ಇನ್ಫಿ ಮೂರ್ತಿ ಸನ್ನಿಧಿಯಿಂದ ವಿಸಿ ನಿಧಿ

N R Narayana Murthy
ಬೆಂಗಳೂರು, ಅ. 23 : ಉದಯೋನ್ಮುಖ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎನ್. ಆರ್. ನಾರಾಯಣಮೂರ್ತಿ ಅವರು ಒಂದು ವೆನ್ಚರ್ ಕ್ಯಾಪಿಟಲ್ ನಿಧಿಯನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಆರಂಭಿಕ ಬಂಡವಾಳಕ್ಕಾಗಿ ತಮ್ಮ ಇನ್ಫಿ ಶೇರುಗಳನ್ನು ಮಾರಿದ್ದಾರೆ. ನಿನ್ನೆ ಮೊನ್ನೆ ಬುಧವಾರ ಮತ್ತು ಗುರುವಾರ ಅವರು ಮಾರಿದ ಶೇರುಗಳ ಮೌಲ್ಯ 180 ಕೋಟಿ ರೂಪಾಯಿಗಳು. ನಿನ್ನೆ ಮಾರುಕಟ್ಟೆ ಮುಕ್ತಾಯವಾಗುವ ವೇಳೆಗೆ ಶೇರುಗಳು ಮುಖಬೆಲೆ 2,211 ರೂಗಳಷ್ಟಿತ್ತು.

ಯುವಕರು ಮತ್ತು ಮೇಧಾವಿಗಳು ಆರಂಭಿಸುವ ಉದ್ದಿಮೆಗಳಿಗೆ ಬಂಡವಾಳ ಒದಗಿಸುವ ಉದ್ದೇಶ ಮೂರ್ತಿ ಅವರದು. ಭಾರತದಲ್ಲೇ ಇರುವ ಉದ್ದಿಮೆದಾರರಿಗೆ ಬಂಡವಾಳ ನೀಡುವ ಉದ್ದೇಶವನ್ನು ಅವರು ಸ್ಥಾಪಿಸುತ್ತಿರುವ ನಿಧಿ ಇಟ್ಟುಕೊಂಡಿರುವುದು ಗಮನಾರ್ಹ. ಮೂಲಭೂತ ಆರೋಗ್ಯ, ಶಿಕ್ಷಣ ಮತ್ತು ಪೊಷ್ಠಿಕತೆ ಕ್ಷೇತ್ರಗಳಲ್ಲಿ ಉದ್ದಿಮೆ ಆರಂಭವಿಸುವ ಯುವಕರಿಗೆ ಆದ್ಯತೆ.

ವೆನ್ಚರ್ ಕ್ಯಾಪಿಟಲ್ ಬಾವಿ ಬತ್ತಿ ಹೋಗಿರುವ ಈ ಋತುವಿನಲ್ಲಿ ಮೂರ್ತಿ ಅವರು ಪ್ರಕಟಿಸಿರುವ ಕ್ರಿಯಾಶೀಲ ಯೋಜನೆ ಮಾರುಕಟ್ಟೆಗೆ ಆಶಾದಾಯಕ ವರ್ತಮಾನವಾಗಿದೆ. ಏನಾದರೂ ಮಾಡುತಿರು ಮಂಕುತಿಮ್ಮ ಎನ್ನುವಂತೆ ಭಾರತದ ಪ್ರಮುಖ ಉದ್ದಿಮೆದಾರ ಮತ್ತು ಕನಸುಗಾರ ಎನ್ ಆರ್ ಎನ್ ಹುಟ್ಟುಹಾಕಿರುವ ಈ ಬಂಡವಾಳ ಯೋಜನೆ ಭಾರತದ ಯುವಕ ಮುಂದಾಳುಗಳಿಗೆ ಆಶಾದಾಯಕ ಸುದ್ದಿಯಾಗಿದೆ. ತೆರೆದ ಬಾವಿಗಳು ಬತ್ತಿರುವಾಗ ಕೊಳವೆ ಬಾವಿ ಕೊರೆದು ಅಂತರ್ಜಲ ಸೇದುವ ಪ್ರಯತ್ನ ಇದಾಗಿದೆ ಎಂದು ಬಣ್ಣಿಸೋಣವೇ ?

( ಅಲ್ಲಿಂದ ಇಲ್ಲಿಂದ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+