ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೆಟ್ಟರ್ ಮನೆ ಬಾಗಿಲಿಗೆ ಸಿಎಂ ಕುರ್ಚಿ

|
Google Oneindia Kannada News

 Unlucky for many, lucky for Shettar?
ಬೆಂಗಳೂರು, ಅ. 30 : ರೆಡ್ಡಿ ಸಹೋದರರು ಮತ್ತು ಉತ್ತರ ಕರ್ನಾಟಕದ ಬಹುತೇಕ ಶಾಸಕರು ಸ್ಪೀಕರ್ ಜಗದೀಶ್ ಶೆಟ್ಟರ್ ಪರ ಒಲವು ತೋರಿಸುತ್ತಿರುವುದು ಒಂದಡೆಯಾದರೆ, ಬಿಜೆಪಿ ನಾಯಕ ಅರುಣ್ ಜೈಟ್ಲಿ ಅವರು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರೇ ಮುಂದುವರಿಯಲಿದ್ದಾರೆ. ಇನ್ನೊಂದು ಬೆಳವಣಿಗೆಯಲ್ಲಿ ಸಚಿವ ಶ್ರೀರಾಮುಲು ಅವರು ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

ರಾಜ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟು ಪರಿಹಾರ ಕಾಣದ ಹಿನ್ನೆಲೆಯಲ್ಲಿ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಲು ಜೈಟ್ಲಿ ನಿರ್ಧಸಿರಿದ್ದಾರೆ. ರೆಡ್ಡಿ ಸಹೋದರರು ಅವರು ಸುಷ್ಮಾ ಸ್ವರಾಜ್ ಅವರ ಕಟ್ಟಾ ಅಭಿಮಾನಿಗಳು. ಅವರಿಂದ ರೆಡ್ಡಿ ಮನವೂಲಿಸುವ ಯತ್ನಕ್ಕೆ ಜೈಟ್ಲಿ ಮನಸ್ಸು ಮಾಡಿದ್ದಾರೆ. ಈ ಕಾರಣಕ್ಕೆ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಿದ್ದಾರೆ. ರೆಡ್ಡಿಗಳು ದೆಹಲಿಗೆ ಬರಲು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಹೇಳಿದ್ದಾರೆ.

ರೆಡ್ಡಿ ಬೆಂಬಲಿಗರು ಎನ್ನಲಾದ ಸುಮಾರು 40 ಶಾಸಕರು ಹೈದರಾಬಾದ್ ಮತ್ತು ಗೋವಾದ ರೆಸಾರ್ಟ್ ವೊಂದರಲ್ಲಿ ಬೀಡುಬಿಟ್ಟಿದ್ದಾರೆ. ನಾಯಕತ್ವ ಬದಲಾವಣೆ ಆಗಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. ಇನ್ನೊಂದು ಸಂಗತಿಯೆಂದರೆ ಮುಖ್ಯಮಂತ್ರಿ ಸ್ಥಾನ ಜಗದೀಶ್ ಶೆಟ್ಟರ್ ಅವರ ಮನೆಯ ಬಾಗಿಲಿಗೆ ಬಂದು ನಿಂತಿದೆ. ಆದರೆ, ಸೌಮ್ಯವಾದಿ ಎಂದು ಕರೆಸಿಕೊಳ್ಳುತ್ತಿರುವ ಶೆಟ್ಟರ್ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಆದರೆ, ಯಡಿಯೂರಪ್ಪ ಬಗ್ಗೆ ಅವರಿಗೆ ಅಸಮಾಧಾನವಂತೂ ಇರುವುದು ದಿಟ ಎನ್ನುವುದು ಅವರು ಕಳೆದ ಎರಡು ದಿನಗಳಿಂದ ನಡೆದುಕೊಂಡು ವರ್ತನೆಯ ಸಾಕ್ಷಿಯಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X