ಐಟಿ : ನಕಲಿ ಉದ್ಯೋಗದಾತರ ಬಂಧನ
ಬೆಂಗಳೂರು, ಅ. 26 : ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆದು ವಂಚಿಸಿದ್ದ ಮಹಿಳೆ ಸೇರಿದಂತೆ ನಾಲ್ವರು ವಂಚಕರನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರ ಮತ್ತೀಕೆರೆ ನಿವಾಸಿ ಸುನೀತಾ(36), ಐಬಿಎಂ ಉದ್ಯೋಗಿ ಆರ್ ಎಂ ನಗರದ ಲಿಯಾನ್ (30), ಆನೇಕಲ್ ತಾಲ್ಲೂಕಿನ ರಾಘವೇಂದ್ರ (27) ಮತ್ತು ಹೆಸರುಘಟ್ಟ ನಿವಾಸಿ ಅಜಯ್ (27) ಬಂಧಿತ ಆರೋಪಿಗಳು. ಬಂಧಿತರಿಂದ 2.15 ಲಕ್ಷ ರುಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುನೀತಾ ಎಂಬಿಎ ಪದವೀಧರೆಯಾಗಿದ್ದು, ಲಿಯಾನ್ ಮತ್ತಿತರ ಜೊತೆ ಸೇರಿ ಈ ಕೃತ್ಯ ಎಸಗಿದ್ದಾಳೆ.
ಎಲೆಕ್ಟ್ರಾನಿಕ್ ಸಿಟಿ ಹಾಗೂ ಕಾಡುಗೋಡಿ ಸುತ್ತಮುತ್ತ ಸಾಫ್ಟ್ ವೇರ್ ಎಂಜಿನಿಯರ್ ಗಳಿಗೆ ಕೆಲಸ ಕೊಡಿಸುವದಾಗಿ ನಂಬಿಸಿ ತಲಾ ಒಂದೂವರೆ ಲಕ್ಷ ರುಪಾಯಿ ಹಣ ಪಡೆದಿದ್ದರು. ಹಣ ಕೊಟ್ಟವರಿಗೆ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಉದ್ಯೋಗ ಸಿಕ್ಕಿರುವಂತೆ ನಕಲಿ ಆಪರ್ ಲೆಟರ್ ನೀಡಿ ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 20 ಕ್ಕೂ ಹೆಚ್ಚು ಮಂದಿಗೆ ವಂಚಿಸಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications