ಮರಾಠಿಗರ ಭಾವನೆಗಳನ್ನು ಕೆದಕಬೇಡಿ, ಭಾಳಾ

ಹಿಂದಿ ಮತ್ತು ಇಂಗ್ಲಿಷ್ ವಿರುದ್ದ ಶಿವಸೇನೆ ಸದಸ್ಯರು ಈ ಹಿಂದೆಯೂ ಸದನದಲ್ಲಿ ಹೋರಾಟ ನಡೆಸಿದ್ದಾರೆ. ಆದರೆ ವಿಧಾನಸಭೆಯಲ್ಲಿ ಹಲ್ಲೆಗೆ ಮುಂದಾದ ಎಂಎನ್ಎಸ್ ಶಾಸಕರ ಕ್ರಮ ಸರಿಯಲ್ಲ. ವಿಧಾನಸಭೆ ಅಥವಾ ಸಂಸತ್ತಿನ ಕಲಾಪಗಳು ಶಿಷ್ಟಾಚಾರದ ಪ್ರಕಾರವೇ ನಡೆಯಬೇಕು ಅದು ರಣರಂಗವಾಗಬಾರದು ಎಂದು ಪಕ್ಷದ ಮುಖವಾಣಿ 'ಸಾಮ್ನಾ' ದ ಸಂಪಾದಕೀಯದಲ್ಲಿ ಠಾಕ್ರೆ ಹೇಳಿದ್ದಾರೆ.
ಠಾಕ್ರೆ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ, ಬಾಳಾಠಾಕ್ರೆ ಜೀವನದ ಕೊನೆಯ ಹಂತ ತಲುಪಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿನ ಸೋಲು ಅವರನ್ನು ಕಂಗೆಡಿಸಿದ್ದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆಂದು ಕಿಡಿಕಾರಿದ್ದಾರೆ. ಅಬು ಅಜ್ಮಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿ ವಿವಾದಕ್ಕೊಳಗಾಗಿದ್ದರು.
(ಏಜನ್ಸೀಸ್)












Click it and Unblock the Notifications