239344ysrರಾಜ್ಯ ಬಿಜೆಪಿ ಬಂಡಾಯದ ಹಿಂದೆ ಆಂಧ್ರ ಸಿಎಂ?/news/2009/06/03/andhra-cm-hand-in-karnataka-bjps-revolt.htmlಬೆಂಗಳೂರು, ಜೂ.3: ಯಾವಾಗ ಮುಖ್ಯಮಂತ್ರಿ ಯಡಿಯೂರಪ್ಪ ಬಳ್ಳಾರಿಯಲ್ಲಿ ಗಡಿ ಒತ್ತುವರಿ ಮಾಡಿಕೊಂಡಿರುವುದನ್ನು ಜಂಟಿ ಸಮೀಕ್ಷೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದರೋ ಅವಾಗಲೇ ಅವರ ಕುರ್ಚಿಗೆ ಸಂಚಕಾರ ಬಂದಿತ್ತೆ? ಪಕ್ಷದ ಕೆಲವೊಂದು ನಾಯಕರ ಪ್ರಕಾರ ಹೌದು. ಕಳೆದ ಒಂದು ವರ್ಷದಿಂದ ಭಿನ್ನಮತದಲ್ಲೂ ಒಗ್ಗಟ್ಟಿದೆ ಎಂಬುದನ್ನು ತೋರಿಸಿಕೊಳ್ಳುತ್ತಲೇ ಬಂದ ಬಿಜೆಪಿಯಲ್ಲಿ ದಿಢೀರನೇ ಬೆಂಕಿ ಹತ್ತಿಕೊಳ್ಳಲು ಇದೇ ಪ್ರಬಲ 37070http://kannada.oneindia.com/img/2009/06/03-rajashekara-reddy1.jpg239344ysrಕಾಣೆಯಾದ ಮುಖ್ಯಮಂತ್ರಿಗೆ ಅವಿರತ ಶೋಧ/news/2009/09/02/missing-cm-ysr-still-not-traced-situation-scary.htmlಹೈದರಾಬಾದ್, ಸೆ. 2 : ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಹಾಗೂ ಐದು ಮಂದಿ ಇದ್ದ ಬೆಲ್ 430 ಹೆಲಿಕ್ಯಾಪ್ಟರ್ ಸುಳಿವು ಸಿಕ್ಕಿಲ್ಲ. ಆಂಧ್ರಪ್ರದೇಶದಾದ್ಯಂತ ತಲ್ಲಣ ಉಂಟಾಗಿದ್ದು, ರಾಜಕೀಯ ನೇತಾರರು ಸೇರಿ ಜನರು ತೀವ್ರ ತಳಮಳಗೊಂಡಿದ್ದಾರೆ. ರೆಡ್ಡಿ ಶೋಧಕ್ಕಾಗಿ 5 ಸಾವಿರ ಸೈನಿಕರು, 5 ಸಿಆರ್ ಪಿಎಫ್ ತಂಡಗಳನ್ನು ಕೇಂದ್ರ ಸರಕಾರ ಕಳುಹಿಸಿದೆ. ಮುಖ್ಯಮಂತ್ರಿಗಳು ಬದುಕಿಬರಲಿ 38975http://kannada.oneindia.com/img/2009/09/02-ysr2.jpg239344ysrಹೆಲಿಕಾಫ್ಟರ್ ಪತ್ತೆ; ವೈಎಸ್ಸಾರ್ ಸ್ಥಿತಿ ಇನ್ನು ನಿಗೂಢ/news/2009/09/03/missing-chopper-traced-ysr-fate-uncertain.htmlಕರ್ನೂಲು, ಸೆ.3: ಇಪ್ಪತ್ತ್ತನಾಲ್ಕು ಗಂಟೆಗಳ ನಂತರ ಆಂಧ್ರ ಸಿಎಂ ವೈ ಎಸ್ ರಾಜಶೇಖರ ರೆಡ್ಡಿ ಅವರ ಹೆಲಿಕಾಫ್ಟರನ್ನು ಪತ್ತೆ ಹಚ್ಚಲಾಗಿದೆ. ಸಂತಜೂಟೂರು-ವೆಲುಗೋಡು ನಡುವಿನ ಬೆಟ್ಟದ(ರುದ್ರಕೋಟ ಬೆಟ್ಟ) ಮೇಲೆ ಕಾಫ್ಟರನ್ನು ವೈಮಾನಿಕ ದಳ ಇಂದು ಪತ್ತೆ ಹಚ್ಚಿತು. ಆದರೆ ಮುಖ್ಯಮಂತ್ರಿಯವರ ಮತ್ತು ಇದರಲ್ಲಿ ಪ್ರಯಾಣಿಸುತ್ತಿದ್ದವರ ಸ್ಥಿತಿಗತಿ ಬಗ್ಗೆ ಇನ್ನು ನಿಗೂಢವಾಗಿದೆ. ಹೆಲಿಕಾಫ್ಟರ್ ಅಪಘಾತಕ್ಕೀಡಾಗಿದೆಯೇ 38976http://kannada.oneindia.com/img/2009/09/03-ysr2.jpg239344ysrಆಂಧ್ರಪ್ರದೇಶ ಸಿಎಂ ವೈಎಸ್ ಆರ್ ದುರ್ಮರಣ/news/2009/09/03/ap-cm-ysr-and-crew-crushed-to-death.htmlರುದ್ರಕೋಡೋರು (ಚಿತ್ತೂರು), ಸೆ. 