ಭಾರತವನ್ನು ಕೂಡಿಸಬೇಕಿದೆ : ರಾಹುಲ್ ಗಾಂಧಿ

ಈ ಚುನಾವಣೆಯಲ್ಲಿ ಎರಡು ವಿಷಯಗಳು ಪ್ರಮುಖವಾಗಿವೆ. ಹಿಂದುಳಿದ ಭಾರತ ಮತ್ತು ಮುಂದುವರೆದ ಭಾರತ ಎಂದು ಪ್ರತಿಪಕ್ಷಗಳು ವಿಂಗಡಿಸಿವೆ. ಪ್ರತಿಪಕ್ಷಗಳು ಶೈನಿಂಗ್ ಭಾರತಕ್ಕೆ ಅದ್ಯತೆ ನೀಡಿದೆ. ಅಂದರೆ ಮುಂದುವರೆದ ವರ್ಗಗಳಿಗೆ ಮಣೆ ಹಾಕುತ್ತಿದೆ. ಆದರೆ, ಕಾಂಗ್ರೆಸ್ ಮೈತ್ರಿಕೂಟ ಮಾತ್ರ ಹಿಂದುಳಿದ ಭಾರತವನ್ನು ಮುಂದುವರೆದ ಭಾರತದೊಂದಿಗೆ ಜೋಡಣೆ ಮಾಡಲು ನಿರ್ಧರಿಸಿದೆ ಎಂದು ಪ್ರತಿಪಕ್ಷಗಳನ್ನು ಟೀಕಿಸಿದರು.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯುಪಿಎ ಸರಕಾರದ ಪ್ರಮುಖ ಯೋಜನೆ. ಬಡವರಿಗೆ ಕೆಲಸ ನೀಡುವುದು ಕಾಂಗ್ರೆಸ್ ಪಕ್ಷದ ಪ್ರಮುಖ ಗುರಿ. ಉದ್ಯೋಗ ಖಾತ್ರಿ ಯೋಜನೆ ಆರಂಭಿಸಿದಾಗ ಬಿಜೆಪಿ ಪಕ್ಷ ಭಾರಿ ವಿರೋಧ ವ್ಯಕ್ತಪಡಿಸಿತು. ಅವರಿಗೆ ಬಡವರ ಕೈಗೆ ಕೆಲಸ ಕೊಡುವುದಕ್ಕಿಂತ ಶ್ರೀಮಂತರ ಹಿತಾಸಕ್ತಿ ಕಾಪಾಡುವುದೇ ಮುಖ್ಯ ಎಂದು ರಾಹುಲ್ ತರಾಟೆ ತೆಗೆದುಕೊಂಡರು.
(ಏಜನ್ಸೀಸ್)












Click it and Unblock the Notifications