ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಎಂಇಎಸ್

|
Google Oneindia Kannada News

MES activists set ablaze Kannada flag in Belgaum
ಬೆಳಗಾವಿ, ನ. 2 : ಇಲ್ಲಿಯೇ ಇದ್ದುಕೊಂಡು ರಾಜ್ಯ ವಿರೋಧಿ ಧೋರಣೆ ಪ್ರದರ್ಶಿಸುತ್ತಲೇ ಬಂದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡರು ರಾಜ್ಯೋತ್ಸವದ ದಿನ ಭಾನುವಾರ (ನ 1) ಕನ್ನಡ ದ್ವಜವನ್ನು ತುಳಿದು ಬೆಂಕಿ ಹಚ್ಚಿ ವಿದ್ಯಾರ್ಥಿಗಳನ್ನು ಥಳಿಸಿ ಮಹಾರಾಷ್ಟ್ರ ಪರ ಘೋಷಣೆ ಕೂಗುವುದಲ್ಲದೆ ಭಗವಾಧ್ವಜ ಹಾರಿಸಿ ಮತ್ತೊಮ್ಮೆ ಪುಂಡಾಟಿಕೆ ನಡೆಸಿರುವ ಘಟನೆ ನಡೆದಿದೆ.

ನಗರದ ಹೊರವಲಯದ ಮಣ್ಣೂರು ಎಂಬಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಲ್ಲಿದ್ದ ಕನ್ನಡ ಬಾವುಟ ಹಾರಿಸಿದ್ದಕ್ಕೆ ಎಂಇಎಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೆ, ಬಸ್ ನಲ್ಲಿ ಬರೆದಿದ್ದ ಕನ್ನಡ ಘೋಷಣೆಗಳನ್ನು ಅಳಿಸಿ 'ಜೈ ಮಹಾರಾಷ್ಟ್ರ' ಎಂದು ಘೋಷಣೆ ಬರೆದರು. ಘಟನೆಯನ್ನು ಪ್ರತಿಭಟಿಸಿದ ವಿದ್ಯಾರ್ಥಿಗಳು ಪೋಲಿಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ದೂರು ಸ್ವಿಕರಿಸಲು ಹಿಂದೇಟು ಹಾಕಿದರು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಕಾರವಾರದಲ್ಲೂ ಇಂತಹ ಘಟನೆ ವರದಿಯಾಗಿದೆ. ಮರಾಠಿ ಶಾಲೆಯೊಂದರಲ್ಲಿದ್ದ ಹತ್ತಾರು ಮಂದಿ ಮರಾಠಿಗರು ಕನ್ನಡ ವಿರೋಧಿ ಘೋಷಣೆ ಕೂಗಿದರು. ವಿಷಯ ತಿಳಿದ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದಾಗ ಕನ್ನಡ ವಿರೋಧಿಗಳು ಕಾಲ್ಕಿತ್ತರು. ಈ ನಡುವೆ ಭಾನುವಾರ ಎಂಇಎಸ್ ಕರೆ ನೀಡಿದ್ದ 'ಬೆಳಗಾವಿ ಬಂದ್' ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X