ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಗುಜರಾತ್ ಕ್ರಿಕೆಟ್ ಮಂಡಳಿ ನೂತನ ಅಧ್ಯಕ್ಷ

By Staff
|
Google Oneindia Kannada News

Narendra Modi
ಅಹಮದಾಬಾದ್, ಸೆ. 15 : ಕಳೆದ 6 ವರ್ಷಗಳಿಂದ ಗುಜರಾತ್ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಇದೀಗ ಗುಜರಾತ್ ಕ್ರಿಕೆಟ್ ಮಂಡಳಿ ನೂತನ ಅಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ. ಇಂದು ಮೋಟೆರಾ ಮೈದಾನದಲ್ಲಿ ನಡೆದ ಮಂಡಳಿಯ ಉನ್ನತಮಟ್ಟದ ಸಭೆಯಲ್ಲಿ ಮೋದಿ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಗುಜರಾತ್ ಹಣಕಾಸು ಸಚಿವ ಅಮಿತ್ ಶಾ ಅವರನ್ನು ಉಪಾಧ್ಯಕ್ಷರನ್ನಾಗಿ ಆರಿಸಲಾಯಿತು. ಕಳೆದ ಅನೇಕ ವರ್ಷಗಳಿಂದ ಈ ಹುದ್ದೆಯನ್ನು ಕಾಂಗ್ರೆಸ್ ಮುಖಂಡರು ಅಲಂಕರಿಸಿದ್ದರು.

ರಾಜಕಾರಣಿ ಕ್ರಿಕೆಟ್ ಮಂಡಳಿಗಳ ಅಧ್ಯಕ್ಷರಾಗುವುದು ಹೊಸತೇನಲ್ಲ. ಕೇಂದ್ರ ಸಚಿವ ಶರದ್ ಪವಾರ್ ಬಿಬಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅರುಣ್ ಜೈಟ್ಲಿ ದೆಹಲಿ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಲಿಗೆ ಇದೀಗ ಮೋದಿ ಸೇರ್ಪಡೆಯಾಗಿದ್ದಾರೆ. ಈವರೆಗೊ ಕಾಂಗ್ರೆಸ್ ಮುಖಂಡ ನರಹರಿ ಅಮೀನ್ ಗುಜರಾತ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದ್ದರಿಂದ ಕಳೆದ ಎರಡು ವರ್ಷಗಳಿಂದ ಅಧ್ಯಕ್ಷಗಾದಿ ಏರಲು ಕಾಂಗ್ರೆಸ್ ನ ನರಹರಿ ಅಮೀನ್ ಮತ್ತು ಗೃಹ ಸಚಿವ ಅಮಿತ್ ಶಾ ನಡುವೆ ಸಮರವೇ ಏರ್ಪಟ್ಟಿತ್ತು. ಇತ್ತೀಚೆಗೆ ನಡೆದ ಕ್ರಿಕೆಟ್ ಮಂಡಳಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಏಳು ಉಪಚುನಾವಣೆ ಕ್ಷೇತ್ರದಲ್ಲಿ ಬಿಜೆಪಿ 5 ರಲ್ಲಿ ಗೆಲುವು ಸಾಧಿಸಿ ಮತ್ತೆ ತನ್ನ ಪಾರಮ್ಯ ಸಾಬೀತುಪಡಿಸಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X