3 : ಆಂಧ್ರಪ್ರದೇಶ ರಾಜಕೀಯ ಇತಿಹಾಸದಲ್ಲಿ ಕೋಟೆ ಕಟ್ಟಿ ಮೆರೆದಿದ್ದ ಧೀಮಂತ ರಾಜಕೀಯ ಮುತ್ಸದ್ಧಿ ಮುಖ್ಯಮಂತ್ರಿ ವೈಎಸ್ ರಾಜಶೇಖರರೆಡ್ಡಿ ದುರಂತ ಮರಣ ಹೊಂದಿದ್ದಾರೆ. ಕಳೆದ 24 ಗಂಟೆಗಳ ಶೋಧಕಾರ್ಯಕ್ಕೆ ಕೊನೆಗೂ ಫಲಸಿಕ್ಕಿದ್ದು, ಹೆಲಿಕ್ಯಾಪ್ಟರ್ ನಲ್ಲಿದ್ದ ಐದೂ ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಿತ್ತೂರು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ತೆರಳುತ್ತಿದ್ದ ಅವರ 38977http://kannada.oneindia.com/img/2009/09/03-ysr2.jpg239344ysrಪಾದಯಾತ್ರೆಗೆ ಹೆಸರಾಗಿದ್ದರು ವೈಎಸ್ ಆರ್/news/2009/09/03/ap-cm-ys-rajashekara-reddys-and-paadayaatra.htmlಬೆಂಗಳೂರು, ಸೆ.3: ಡಾಕ್ಟರ್ ವೈ ಎಸ್ ರಾಜಶೇಖ ರೆಡ್ಡಿ ಹಲವಾರು ಪಾದಯಾತ್ರೆಗಳನ್ನು ಕೈಗೊಂಡು ಆಂಧ್ರದಾದ್ಯಂತ ಹೆಸರಾಗಿದ್ದರು. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವುದಕ್ಕೂಮುನ್ನ ಅವರು ಪಾದಯಾತ್ರೆಗಳ ಮೂಲಕ ಇಡೀ ರಾಜ್ಯದಲ್ಲಿ ಸುತ್ತಿದ್ದಾರೆ. 2003ರ ಮಧ್ಯ ಬೇಸಿಗೆಯಲ್ಲಿ 1400 ಕಿ.ಮೀಗಳ ಪಾದಾಯಾತ್ರೆಯನ್ನು ಕೈಗೊಂಡಿದ್ದರು. ಪಾದಯಾತ್ರೆ ಮೂಲಕ ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸಲು ಈ 38978http://kannada.oneindia.com/img/2009/09/03-ysr3.jpg123651suicideರ‌್ಯಾಗಿಂಗ್, ಆಂಧ್ರ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ/news/2009/03/13/ragging-ap-engineering-student-attempts-suicide.htmlಹೈದರಾಬಾದ್, ಮಾ. 13 : ಹಿಮಾಚಲ ಪ್ರದೇಶದ ವೈದ್ಯಕೀಯ ವಿದ್ಯಾರ್ಥಿ ರ‌್ಯಾಗಿಂಗ್ ಬಲಿಯಾದ ಸುದ್ದಿ ಇನ್ನೂ ಹಸಿರಿರುವಾಗಲೇ ಆಂಧ್ರಪ್ರದೇಶದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹಿರಿಯ ವಿದ್ಯಾರ್ಥಿನಿಗಳ ಕಿರುಕುಳ ತಾಳಲಾರದೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಗುರುವಾರ ಸಂಜೆ ಗುಂಟೂರು ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ನಡೆದಿದೆ.ಗುಂಟೂರಿನ ಬಾಪತ್ಲಾ ಪಟ್ಟಣದಲ್ಲಿರುವ ಸರ್ಕಾರಿ ಕೃಷಿ ಇಂಜಿನಿಯರಿಂಗ್ ಕಾಲೇಜ್ 35189http://kannada.oneindia.com/img/2009/03/13-ap-student-ragging1.jpg123651suicideಎರಡು ಜೋಡಿ ಯುವಪ್ರೇಮಿಗಳ ದುರಂತ ಅಂತ್ಯ/news/2009/05/03/young-lovers-meet-tragic-end.htmlಬೆಂಗಳೂರು, ಮೇ 3 : ಹೆತ್ತವರ ಅಣತಿಯನ್ನು ಮೀರಿ ಮದುವೆಯಾಗ ಬಯಸಿದ್ದ ಎರಡು ಯುವ ಜೋಡಿಗಳು ದುರಂತಮಯ ಅಂತ್ಯ ಕಂಡ ಹೃದಯವಿದ್ರಾವಕ ಘಟನೆ ಬೆಂಗಳೂರು ಮತ್ತು ಬಾರ್ಕೂರಿನಲ್ಲಿ ನಿನ್ನೆ ರಾತ್ರಿ ಜರುಗಿದೆ.ಎರಡೂ ಘಟನೆಗಳಲ್ಲಿ ಸಾಮ್ಯತೆಯೇನೆಂದರೆ ಎರಡೂ ಜೋಡಿಗಳು ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅದರಲ್ಲಿ ಒಂದು ಜೋಡಿ ಬಾರ್ಕೂರಿನಲ್ಲಿ ಸತ್ತಿದ್ದರೆ, ಇನ್ನೊಂದು ಜೋಡಿ ಬದುಕುಳಿದೂ ಸತ್ತಂತಾಗಿದ್ದಾರೆ. ದುರಾದೃಷ್ಟವೆಂದರೆ, 36364http://kannada.oneindia.com/img/2009/05/03-railway-track1.jpg123651suicideಮುಂಬೈ : ಸಾಧ್ವಿ ಪ್ರಗ್ಯಾಸಿಂಗ್ ಆತ್ಮಹತ್ಯೆ ಬೆದರಿಕೆ/news/2009/07/13/malegaon-blast-sadhvi-threatens-to-commit-suicide.htmlಮುಂಬೈ, ಜು. 13 : ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿನಕ್ಕೊಳಗಾಗಿರುವ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಜೈಲು ಅಧಿಕಾರಿಗಳು ತಮಗೆ ನೀಡುತ್ತಿರುವ ಕಿರುಕುಳ ಸಹಿಸಿಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಮುಂಬೈ ಎಟಿಎಸ್ ಪೊಲೀಸರು ನನಗೆ ಅನಗತ್ಯವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ತೀವ್ರ ನೊಂದಿರುವ ನಾನು ಆತ್ಮಹತ್ಯೆಯ ಕಠಿಣ 37947http://kannada.oneindia.com/img/2009/07/13-pragya1e.jpg123651suicideಅಭಿಮಾನದ ವಿಷಕ್ಕೆ ಆಂಧ್ರದಲ್ಲಿ ನೂರಾರು ಬಲಿ/news/2009/09/04/ysr-supporters-on-suicide-spree.htmlಹೈದರಾಬಾದ್, ಸೆ. 4 : ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಅವರ ಅಕಾಲಿಕ ಮರಣದಿಂದ ದಿಗ್ಭ್ರಾಂತರಾದ ಆಂಧ್ರಪ್ರದೇಶ ಜನತೆ ಹೃದಯಘಾತ, ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಸಾವನ್ನಪ್ಪಿರುವವರ ವೈಎಸ್ಆರ್ ಅಭಿಮಾನಿಗಳ ಸಂಖ್ಯೆ ನಾನಾ ಮಾಧ್ಯಮಗಳ ಪ್ರಕಾರ 100 ಗಡಿ ದಾಟಿದೆ.