ಸಿಎಂ ಹೇಳಿಕೆ ಸ್ವಾಗತಿಸಿದ ಜನಾರ್ದನರೆಡ್ಡಿ

Janardhan Reddy
ಬೆಂಗಳೂರು, ನ. 11 : ಹಣಬಲ, ತೋಳ್ಬಲದಿಂದ ಬಿಜೆಪಿ ನಾಯಕರನ್ನು ಬಗ್ಗಿಸುವುದು ಆಗಲ್ಲ ಎಂದು ಮುಖ್ಯಮಂತ್ರಿಗಳ ಹೇಳಿಕೆಯನ್ನು ಸ್ವಾಗತಿಸುವುದಾಗಿ ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಹೇಳಿದರು.

ಅನಂತಕುಮಾರ್ ನಿವಾಸದಲ್ಲಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ತಪ್ಪಿಲ್ಲ ಎಂದರು. ಇನ್ನೆರಡು ದಿನಗಳಲ್ಲಿ ಕೋರ್ ಕಮೀಟಿ ರಚನೆಯಾಗಲಿದೆ. ಜಗದೀಶ್ ಶೆಟ್ಟರ್ ಅವರು ಸಕ್ರಿಯ ರಾಜಕಾರಣಕ್ಕೆ ಮರಳಬೇಕು ಎನ್ನುವುದು ನಮ್ಮ ಅಪೇಕ್ಷೆ ಎಂದು ರೆಡ್ಡಿ ಹೇಳಿದರು. ಆದರೆ, 15 ದಿನಗಳೊಳಗೆ ಕೋರ್ ಕಮೀಟಿ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು.

ಜಗದೀಶ್ ಶೆಟ್ಟರ್ ಇನ್ನೆರಡು ದಿನಗಳ ಒಳಗೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳು ನಿಚ್ಚಳವಾಗಿವೆ. ಶೋಭಾ ಕರಂದ್ಲಾಜೆ ಅವರಿಂದ ತೆರವಾದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ಇಲಾಖೆ ಸ್ಥಾನವನ್ನು ಶೆಟ್ಟರ್ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಪುಟದಿಂದ ಇನ್ನೂ ಕೆಲ ಸಚಿವರನ್ನು ಕೈಬಿಡುವ ಎಲ್ಲ ಸಾಧ್ಯತೆಗಳೂ ಇವೆ. ರೇಣುಕಾಚಾರ್ಯ, ವಿಮಲಾಗೌಡ, ಭಾರತಿ ಶೆಟ್ಟಿ ಅವರ ಹೆಸರುಗಳು ಸಚಿವರ ಲಿಸ್ಟ್ ನಲ್ಲಿವೆ.

ನಗರದ ಅರಣ್ಯಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಖನಿಜ ಸಂಪತ್ತು ಕೆಲ ಪ್ರಭಾವಿಗಳು ಲೂಟಿ ಮಾಡುತ್ತಿದ್ದಾರೆ. ನಾನು ಹಣಬಲ, ತೋಳ್ಬಲಕ್ಕೆ ಹೆದರುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಇಂದು ನಾನು ಹಾಗೆ ಹೇಳಿಯೇ ಇಲ್ಲ ಎಂದ ಯಡಿಯೂರಪ್ಪ, ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದು ಗೂಬೆ ಕೂರಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+