ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಪೋಸಿಸ್ ಜಿಇಸಿ ಉದ್ಘಾಟಿಸಿದ ಸೋನಿಯಾ ಗಾಂಧಿ

By Staff
|
Google Oneindia Kannada News

Sonia Gandhi
ಮೈಸೂರು, ಸೆ. 15 : ಯುವಪ್ರಧಾನಿ ಎಂದೇ ಖ್ಯಾತಿ ಹೊಂದಿದ್ದ ದಿವಂಗತ ರಾಜೀವ ಗಾಂಧಿ ಅವರು ಕಂಡ ಕನಸು ಇಂದು ಹೆಮ್ಮರವಾಗಿ ಬೆಳೆದಿದೆ. ಇನ್ಫೋಸಿಸ್, ವಿಪ್ರೋ ಸೇರಿ ಭಾರತದ ಅನೇಕ ಕಂಪನಿಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಲು ರಾಜೀವಗಾಂಧಿ ಮಾಡಿದ ಕ್ರಾಂತಿಯೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.

ನಗರದಲ್ಲಿ ಇನ್ಫೋಸಿಸ್ ಕಂಪನಿಯ ಜಾಗತಿಕ ಶಿಕ್ಷಣ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಾಜೀವಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ದೇಶದ ಯುವಜನತೆಗೆ ಕಂಪ್ಯೂಟರ್ ಪರಿಚಯಿಸಿದರು ಎಂದರು. ಕಂಪ್ಯೂಟರ್ ಕ್ರಾಂತಿ ಮಾಡುವೆ ಎಂದ ರಾಜೀವ ಗಾಂಧಿ ಅವರಿಗೆ ಪ್ರತಿಪಕ್ಷಗಳು ಸೇರಿ ಅನೇಕರು ವಿರೋಧಿಸಿದರು. ಅಂದು ಅವರು ಕಂಡ ಕನಸು ನನಸಾಗಿದೆ. ಇನ್ಫೋಸಿಸ್ ವಿಪ್ರೋ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವರ ದೂರದೃಷ್ಟಿಯೇ ಕಾರಣ ಎಂದು ಸೋನಿಯಾ ಗಾಂಧಿ ಹೇಳಿದರು.

ಇನ್ಫೋಸಿಸ್ ಕಂಪನಿಯ ಬೆಳವಣಿಗೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ ಅವರು, ಮನಸ್ಸಿದ್ದರೆ ಮಾರ್ಗವಿದೆ ಎನ್ನುವುದು ಇನ್ಪೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಅವರೇ ಸ್ಪಷ್ಟ ನಿದರ್ಶನ. ಅವರ ವೃತ್ತಿಪರತೆ, ಕಾರ್ಯಪರತೆ, ಶ್ರದ್ಧೆ ಎಲ್ಲವೂ ಸೇರಿದ್ದರಿಂದ ಇನ್ಫೋಸಿಸ್ ಇಂದು ಭಾರತದ ಹೆಮ್ಮೆಯ ತಂತ್ರಜ್ಞಾನ ಕಂಪನಿಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಎನ್ ಆರ್ ನಾರಾಯಣಮೂರ್ತಿ. ಸುಧಾಮೂರ್ತಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್ ಗೋಪಾಲಕೃಷ್ಣ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X