ಎಸ್ ಟಿಗಳಾದ ಹಾಲಕ್ಕಿ ಒಕ್ಕಲಿಗ ಜನಾಂಗ?

ಭಾನುವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಅವರು, ಹಾಲಕ್ಕಿ ಜನಾಂಗವನ್ನು ಎಸ್ ಟಿ ವರ್ಗಕ್ಕೆ ಸೇರುವ ಸಾಧ್ಯತೆಯಿದೆ. ಈ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಪತ್ರಕಳಿಸಲಾಗಿದೆ.ಸದ್ಯ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುವ ಹಾಲಕ್ಕಿ ಒಕ್ಕಲಿಗರು, ಇತರೆ ಹಿಂದುಳಿದ ವರ್ಗಗಳ ಪ್ರವರ್ಗ -1ಕ್ಕೆ ಸೇರಿದ್ದಾರೆ.
ಸಂಪುಟದ ಇತರೆ ನಿರ್ಣಯಗಳು:
*ಮಂಗಳೂರಿನ ಜಿಲ್ಲಾ ನ್ಯಾಯಾಲಯ ಕಟ್ಟಡಸಂಕೀರ್ಣದ ಮೂರನೇ ಹಂತದ ಕಾಮಗಾರಿಗೆ 6 ಕೋಟಿ ರು ಬಿಡುಗಡೆ.
*ಮೊರಾರ್ಜಿ ದೇಸಾಯಿ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಉಸ್ತುವಾರಿ ನೋಡಿಕೊಳ್ಳಲು ಜಿಲ್ಲಾದಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಮಟ್ಟದ ಸಮಿತಿ ರಚನೆ.
*ಬರ ಪೀಡಿತ ಪ್ರದೇಶಗಳ ಸಣ್ಣ ನೀರಾವರಿ ಯೋಜನೆಗಳ ಕಾಮಗಾರಿಗೆ 90.06ಕೋಟಿ ರು ಮಂಜೂರು.
*ಧಾರವಾಡದ ಎನ್ ಎ ಮುತ್ತಣ್ಣ ಪೊಲೀಸ್ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರು ಬಿಡುಗಡೆ.
(ದಟ್ಸ್ ಕನ್ನಡವಾರ್ತೆ)











Click it and Unblock the Notifications