ತೆಲುಗು ಚಿತ್ರರಂಗ ಹಾಗೂ ರಾಜಕಾರಣದಲ್ಲಿ ಅನಭಿಷಕ್ತ ದೊರೆಯಾಗಿ ಮೆರೆದಿದ್ದ ಎನ್ ಟಿ ರಾಮರಾವ್ ಅವರ ನಿಧನಕ್ಕಿಂತ 39011http://kannada.oneindia.com/img/2009/09/04-skull1.jpg124724andhra pradeshತಿಮ್ಮಪ್ಪನ ಗರ್ಭಗುಡಿಗೆ ಚಿನ್ನದ ಹೊದಿಕೆ ಏಕೆ ? /news/2009/10/12/vhp-opposes-gold-plating-of-ttd-temple.htmlಚೆನ್ನೈ, ಅ. 12 : ತಿರುಮಲ ಶ್ರೀ ವೆಂಕಟೇಶ್ವರ ದೇವಾಲಯದ ಗರ್ಭಗುಡಿಯ ಹೊರಗೋಡೆಗೆ ಚಿನ್ನ ಹೊಂದಿಸುವ ಕೆಲಸವನ್ನು ತಕ್ಷಣ ಕೈಬಿಡಬೇಕೆಂದು ವಿಶ್ವ ಹಿಂದೂ ಪರಿಷತ್ ದೇವಾಲಯದ ಆಡಳಿತ ಮಂಡಳಿಗೆ ಮನವಿ ಮಾಡಿಕೊಂಡಿದೆ. ಪ್ರಮುಖ ದೇವಾಲಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಿನ್ನದ ಹೊದಿಕೆ ಹಾಕುವ ಗೀಳು ಹುಟ್ಟಿಕೊಂಡಿದೆ. ಇದಕ್ಕೆ ಧಾರ್ಮಿಕ ಪಾವಿತ್ರ್ಯವಿಲ್ಲ. ಬರೀ ರಾಜಕಾರಣಿಗಳ ಅಭಿಲಾಷೆಗಾಗಿ ಈ ಕೆಲಸ ನಡೆಯುತ್ತಿದೆ 39642http://kannada.oneindia.com/img/2009/10/12-balaji3.jpg124724andhra pradeshವೈಎಸ್ಆರ್ ಸಾವು ನಿಯೋಜಿತ ಸಂಚು?/news/2009/10/21/was-there-any-consipracy-behind-ysrs-demise.htmlಹೈದರಾಬಾದ್, ಅ. 21 :ಆಂಧ್ರಪ್ರದೇಶದ ಮಾಜಿ ಮಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರ ಸಾವಿನ ಬಗ್ಗೆ ಸಾಕ್ಷಿ ದಿನಪತ್ರಿಕೆ ಶಂಕೆ ವ್ಯಕ್ತಪಡಿಸಿದ್ದು ಆಂಧ್ರದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಾಕ್ಷಿ ಪತ್ರಿಕೆ ವೈಎಸ್ಆರ್ ಅವರ ಕುಟುಂಬದ ಒಡೆತನದಲ್ಲಿದೆ. ಇಂದು ಪ್ರಕಟಿಸಲಾಗಿರುವ ವರದಿಯಲ್ಲಿ ವೈಎಸ್ಆರ್ ಅವರ ಸಾವು ಅಪಘಾತದಿಂದ ಅಲ್ಲ, ಅದು ಹತ್ಯೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದೆ. ಅವರ ಹತ್ಯೆಗಾಗಿ ಸಂಚು 39772http://kannada.oneindia.com/img/2009/10/21-ysr3.jpg124724andhra pradeshಕರ್ನಾಟಕದಲ್ಲಿ ಆಂಧ್ರ ಸಿಎಂ ರೋಸಯ್ಯ /news/2009/10/23/flood-relief-fund-andra-karnataka-seek-more-aid.htmlಬೆಂಗಳೂರು, ಅ. 23 : ನೆರೆ ಪೀಡಿತ ಪ್ರದೇಶಕ್ಕೆ ಕೇಂದ್ರದಿಂದ ಹೆಚ್ಚಿನ ನೆರವು ಪಡೆಯುವುದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಕೆ ರೋಸಯ್ಯ ಇಂದು ಬೆಂಗಳೂರಿಗೆ ಭೇಟಿ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದರು. ವಿಧಾನಸೌಧಕ್ಕೆ ಆಗಮಿಸಿದ ರೋಸಯ್ಯ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಸಂಪುಟದ ಸಹದ್ಯೋಗಿಗಳು ಅತ್ಮೀಯವಾಗಿ ಬರಮಾಡಿಕೊಂಡಿರು. ಮುಖ್ಯಮಂತ್ರಿಯಾದ ನಂತರ ಇದೇ ಪ್ರಥಮ 