ಕರುಣಾಕರ ರೆಡ್ಡಿ ರಾಜೀನಾಮೆಗೆ ಎಚ್ಡಿಕೆ ಆಗ್ರಹ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೆರೆ ಪರಿಹಾರದ ವಿಚಾರದಲ್ಲಿ ಮುಖ್ಯಮಂತ್ರಿ ಕಂದಾಯ ಸಚಿವರನ್ನೇ ಕಡೆಗಣಿಸಿದ್ದಾರೆ ಎಂಬ ಮಾಧ್ಯಮ ವರದಿಗಳು ಬರುತ್ತಿವೆ. ಇದು ನಿಜವೇ ಆಗಿದ್ದರೆ ಕರುಣಾಕರರೆಡ್ಡಿ ಒಂದು ನಿಮಿಷವೂ ಸಚಿವ ಸ್ಥಾನದಲ್ಲಿ ಮುಂದುವರಿಯಬಾರದು ಎಂದಿದ್ದಾರೆ.
ನೆರೆ ಹಾಗೂ ಬರ ಬಂದಾಗ ಅದರ ನಿರ್ವಹಣೆಯ ಜವಾಬ್ದಾರಿ ಇರುವುದು ಕಂದಾಯ ಸಚಿವರಿಗೆ, ಆದರೆ ಮುಖ್ಯಮಂತ್ರಿ ಕಚೇರಿಯೇ ನೇರವಾಗಿ ತೀರ್ಮಾನ ಮಾಡುತ್ತಿದೆ. ಸಂಸದರೊಬ್ಬರ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚನೆ ಮಾಡುತ್ತಾರೆ. ಇದರಿಂದ ಸ್ಪಷ್ಟವಾಗುವುದೇನೆಂದರೆ, ಕಂದಾಯ ಸಚಿವರನ್ನು ಮುಖ್ಯಮಂತ್ರಿಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications