ಮಹಾರಾಷ್ಟ್ರ : ಪ್ರತಿಭಾ ಪಾಟೀಲ್ ಮಗ ರಾಜೇಂದ್ರ ಸ್ಪರ್ಧೆ

Pratibha Patil
ಮುಂಬೈ, ಸೆ. 30 : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಮಗ ರಾಜೇಂದ್ರ ಅಲಿಯಾಸ್ ರಾವ್ ಸಾಹೇಬ್ ಶೇಖಾವತ್ ಸ್ಪರ್ಧಿಸಿದ್ದಾರೆ. ಇವರ ಒಟ್ಟು ಆಸ್ತಿ 6.68 ಕೋಟಿ ರುಪಾಯಿಗಳು.

ಅಮರಾವತಿ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸುವಾಗ ಅವರು ನೀಡಿರುವ ಅಫಿಡವಿಟ್ ನಲ್ಲಿ ಈ ವಿವರಗಳಿವೆ. ಕಾಂಗ್ರೆಸ್ ಟಿಕೆಟ್ ಸಿಗದೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಇಂದನ ಸಚಿವ ಸುನೀಲ್ ದೇಶಮುಖ್ ಅವರ ಆಸ್ತಿ 2.35 ಕೋಟಿ ರುಪಾಯಿಗಳು. ಕಾಂಗ್ರೆಸ್ ಹೈಕಮಾಂಡ್ ಗೆ ಸೆಡ್ಡು ಹೊಡೆದು ರಾಷ್ಟ್ರಪಚಿ ಮಗನ ವಿರುದ್ಧ ಅಮರಾವತಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸುನೀಲ್ ದೇಶಮುಖ್ ಈಗಾಗಲೇ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕೊನೆಯ ದಿನವೂ ಅವರು ನಾಮಪತ್ರ ಹಿಂದಕ್ಕೆ ಪಡೆಯಲಿಲ್ಲ. 2 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರಿಂದ ರಾಜೇಂದ್ರ ಶೆಖಾವತ್ ಅವರಿಗೆ ತೀವ್ರ ಪೈಪೋಟಿ ಎದುರಾಗುವುದು ಖಚಿತವಾಗಿದೆ.

ಇನ್ನೊಂದಡೆ ರಾಹುಲ್ ಗಾಂಧಿ ಮೂಲಕ ದೇಶದಲ್ಲಿ ಪ್ರಸಿದ್ದ ಪಡೆದಿದ್ದ ಕಲಾವತಿ ಅವರು ತಮ್ಮ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ವಿದರ್ಭದಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೇ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರ ಅಳಿಯ ನಾಮಪತ್ರ ಹಿಂಪಡೆಯದಿದ್ದರೆ ಅತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ್ದರಿಂದ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆ ಮುನ್ನ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ವಿದರ್ಭಕ್ಕೆ ಭೇಟಿ ನೀಡಿದ ಸಮಯದಲ್ಲಿ ಕಲಾವತಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಕಲಾವತಿ ಪತಿ ಸಾಲದ ಬಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+