39836http://kannada.oneindia.com/img/2009/10/23-bsy-rosaiah2.jpg124724andhra pradeshರೆಡ್ಡಿ ಅಕ್ರಮ ಗಣಿ ತನಿಖೆಗೆ ಸಮಿತಿ/news/2009/11/11/cpi-tdp-gears-fight-against-mining-mafia.htmlಹೈದರಾಬಾದ್, ನ. 11 : ಕರ್ನಾಟಕದ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಮಾಲೀಕತ್ವದ ಓಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ) ಅನಂತಪುರ ಜಿಲ್ಲೆಯಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯ ಕಾಯ್ದೆಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದೆ. ಇದನ್ನು ಕೂಡಲೇ ತಡೆಯಬೇಕು ಎಂದು ಆಂಧ್ರ ಪ್ರದೇಶದ ವಿರೋಧ ಪಕ್ಷಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಸರ್ಕಾರ 40170http://kannada.oneindia.com/img/2009/11/11-ab-bardhan1.jpg124724andhra pradeshಓಎಂಸಿ ಗಣಿಗಾರಿಕೆಯನ್ನು ಸಿಬಿಐಗೆ ವಹಿಸಿ, ಸಿದ್ದು/news/2009/11/18/siddu-urges-govt-to-handover-omc-case-to-cbi.htmlಬೆಂಗಳೂರು, ನ. 18 : ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮಗಳಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರಕಾರ ಪ್ರಕರಣವನ್ನು ತನಿಖೆಗೆ ವಹಿಸಿದೆ ರಾಜ್ಯಕ್ಕೂ ಕೂಡಾ ಇದರಿಂದ ಭಾರಿ ಅನ್ಯಾಯವಾಗಿದೆ. ಆದ್ದರಿಂದ ಈ ಕೂಡಲೇ ಓಎಂಸಿ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು 40287http://kannada.oneindia.com/img/2009/11/18-siddaramaiah2.jpgnews"> ಅಭಿಮಾನದ ವಿಷಕ್ಕೆ ಆಂಧ್ರದಲ್ಲಿ ನೂರಾರು ಬಲಿ | YSR | YS Rajashekar reddy | Suicide | YSR Fans | Andhra Pradesh - ಅಭಿಮಾನದ ವಿಷಕ್ಕೆ ಆಂಧ್ರದಲ್ಲಿ ನೂರಾರು ಬಲಿ - Kannada Oneindia

ಅಭಿಮಾನದ ವಿಷಕ್ಕೆ ಆಂಧ್ರದಲ್ಲಿ ನೂರಾರು ಬಲಿ

YSR supporters on suicide spree
ಹೈದರಾಬಾದ್, ಸೆ. 4 : ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಅವರ ಅಕಾಲಿಕ ಮರಣದಿಂದ ದಿಗ್ಭ್ರಾಂತರಾದ ಆಂಧ್ರಪ್ರದೇಶ ಜನತೆ ಹೃದಯಘಾತ, ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಸಾವನ್ನಪ್ಪಿರುವವರ ವೈಎಸ್ಆರ್ ಅಭಿಮಾನಿಗಳ ಸಂಖ್ಯೆ ನಾನಾ ಮಾಧ್ಯಮಗಳ ಪ್ರಕಾರ 100 ಗಡಿ ದಾಟಿದೆ.

ತೆಲುಗು ಚಿತ್ರರಂಗ ಹಾಗೂ ರಾಜಕಾರಣದಲ್ಲಿ ಅನಭಿಷಕ್ತ ದೊರೆಯಾಗಿ ಮೆರೆದಿದ್ದ ಎನ್ ಟಿ ರಾಮರಾವ್ ಅವರ ನಿಧನಕ್ಕಿಂತ ವೈಎಸ್ಆರ್ ಸಾವು ಜನಸಾಮಾನ್ಯರ ಭಾರಿ ಪ್ರಭಾವ ಬೀರಿದೆ. ಬಹುಶಃ ಭಾರತದ ರಾಜಕಾರಣದ ಇತಿಹಾಸದಲ್ಲಿ ಯಾವ ನೇತಾರರಿಗೂ ಇಂತಹ ಭಾವನಾತ್ಮಕ ದೃಶ್ಯ ಸಿಗುವುದು ಅಪರೂಪ. ನಲ್ಲಮಲ್ಲ ಅರಣ್ಯದಲ್ಲಿ ಹೆಲಿಕ್ಯಾಪ್ಟರ್ ಕಾಣೆಯಾಗಿ ವೈಎಸ್ಆರ್ ನಾಪತ್ತೆಯಾಗಿದ್ದಾರೆ ಎನ್ನುವುದು ಅಲ್ಲಿಯ ಜನತೆಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿತ್ತು. ನೆಚ್ಚಿನ ನಾಯಕ, ಬಡವರ ಬಂಧು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ ಎಂದು ಸುದ್ದಿ ಮುಟ್ಟುತ್ತಿದ್ದಂತೆಯೇ ಆಂಧ್ರಪ್ರದೇಶ ಕುಸಿದು ಕುಳಿತಿತು.

