ಆರ್ಎಸ್ಎಸ್ ವಿರುದ್ಧ ತಿರುಗಿಬಿದ್ದ ರಾಜನಾಥ್

ಬಿಜೆಪಿಯ ಪುನರುಜ್ಜೀವನಕ್ಕಾಗಿ ನಾಯಕತ್ವದಲ್ಲಿ ಮತ್ತು ಸಂಘಟನೆಯಲ್ಲಿ ಅಮೂಲಾಗ್ರವಾಗಿ ಬದಲಾವಣೆಯಾಗಬೇಕು ಎಂಬ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆಯಿಂದ ಕೆರಳಿರುವ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಆರ್ಎಸ್ಎಸ್ ಮುಖಂಡನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಲೋಕಸಭೆ ಚುನಾವಣೆಯ ನಂತರವೂ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಹಿನ್ನೆಡೆ ಸಾಧಿಸಿದೆ. ರಾಷ್ಟ್ರ ನಾಯಕರ ವಿರುದ್ಧ ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ, ಅರುಣ್ ಶೌರಿ ಮೊದಲಾದವರು ತಿರುಗಿಬಿದ್ದಿದ್ದರು. ಲಾಲ್ ಕೃಷ್ಣ ಅಡ್ವಾಣಿ ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ರಾಜನಾಥ್ ಸಿಂಗ್ ಅವರನ್ನೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂಬ ಅಭಿಪ್ರಾಯವೂ ಪಕ್ಷದಲ್ಲಿ ಮತ್ತು ಆರ್ಎಸ್ಎಸ್ ನಲ್ಲಿ ವ್ಯಕ್ತವಾಗಿತ್ತು. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ನಾಯಕತ್ವದ ಬದಲಾವಣೆಯ ವಿಷಯವನ್ನು ಆರ್ಎಸ್ಎಸ್ ಮುಂದಿಟ್ಟಿದೆ.
ಬಿಜೆಪಿ ವರ್ಚಸ್ಸು ಸಾಕಷ್ಟು ಕುಂದಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಸರ್ಜರಿ ಮಾಡಬೇಕಾಗಿದೆ, ಅದಕ್ಕೆ ಕೆಮೋಥೆರಪಿಯ ಅಗತ್ಯವಿದೆ. ಉನ್ನತ ಸ್ಥಾನದಲ್ಲಿರುವ ನಾಯಕರ ಬದಲಾವಣೆಯಾಗಬೇಕಾಗಿದೆ ಎಂದು ಮೋಹನ್ ಭಾಗವತ್ ಬಿಜೆಪಿಯ ಕಾಲು ಎಳೆದಿದ್ದರು. ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಜನಾಥ್ ಸಿಂಗ್, ಇದು ಒಬ್ಬ ಹುಚ್ಚನ ಹೇಳಿಕೆ ಎಂದು ವ್ಯಂಗ್ಯವಾಡಿದ್ದಾರೆ.
(ಏಜೆನ್ಸೀಸ್)












Click it and Unblock the Notifications