಳ ಮೇಲೆ ಜನರಿಗೆ ವಿಶ್ವಾಸ, ನಂಬಿಕೆ ಕಡಿಮೆಯಾಗುತ್ತಿದೆ. ನಾವು ಜನರಿಂದ ಗೆದ್ದಿದ್ದೇವೆ ಎನ್ನುವುದನ್ನು ಕೆಲವರು ಮರೆತು ವರ್ತಿಸುತ್ತಿರುವುದು ದುರದೃಷ್ಟಕರ ಎಂದು ಯಾರ ಹೆಸರನ್ನೂ ಹೇಳದೆ ಮಾತನಾಡಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+