ನಾಡಿನ ಒಳಿತಿಗಾಗಿ ಸಲಹೆ : ರಾಜ್ಯಪಾಲ
ಬೆಂಗಳೂರು,
ಸೆ. 10 : ಇದು ನಮ್ಮ ಸರಕಾರ, ನಾನೂ ಈ ಸರಕಾರದ ಭಾಗ. ನಾಡಿನ ಜನತೆಗೆ ಈ ಸರಕಾರ ಉತ್ತಮ ಸವಲತ್ತು ಕಲ್ಪಿಸಿ ಶಾಂತಿ ಮತ್ತು ಸಮಾಧಾನ ನೆಲೆಗೊಳಿಸಲಿ ಎನ್ನುವ ಸದುದ್ದೇಶದಿಂದ ಸಲಹೆ ನೀಡಿದ್ದೆ ಎಂದು ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಹೇಳಿಕೆ ನೀಡಿದ್ದಾರೆ. id="toptextpromo">ಕಾರ್ಯಕ್ರಮವೊಂದರಲ್ಲಿ
ಭಾಗವಹಿಸಿದ್ದ ರಾಜ್ಯಪಾಲರು, ನಾಡಿನ ಜನತೆಯ ಬಗ್ಗೆ ಕಾಳಜಿ ಹೊಂದಿ ಸರಕಾರಕ್ಕೆ ಪತ್ರ ಬರೆದಿದ್ದೆ. ರಾಜ್ಯದಲ್ಲಿ ಶಾಂತಿ, ಸಮಾಧಾನ ನೆಲೆಸಿ ಜನರು ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ. ನಾನು ಪತ್ರದಲ್ಲಿ ಬರೆದಿರುವ ಒಂದು ಪದಕ್ಕೆ ಮಾತ್ರ ಮಾಧ್ಯಮಗಳು ಹೆಚ್ಚಿನ ಒತ್ತು ನೀಡಿ ಪ್ರಕಟಿಸಿದೆ ಎಂದು ಹೇಳಿಕೆ ನೀಡಿ ಕಾನೂನು ಸುವ್ಯವಸ್ಥೆ ಬಗ್ಗೆ ಸರಕಾರಕ್ಕೆ ಬರೆದಿರುವ ಕ್ರಮವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications