ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದಲ್ಲಿ ಭೂಕಂಪ : 467 ಸಾವು

|
Google Oneindia Kannada News

Quake toll in western Indonesia reaches 467
ಜಕಾರ್ತ, ಅ. 1 : 5 ವರ್ಷದ ಹಿಂದೆ ಸಾವಿರಾರು ಮಂದಿಯ ಪ್ರಾಣ ತಿಂದಿದ್ದ ಸುನಾಮಿ ಮತ್ತೆ ಅಬ್ಬರಿಸಿದೆ. ಇಂಡೋನೇಷ್ಯಾದ ಸುಮಾತ್ರ ನಡುಗಡ್ಡೆಯಲ್ಲಿ ಸಂಭವಿಸಿದ ಭೂಕಂಪನದಿಂದ ಸುಮಾರು 467 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

ನ್ಯೂಜಿಲ್ಯಾಂಡ್ ಹಾಗೂ ಅಮೆರಿಕ ನಡುವಿನ ದಕ್ಷಿಣ ಫೆಸಿಪಿಕ್ ಸಮುದ್ರದಲ್ಲಿ ಬುಧವಾರ ಎದ್ದ ದೈತ್ಯ ಅಲೆಗಳಲ್ಲಿ 150ಕ್ಕೂ ಹೆಚ್ಚು ಜನರು ಕೊಚ್ಚಿ ಹೋಗಿದ್ದಾರೆ. ಇದೇ ವೇಳೆ ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಸಂಭವಿಸಿದ ಭೂಕಂಪನಕ್ಕೆ ಕನಿಷ್ಠ 75 ಮಂದಿ ಬಲಿಯಾಗಿದ್ದಾರೆ. ಸಾವಿರಾರು ಮಂದಿ ಅವಿಶೇಷದಡಿ ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಕ್ಷಿಣ ಫೆಸಿಪಿಕ್ ಪ್ರದೇಶದ ಸಮುದ್ರದಲ್ಲಿ ರಿಕ್ಟರ್ ಮಾಪಕದಲ್ಲಿ 8 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದ್ದೇ ಸುಮವೋ ದ್ವೀಪಕ್ಕೆ ಸುನಾಮಿ ಅಪ್ಪಳಿಸಲು ಕಾರಣವಾಗಿದೆ. ಸರಕಾರಿ ಮಾಹಿತಿಗಳ ಪ್ರಕಾರ 467 ಮಂದಿ ಸಾವನ್ನಪ್ಪಿದ್ದಾರೆ. 421 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X