ಕೇಂದ್ರ ಪರಿಹಾರ : ರಾಜ್ಯಕ್ಕೆ ಮತ್ತೆ ಕಮ್ಮಿ ಹಣ

Rain hovac
ನವದೆಹಲಿ, ಅ. 7 : ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ ಸಾಕಷ್ಟು ಪ್ರಮಾಣದ ಆಸ್ತಿ ಪಾಸ್ತಿ, ಮತ್ತು ಪ್ರಮಾಣ ನಷ್ಟ ಉಂಟಾಗಿದ್ದು, ಮಂಗಳವಾರ ಕೇಂದ್ರ ಸರಕಾರ ಎರಡನೇ ಹಂತದ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಎರಡನೇ ಹಂತದ ಪರಿಹಾರದಲ್ಲೂ ಕೇಂದ್ರ ಸರಕಾರ ತಾರತಮ್ಯ ಅನುಸರಿಸಿರುವುದು ಸಾಬೀತಾಗಿದೆ.

ಅತಿವೃಷ್ಟಿಗೆ ತುತ್ತಾಗಿರುವ ಈ ಎರಡು ರಾಜ್ಯಗಳಿಗೆ ಪ್ರಕೃತಿ ವಿಕೋಪ ನಿಧಿಯಡಿ ಒಟ್ಟು 209.1 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಆಂಧ್ರಪ್ರದೇಶಕ್ಕೆ 156.84 ಕೋಟಿ ರುಪಾಯಿಗಳಾದರೆ, ಕರ್ನಾಟಕಕ್ಕೆ ನೀಡಿರುವುದು ಬರೀ 52.26 ಕೋಟಿ ರುಪಾಯಿಗಳು ಮಾತ್ರ. ಇದರಿಂದ ಕೇಂದ್ರ ಸರಕಾರ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯ ಮಾಡಿದಂತಾಗಿದೆ.

ಮಂಗಳವಾರ ನವದೆಹಲಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಉಭಯ ರಾಜ್ಯಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಹಿರಿಯ ಅಧಿಕಾರಿ ಕೆಎಂ ಚಂದ್ರಶೇಖರ್ ನೇತೃತ್ವ ತಂಡ ಈ ನಿರ್ಧಾರ ಕೈಗೊಂಡಿದೆ. ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ನೀಡಬೇಕಿದ್ದ ಪ್ರಕೃತಿ ವಿಕೋಪ ನಿಧಿಯನ್ನು ತುರ್ತಾಗಿ ಬಿಡುಗಡೆ ಮಾಡಲಾಗಿದೆ ಎಂದು ಚಂದ್ರಶೇಖರ್ ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ 10 ಸಾವಿರ ಕೋಟಿ ಪರಿಹಾರ ಧನ ಕೇಳಿದ್ದರು, ರಾಜ್ಯದಲ್ಲಿ ಒಟ್ಟು 16,500 ಕೋಟಿ ರುಪಾಯಿಗಳಷ್ಟು ನಷ್ಟ ಉಂಟಾಗಿದೆ. ಈಗಾಗಲೇ ಕೊಟ್ಟಿರುವ ಕೇಂದ್ರ ಅನುದಾನವನ್ನು ಸರಿಯಾಗಿ ಬಳಿಸಿ, ಮತ್ತೆ ಕೇಳಿದರೆ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಗೃಹ ಸಚಿವ ಪಿ ಚಿದಂಬರಂ ಹೇಳಿದ್ದಾರೆ. ಮೊದಲ ಹಂತದಲ್ಲಿ ಆಂಧ್ರಕ್ಕೆ 420 ಕೋಟಿ ರುಪಾಯಿ, ಕರ್ನಾಟಕಕ್ಕೆ 140 ಕೋಟಿ ರುಪಾಯಿ ಬಿಡುಗಡೆ ಮಾಡಿದ್ದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+