ತುಂಗಭದ್ರಾ ಕಾಲುವೆಗೆ ಟಂಟಂ ಉರುಳಿ ಐವರು ಸಾವು

ವಾಹನದಲ್ಲಿ ಕೂಲಿಗೆ ತೆರಳುತ್ತಿದ್ದ ಎಂಟು ಮಹಿಳೆಯರಿದ್ದರೆಂದು ತಿಳಿದುಬಂದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು ಉಳಿದವರನ್ನು ಹುಡುಕುವ ಯತ್ನ ಸಾಗಿದೆ. ಕಾಲುವೆ ತುಂಬಿ ಹರಿಯುತ್ತಿದೆ ಮತ್ತು ವಿಪರೀತ ಸೆಳವಿರುವುದರಿಂದ ಹುಡುಕುವುದು ಕಷ್ಟವಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ಧನ ರೆಡ್ಡಿ ಮೃತರ ಕುಟುಂಬಕ್ಕೆ 1 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಇಬ್ಬರು ಮಹಿಳೆಯನ್ನು ಪಾರು ಮಾಡಿದವರಿಗೆ ಕೂಡ ಸನ್ಮಾನ ಮಾಡುವುದಾಗಿ ತಿಳಿಸಿದ್ದಾರೆ. ಕರುಣಾಕರ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಕೂಡ ಸ್ಥಳಕ್ಕೆ ಆಗಮಿಸಿ ನೀರು ಪಾಲಾದವರನ್ನು ಹುಡುಕುವ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications