ಕಾಬೂಲ್ ಸ್ಫೋಟದ ಹೊಣೆಹೊತ್ತ ತಾಲಿಬಾನ್

ಬಾಂಬ್ ಸ್ಫೋಟದ ಕೃತ್ಯವನ್ನು ತಾಲಿಬಾನ್ ಉಗ್ರರ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗದ್ದು, ಭಾರತೀಯ ರಾಯಭಾರಿ ಕಚೇರಿ ಗುರಿಯಾಗಿಸಿಕೊಂಡು ಕಾರಿನಲ್ಲಿ ಪ್ರಬಲ ಸ್ಫೋಟಕ ಸಾಮಗ್ರಿಗಳನ್ನು ಇರಿಸಿ ಸ್ಫೋಟಗೊಳಿಸಲಾಗಿದೆ. ಅಪಘಾನಿಸ್ತಾನದಲ್ಲಿರುವ ಸಂಘಟನೆಯ ಕಾರ್ಯಕರ್ತರು ಈ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಬೀವುಲ್ಲಾ ಮುಜಾಹೀದ್ ಹೇಳಿಕೊಂಡಿದ್ದಾನೆ.
ಕಾಬೂಲ್ ನ ಭಾರತೀಯ ರಾಯಭಾರಿ ಕಚೇರಿ ಬಳಿ ನಡೆದಿರುವ ಬಾಂಬ್ ಸ್ಫೋಟಕ್ಕೆ ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗಿದೆ. ಭಾರತೀಯ ವಿದೇಶಾಂಗ ಇಲಾಖೆ ಕಾರ್ಯದರ್ಶಿ ನಿರುಪಮಾ ರಾವ್ ಸ್ಪಷ್ಟನೆ ನೀಡಿದ್ದು, ಕಾಬೂಲ್ ನ ಭಾರತೀಯ ರಾಯಭಾರಿ ಕಚೇರಿ ಬಳಿ ನಡೆದಿದೆ. ಆದರೆ, ಭಾರತೀಯ ಸಿಬ್ಬಂದಿಗಳಿಗೆ ಯಾವುದೇ ಅಪಾಯ ಉಂಟಾಗಿಲ್ಲ ಎಂದು ಹೇಳಿಕೆ ನೀಡಿದ್ದರು. ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದು, ಸುಮಾರು 83 ಮಂದಿ ಗಾಯಗೊಂಡಿದ್ದಾರೆ.
(ಏಜನ್ಸೀಸ್)












Click it and Unblock the Notifications