ಪ್ರವಾಹ ನಿಧಿಗೆ ಐಟಿ ದೇಣಿಗೆ ಸಭೆ

ಐಟಿ ಬಿಟಿ ನೌಕರರು ಮತ್ತು ಆಡಳಿತ ವರ್ಗ ಯಾವ ರೀತಿಯಲ್ಲಿ ನೆರವಿನ ಹಸ್ತ ಚಾಚಬಹುದು ಎಂಬ ಬಗ್ಗೆ ಈ ಸಭೆಯಲ್ಲಿ ಆಮೂಲಾಗ್ರವಾಗಿ ಚರ್ಚಿಸಲಾಗುತ್ತದೆ. ಸಭೆಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಭಾಗವಹಿಸುತ್ತಿದ್ದಾರೆ. ನೆರಾಹಾವಳಿಗೆ ತುತ್ತಾದ ಪ್ರದೇಶಗಳಲ್ಲಿ ಮನೆ ನಿರ್ಮಿಸುವ ಯೋಜನೆಯಲ್ಲಿ ( ಆಸರೆ ) ಖಾಸಗಿ ವಲಯದವರನ್ನು ತೊಡಗಿಸುವ ನಿಟ್ಟಿನಲ್ಲಿ ಅವರು ಕಾರ್ಯೋನ್ಮುಖವಾಗಿದ್ದಾರೆ.
ಖಾಸಗಿ ಅಂದರೆ ಐಟಿ ವಲಯದ ಕಾಣಿಕೆಗಳಿಂದ ಸುಮಾರು 3,000 ಮನೆ, ಎರಡು ಶಾಲೆ. ಎರಡು ಆಸ್ಪತ್ರೆ ನಿರ್ಮಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಈ ಸಭೆಯಲ್ಲಿ ಕಾರ್ಪೋರೇಟ್ ಕಂಪನಿಗಳು ತಮ್ಮ ಕೊಡುಗೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications