6 ಸಚಿವರ ತಲೆದಂಡಕ್ಕೆ ರೆಡ್ಡಿ ಪಟ್ಟು

ಸಿ ಎಸ್ ಉದಾಸಿ, ಮುರುಗೇಶ ನಿರಾಣಿ, ಲಕ್ಷ್ಮಣ ಸವದಿ, ಶೋಭಾ ಕರಂದ್ಲಾಜೆ, ಹರತಾಳ್ ಹಾಲಪ್ಪ, ಬಸವರಾಜ ಬೊಮ್ಮಾಯಿ ಅವರ ತಲೆದಂಡವಾಗಬೇಕು. ಅವರ ಬದಲಿಗೆ , ಸಿಟಿ ರವಿ, ರೇಣುಕಾಚಾರ್ಯ, ಆನೇಕಲ್ ನಾರಾಯಣಸ್ವಾಮಿ, ಸೀಮಾ ಮಸೂತಿ, ವೀರಣ್ಣ ಚರಂತಿಮಠ, ಎಸ್ ಕೆ ಬೆಳ್ಳುಬ್ಬಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ರೆಡ್ಡಿ ಪಟ್ಟು ಹಿಡಿದಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ, ಜನಾರ್ದನರೆಡ್ಡಿ, ರಾಜ್ಯ ಹಿತಕ್ಕಾಗಿ ನಾವು ಮಾಡಿದ ಎಲ್ಲ ಪ್ರಯತ್ನಗಳು ಯಶಸ್ವಿಯಾಗಲಿವೆ. ಇಂದು ಸಂಜೆ ವೇಳೆಗೆ ಎಲ್ಲವೂ ಸುಖಾಂತ್ಯಗೊಳ್ಳಲಿದೆ ಎಂದರು. ಇನ್ನೊಂದಡೆ, ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಸಚಿವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ಅವರ ಸೂಚನೆ ಮೇರೆಗೆ 10 ಮಂದಿ ಸಚಿವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ರೆಡ್ಡಿಗಳ ಆರು ಪ್ರಮುಖ ಬೇಡಿಕೆಗಳು
* ಯಡಿಯೂರಪ್ಪ 6 ತಿಂಗಳ ಮಾತ್ರ ಹುದ್ದೆಯಲ್ಲಿದ್ದು ಬಜೆಟ್ ನಂತರ ಕೆಳಗಿಳಿಯಬೇಕು.
* ಆರು ಮಂದಿ ಸಚಿವರ ತಲೆದಂಡವಾಗಬೇಕು
* ಸಮನ್ವಯ ಸಮಿತಿ ರಚನೆಯಾಗಿ ಯಾವುದೇ ವರ್ಗಾವಣೆ ಯೋಜನೆ ರೂಪಿಸುವಾಗಲೂ ಅದರ ಅನುಮತಿ ಪಡೆಯುವುದು ಕಡ್ಡಾಯ. ಮುಖ್ಯಮಂತ್ರಿ ಸ್ವತಂತ್ರವಾಗಿ ಯಾವುದೇ ನಿರ್ಧಾರವನ್ನೂ ತಗೆದುಕೊಳ್ಳುವಂತಿಲ್ಲ.
* ಉಪಚುನಾವಣೆಯಲ್ಲಿ ಸೋತ ಸೋಮಣ್ಣ ರಾಜೀನಾಮೆಯಿಂದ ಖಾಲಿ ಆದ ಸ್ಥಾನಕ್ಕೆ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರನ್ನೇ ನೇಮಕ ಮಾಡಬೇಕು.
* ತಮ್ಮ ಬೆಂಬಲಿಗ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡಬೇಕು.
* ಪ್ರತಿ ತಿಂಗಳ ಶಾಸಕರ ಸಭೆ, ಕ್ಷೇತ್ರವಾರು ಹಣ ಸಮಾನ ವಿಂಗಡಣೆ.
* ನಿಗಮ ಮಂಡಳಿಗಳಲ್ಲಿ ಶೇ. 50 ರಷ್ಟು ಸ್ಥಾನಗಳನ್ನು ತಮ್ಮ ಬೆಂಬಲಿಗರಿಗೆ ನೀಡಬೇಕು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications