ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮಖಂಡಿ ನೆರೆ ಸಂತ್ರಸ್ತರಿಗೆ ನೆರವಾದ ಐಟಿ ಸಂಸ್ಥೆ

|
Google Oneindia Kannada News

Flood relief service by Total OutSource
ಬೆಂಗಳೂರು, ಅ. 15 : ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ರಾಜ್ಯದ ರಾಜಧಾನಿಯಲ್ಲಿ ನೆಲೆಯೂರಿರುವ ಅನೇಕ ಸಾಫ್ಟ್ ವೇರ್ ದಿಗ್ಗಜ ಕಂಪನಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡಿವೆ. ಕೆಲ ಕಂಪನಿಗಳು ತಾವೇ ಸ್ವತಃ ಉತ್ತರ ಕರ್ನಾಟಕಕ್ಕೆ ಹೋಗಿ, ಅಲ್ಲಿನ ಜನರ ಅಗತ್ಯಗನುಗುಣವಾಗಿ ತನು, ಮನ, ಧನವನ್ನು ಅರ್ಪಿಸಿ ಬಂದಿವೆ. ಅಂತಹುದೇ ಕಂಪನಿಗಳಲ್ಲೊಂದು ಮಾಹಿತಿ ತಂತ್ರಜ್ಞಾನ ಪೂರಕ ಸಂಸ್ಥೆ ಟೋಟಲ್ ಔಟ್ ಸೋರ್ಸ್.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಡಿಹುಡಿ, ಚಿಕ್ಕಲಗಿ ಮತ್ತು ರಹಿಮತ್ ಪುರದ ಗ್ರಾಮವಾಸಿಗಳಿಗೆ ಹಣ, ಆಹಾರಧಾನ್ಯ, ಬಟ್ಟೆಬರೆ ಮುಂತಾದವುಗಳನ್ನು ನೀಡಿ ಬಂದಿದೆ. ಅಲ್ಲಿನ ಜನರ ಅಗತ್ಯಗಳನ್ನು ಮೊದಲೇ ಅಭ್ಯಸಿಸಿ ಬಂದ ಟೋಟಲ್ ಔಟ್ ಸೋರ್ಸ್ ಸಂಸ್ಥೆಯ ಐವರ ತಂಡ ಅಕ್ಟೋಬರ್ 10ರಂದು ಅಲ್ಲಿಗೆ ತೆರಳಿ ಅಡಿಹುಡಿ, ಚಿಕ್ಕಲಗಿ ಗ್ರಾಮದ 70 ಕುಟುಂಬಗಳು ಮತ್ತು ರಹಿಮತ್ ಪುರದ 60 ಕುಟುಂಬದ ಸದಸ್ಯರಿಗೆ ಹಣ, ಆಹಾರಧಾನ್ಯಗಳನ್ನು ಹಂಚಿ ಬಂದಿದೆ.

ಒಂದು ತಿಂಗಳಿಗಾಗುವಷ್ಟು ಆಹಾರಧಾನ್ಯ, ಆಶ್ರಯಕ್ಕಾಗಿ ತಾಡಪಾಲ್, ಹೊದಿಕೆ, ಬ್ರೆಡ್ ಮುಂತಾದ ಸಾಮಗ್ರಿಗಳನ್ನು ಕೂಡ ಜನರಿಗೆ ನೀಡಿದೆ. ಸಹಾಯದ ನೆರವು ನೇರವಾಗಿ ಸಂತ್ರಸ್ತರಿಗೆ ತಲುಪಬೇಕೆಂಬ ಅಪೇಕ್ಷೆಯಿಂದ ಸ್ವತಃ ತಾವೇ ಗ್ರಾಮಗಳಿಗೆ ತೆರಳಿ ಕರ್ತವ್ಯ ನಿರ್ವಹಿಸಿದ್ದಾಗಿ ಸಂಸ್ಥೆ ಹೇಳಿದೆ. ಪರಿಹಾರ ತಂಡದಲ್ಲಿ ಮಣಿ, ಶ್ರೀಗಿರಿ, ವಿಜಯೇಂದ್ರ, ಸದಾಶಿವ ಮತ್ತು ಸಂಗಪ್ಪ ಭಾಗವಹಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X