ಲವ್ ಜಿಹಾದ್ : ಸಮಗ್ರ ವರದಿಗೆ ಕೋರ್ಟ್ ಆದೇಶ

ಚಾಮರಾಜನಗರದ ಕುವೆಂಪುನಗರದ ಸಿ ಸೆಲ್ವರಾಜ್ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ಲವ್ ಜಿಹಾದ್ ಜಾಲದ ಸುಳಿವು ದೊರೆತಿತ್ತು. ವಿಚಾರಣೆ ನಡೆಸಿದ ನ್ಯಾ.ಕೆ ಶ್ರೀಧರರಾವ್ ಹಾಗೂ ನ್ಯಾ. ರವಿ ಮಳೀಮಠ್ ಅವರ ವಿಭಾಗೀಯ ಪೀಠ ತೀರ್ಪು ನೀಡಿದೆ. ಲವ್ ಜಿಹಾದ್ ರಾಷ್ಟ್ರದ ಭದ್ರತೆಗೆ ಧಕ್ಕೆಯಾಗಲಿದೆ. ಇಂತಹ ಸಂಘಟನೆ ರಾಜ್ಯದಲ್ಲಿದೆಯೇ ? ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೇರಳ ಪೊಲೀಸರೊಂದಿಗೆ ಸೇರಿ ತನಿಖೆ ನಡೆಸಿ ಮೂರು ವಾರದಲ್ಲಿ ವರದಿ ನೀಡುವಂತೆ ಪೀಠ ಆದೇಶಿಸಿದೆ.
ಕೋರ್ಟ್ ಆದೇಶದಂತೆ ಸೆಲ್ಜಾ ರಾಜ್ ಳನ್ನು ಹಾಜರುಪಡಿಸಲಾಗಿತ್ತು. ಸ್ವಯಂ ಇಚ್ಚೆಯಿಂದ ಇಸ್ಲಾಂಗೆ ಮತಾಂತರಗೊಂಡಿದ್ದು, ಮದರಸಾದಲ್ಲಿದ್ದೇನೆ. ಮುಂದಿನ ತಿಂಗಳು ವಿಶೇಷ ಕಾಯಿದೆಯ ಅನ್ವಯ ಮದುವೆಯಾಗಲಿದ್ದೇನೆ ಎಂದ ಸೆಲ್ಜಾ, ಪೋಷಕರೊಂದಿಗೆ ಹೋಗಲು ನಿರಾಕರಿಸಿದಳು. ನಂತರ ನ್ಯಾಯಮೂರ್ತಿಗಳು ತಿಳಿ ಹೇಳಿದ ಮೇಲೆ ಪೋಷಕರೊಂದಿಗೆ ಹೋಗಲು ಸೆಲ್ಜಾ ಒಪ್ಪಿಕೊಂಡಳು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications