ನೆರೆ ತೆರಿಗೆಗೆ ಸಿದ್ಧರಾಮಯ್ಯ ತೀವ್ರ ವಿರೋಧ

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಹೊಸದಾಗಿ ಹೆಚ್ಚುವರಿ ತೆರಿಗೆ ಹಾಕಿದರೆ ಮತ್ತಷ್ಟು ಬೆಲೆ ಏರಿಕೆಯಾಗಿ ಹಣ ದುಬ್ಬರಕ್ಕೆ ಕಾರಣಲಾಗುತ್ತಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು ಹೊಸ ತೆರಿಗೆಯಿಂದ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಯಾವುದೇ ಕಾರಣಕ್ಕೂ ನೆರೆ ಸೆಸ್ ಹಾಕಬಾರದು ಎಂದರು.
ತೆರಿಗೆ ಸೋರಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಸಂಪನ್ಮೂಲ ಕ್ರೂಢೀಕರಿಸುವುದು ಕಷ್ಟವಾಗುವುದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ತೆರಿಗೆ ಸೋರಿಕೆ ತಡೆಗೆ ಅಗತ್ಯ ಕ್ರಮ ಕೈಗೊಂಡಿಲ್ಲ. ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ ಸಾಕಷ್ಟು ತೆರಿಗೆ ಹಣ ಹರಿದು ಬರುತ್ತಿತ್ತು. ಸೋರಿಕೆ ತಡೆಯಲಾಗದೆ ಹೊಸ ತೆರಿಗೆ ಹಾಕುವುದಾಗಿ ಹೇಳುತ್ತಿರುವುದು ಸಾಮರ್ಥ್ಯ ಇಲ್ಲದಿರುವುದನ್ನು ತೋರಿಸುತ್ತದೆ ಎಂದು ಸಿದ್ಧರಾಮಯ್ಯ ಅಕ್ರೋಶ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications