ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲ್ ಪೀಡಿತರಿಗೆ ರಾಹುಲ್ ಗಾಂಧಿ ಸಾಂತ್ವನ

|
Google Oneindia Kannada News

Rahul Gandhi
ರಾಂಚಿ, ಅ. 16 : ಇತ್ತೀಚೆಗೆ ಮಾವೋವಾದಿಗಳ ದಾಳಿಗೆ ಬಲಿಯಾದ ಇನ್ಸ್ ಪೆಕ್ಟರ್ ಫ್ರಾನ್ಸಿಸ್ ಇಂದುವರ್ ಅವರ ಮನೆಗೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ, ಬುಡಕಟ್ಟು ಜನಾಂಗದವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅತ್ಮಾಹುತಿ ದಾಳಿಯಲ್ಲಿ ನಾನು ತಂದೆಯನ್ನು ಕಳೆದುಕೊಂಡಿದ್ದೇನೆ. ತಂದೆಯನ್ನು ಕಳೆದುಕೊಂಡ ನೋವನ್ನೂ ಅನುಭವಿಸಿದ್ದೇನೆ. ಯಾವ ಕಾರಣಕ್ಕೂ ಭಯಪಡಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಇನ್ಸ್ ಪೆಕ್ಟರ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ರಾಹುಲ್ ಗಾಂಧಿ ಸುಮಾರು 20 ನಿಮಿಷ ಅವರ ಮನೆಯಲ್ಲಿ ಕಳೆದರು.

ಮಾವೋವಾದಿ ಉಗ್ರಗಾಮಿಗಳ ಉಪಟಳವನ್ನು ನಿಯಂತ್ರಿಸಲು ರಾಜ್ಯ ಸರಕಾರ ಪರಿಣಾಮಕಾರಿ ಕ್ರಮಕೈಗೊಳ್ಳಬೇಕು. ಉಗ್ರಗಾಮಿಗಳ ಉಪಟಳ ನಿಯಂತ್ರಿಸಬೇಕಾದರೆ ರಾಜ್ಯ ಸರಕಾರ ಜನರ ವಿಶ್ವಾಸವನ್ನು ಗಳಿಸಬೇಕು. ಮುಖ್ಯವಾಗಿ ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ, ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜಾರ್ಖಂಡ್ ರಾಜ್ಯವಾಗಿ 10 ವರ್ಷಗಳು ಸಂದಿವೆ. ಆದರೆ, ರಾಜ್ಯದ ಶೇ.82 ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದಿರುವುದು ಶೋಚನೀಯ ಸಂಗತಿ. ಕನಿಷ್ಟ ಶೇ.45 ರಷ್ಟು ಪ್ರದೇಶಗಳ ಜನರು ಬಡತನ ರೇಖೆಗಿಂತ ಕೆಳಮಟ್ಟದ ಜೀವನ ನಡೆಸುತ್ತಿದ್ದಾರೆ. ಇದರಿಂದಾಗಿ ನಕ್ಸಲ್ ಹಾವಳಿ ಹೆಚ್ಚಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಜಾರ್ಖಂಡ್ ನ ಹಜಾರಿಬಾಗ್ ಲೋಕಸಭೆ ಕ್ಷೇತ್ರದ ಸಂಸದ ಯಶವಂತ್ ಸಿನ್ಹಾ ಅವರು ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಲೇಖನ ಬರೆದಿದ್ದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X