ಬೆಂಗಳೂರಿನಲ್ಲಿ ಮೂವರ ಬರ್ಬರ ಹತ್ಯೆ

Couple and child found murdered in Ramamurthy Nagar
ಬೆಂಗಳೂರು, ಅ. 23 : ರಾಮಮೂರ್ತಿ ನಗರದ ಅಪಾರ್ಟ್ ಮೆಂಟೊಂದರಲ್ಲಿ ದಂಪತಿ ಮತ್ತು ಅವರ ಮಗನನ್ನು ಭೀಕರವಾಗಿ ಹತ್ಯೆಗೈಯಲಾಗಿದ್ದು, ಬೆಂಗಳೂರಿಗರನ್ನು ಮತ್ತೆ ಬೆಚ್ಚಿ ಬೀಳಿಸಿದೆ. ದೀಪಾವಳಿಯ ಹಿಂದಿನ ದಿನವಷ್ಟೇ ಒಂದೇ ದಿನ ನಾಲ್ವರನ್ನು ಕೊಲೆಗೈಯಲಾಗಿತ್ತು.

ಮೂರ್ನಾಲ್ಕು ದಿನಗಳ ಹಿಂದೆಯೇ ಹತ್ಯೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಪ್ರಕರಣದ ಶುಕ್ರವಾರ ಬೆಳಕಿಗೆ ಬಂದಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಹೊರಮಾವುವಿನಲ್ಲಿ ಹತ್ಯೆ ನಡೆದಿದೆ. ಹತ್ಯೆಯ ಭೀಕರತೆ ಸುತ್ತಲಿನವರನ್ನು ಬೆಚ್ಚಿ ಬೀಳಿಸಿದೆ.

ಇಂಟೀರಿಯರ್ ಡಿಸೈನರ್ ಆಗಿರುವ ರಾಹುಲ್ ದಾಸ್(45), ಅವರ ಪತ್ನಿ ಪುಷ್ಪಾ ದಾಸ್(40) ಮತ್ತು ಮಗ ಅಗ್ನೇಶ್(8) ಹತ್ಯೆಗೀಡಾದ ದುರ್ದೈವಿಗಳು. ದುಷ್ಕರ್ಮಿಗಳು ರಾಹುಲ್ ಮತ್ತು ಪುಷ್ಪಾ ದಾಸ್ ಅವರನ್ನು ಬಾತ್ ರೂಮಿನ್ ಟಬ್ ನಲ್ಲಿ ಕೊಲೆ ಮಾಡಿದ್ದರೆ, ಅವರ ಮಗ ಅನೀಸ್ ನನ್ನು ಹಾಲ್ ನಲ್ಲಿ ಕೊಲೆ ಮಾಡಿದ್ದಾರೆ. ದುಷ್ಕರ್ಮಿಗಳು ಅತ್ಯಂತ ವ್ಯವಸ್ಥಿತವಾಗಿ ಹತ್ಯೆ ಮಾಡಿ ಮುಗಿಸಿದ್ದಾರೆ.

ಅಪಾರ್ಟ್ ಮೆಂಟ್ ನಲ್ಲಿ ಕೊಲೆ ನಡೆದಿದ್ದು, ಶವಗಳ ವಾಸನೆ ಬರುತ್ತಿದ್ದರಿಂದ ಸುತ್ತಮುತ್ತಲಿನ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಹತ್ಯೆಯ ಬಗ್ಗೆ ತನಿಖೆ ಆರಂಭಿಸಲಾಗುವುದು ಎಂದು ಅಪರಾಧಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+