ಕೊಡಗಿನ ಮುತ್ತಮ್ಮ ಇಂದು ಅಂತ್ಯಕ್ರಿಯೆ

1924ರ ಜ.24 ರಂದು ಹೈಸೊಡ್ಲೂರು ಗ್ರಾಮದಲ್ಲಿ ಜನಿಸಿದ ಮುತ್ತಮ್ಮ ಅರಣ್ಯ ಸಂರಕ್ಷಣಾಧಿಕಾರಿ ಬೆಳ್ಯಪ್ಪ ಅವರ ಪುತ್ರಿ. 1948 ರಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಬರೆದ ಪ್ರಥಮ ಭಾರತೀಯ ಮಹಿಳೆ. 1949 ರಲ್ಲಿ ಇಂಡಿಯನ್ ಫಾರಿನ್ ಸರ್ವಿಸ್‌ಗೆ ಸೇರ್ಪಡೆಗೊಂಡು ಸೈಪ್ರಸ್ ಸೇರಿದಂತೆ ನಾನಾ ದೇಶಗಳ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದರು.
ಸರಕಾರಿ ಕಚೇರಿಗಳಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತದೆ ಎನ್ನುವುದು ಅವರ ಪ್ರಮುಖ ವೇದನೆ ಮತ್ತು ಆಪಾದನೆ ಆಗಿತ್ತು. ಮಹಿಳೆ ಎಂಬ ಕಾರಣದಿಂದಲೆ ತಮಗೆ ಭಡ್ತಿ ನೀಡದೆ ಪುರುಷ ಅಧಿಕಾರಿಗಳು ಗೋಳು ಹೊಯ್ದುಕೊಳ್ಳುತ್ತಿದ್ದರು ಎಂದು ಅವರ ತಮ್ಮ ಪ್ರಬಂಧಗಳಲ್ಲಿ ಬರೆದುಕೊಂಡಿದ್ದಾರೆ.
'Slain by the System -India's Real Crisis' ಶೀರ್ಷಿಕೆಯಲ್ಲಿ ಅವರು ಲೇಖಿಸಿದ ಕೃತಿ 2003 ರಲ್ಲಿ ಪ್ರಕಟವಾಗಿತ್ತು. ವಿದೇಶಾಂಗ ಖಾತೆಯಲ್ಲಿ ನಾನಿದ್ದಷ್ಟೂ ದಿವಸ ಮಹಿಳಾ ವಿರೋಧಿ ಜನರೊಂದಿಗೆ ಘರ್ಷಣೆ ನಡೆಸುವುದೇ ಆಗಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.
ಸರಳ ಜೀವಿಯಾದ ಇವರಿಗೆ ಕೊಡವ ಆಚಾರ, ವಿಚಾರ, ಸಂಸ್ಕೃತಿಯ ಬಗ್ಗೆ ಕಾಳಜಿ ಇತ್ತು.ಕೊಡವ ಅಡುಗೆ ಬಗೆಗೂ ಅವರು ಕೃತಿ ರಚಿಸಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮುತ್ತಮ್ಮ ದಿಲ್ಲಿಯಲ್ಲಿದ್ದ ಕೋಟ್ಯಂತರ ರೂ. ಬೆಲೆಬಾಳುವ ಜಾಗವನ್ನು ಮದರ್ ಥೆರೆಸಾ ಫೌಂಡೇಷನ್‌ಗೆ ದಾನವಾಗಿ ನೀಡಿದರು. ವೀರಾಜಪೇಟೆ ಕಾವೇರಿ ಕಾಲೇಜಿಗೆ 25 ಲಕ್ಷ ರೂ, ಗೋಣಿಕೊಪ್ಪಲು ಪ್ರಾಥಮಿಕ ಶಾಲೆಗೆ 10 ಲಕ್ಷ ರೂ. ದೇಣಿಗೆ ನೀಡಿ ಜಿಲ್ಲೆಯಲ್ಲಿ ವಿದ್ಯಾಕ್ಷೇತ್ರದ ಅಭಿವೃದಿಗೆ ಶ್ರಮಿಸಿದ್ದರು. ಮೃತರ ಅಂತ್ಯಕ್ರಿಯೆ ಗುರುವಾರ ಸಂಜೆ ಬೆಂಗಳೂರಿನ ವಿಲ್ಸನ್ ಗಾರ್ಡ್ ಚಿತಾಗಾರದಲ್ಲಿ ನಡೆಯಲಿದೆ.
(ಏಜೆನ್ಸೀಸ್)












Click it and Unblock the Notifications