ಜನಸಾಮಾನ್ಯರಿಗೆ ಗಾಢ್ ಫಾದರ್ ಆಗಿದ್ದ ವೈಎಸ್ಆರ್ ಸಾವು ಅವರಿಗೆ ಬರಸಿಡಿಲಿನಂತಾಗಿತ್ತು. ಅನೇಕರು ಅತ್ಮಹತ್ಯೆ ಮಾಡಿಕೊಂಡರು, ಹಲವರು ಹೃದಯಾಘಾತದಿಂದ ಮೃತಪಟ್ಟರು, ಅಸಂಖ್ಯ ಜನರು ಆಸ್ಪತ್ರೆಗೆ ಸೇರಿದ್ದಾರೆ. ಮತ್ತೊಂದಿಷ್ಟು ಮಂದಿ ವೈಎಸ್ಆರ್ ಸಾವು ನಮಗೆ ತುಂಬಲಾರದ ನಷ್ಟವಾಗಿದೆ. ಅವರ ಹುದ್ದೆ ತುಂಬಲು ಅವರ ಮಗ ಜಗನ್ಮೋಹನ್ ರೆಡ್ಡಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜಶೇಖರರೆಡ್ಡಿ ಅವರನ್ನು ಜನಸಾಮಾನ್ಯರು ಏಕೆ ಅಷ್ಟೊಂದು ಪ್ರೀತಿಸುತ್ತಾರೆ ಎನ್ನುವುದಕ್ಕೆ ಸ್ಪಷ್ಟ ಕಾರಣವಿದೆ. ವೈಎಸ್ಆರ್ ಬರೀ ಮುಖ್ಯಮಂತ್ರಿ ಆಗಿರಲಿಲ್ಲ. ಬಡವರ ಬಂಧು ಆಗಿದ್ದರು. ಗ್ರಾಮದಲ್ಲಿರುವ ಕಟ್ಟಕಡೆಯ ಪ್ರಜೆಗೂ ಸರಕಾರಿ ಸವಲತ್ತುಗಳು ಸಿಗಬೇಕು ಎಂಬ ಏಕೈಕ ಗುರಿ ಹೊಂದಿದ್ದ ರೆಡ್ಡಿ ಅವರ ಮಾನವೀಯ ಚಿಂತನೆಯೇ ಜನರ ಅತಿರೇಕದ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಜನಸಾಮಾನ್ಯರ ಏಳ್ಗೆಗೆ ಅವರು ಕೈಗೊಂಡ ಆರೋಗ್ಯಶ್ರೀ, ಜಲಯಜ್ಞ, ಶೇ. 3ರ ಬಡ್ಡಿ ಸಾಲ, ವಯೋವೃದ್ಧರಿಗೆ ಮಾಶಾಸನ ಸೇರಿ ಅನೇಕ ಜನಪರ ಕಾರ್ಯಕ್ರಮಗಳು ರೆಡ್ಡಿ ಅವರು ಜನರಿಗೆ ಮತ್ತಷ್ಟು ಹತ್ತಿರವಾದರು.

ವೈಎಸ್ಆರ್ ನಿಧನದ ಸುದ್ದಿ ಕೇಳಿ ತಿಂಗಳು ಮಾಶಾಸನ ಪಡೆಯುತ್ತಿದ್ದ ವಿಕಾಲಾಂಗ ದಂಪತಿ ಮುಂದಿನ ಜೀವನ ಹೇಗೆ ಎಂದು ದೊಡ್ಡ ಪ್ರಶ್ನೆಯಾಗಿ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನರಿಗಾಗಿ ಜೀವನ ತ್ಯಾಗ ಮಾಡಿದ ವೈಎಸ್ಆರ್ ಗೆ, ಅವರಿಗಾಗಿ ನನ್ನ ಜೀವನ ತ್ಯಾಗ ಮಾಡುವೆ ಎಂದು ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿವೆ.

ರಾಜ್ಯ ತುಂಬಾ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ವೈಎಸ್ಆರ್ ಮಗ ಜಗನ್ಮೋಹನ್ ರೆಡ್ಡಿ, ಸಾರ್ವಜನಿಕರಲ್ಲಿ ಶಾಂತಿ ಸಮಾಧಾನದಿಂದ ವರ್ತಿಸಿ, ಅತ್ಮಹತ್ಯೆಯಂತಹ ಭೀಕರ ಕೆಲಸ ಕೈಹಾಕಬೇಡಿ ಎಂದು ಅಭಿಮಾನಿಗಳನ್ನು ಕೋರಿದ್ದಾರೆ. ನಾವು ನೀವು ಎಲ್ಲರೂ ಸೇರಿ ತಂದೆಯನ್ನು ಬಿಳ್ಕೊಡೋಣ ಎಂದು ಮಾಡಿಕೊಂಡ ಮನವಿಯನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅಭಿಮಾನಿಗಳಿಲ್ಲ. ಒಟ್ಟಿನಲ್ಲಿ ಭಾರತದ ರಾಜಕೀಯ ಇತಿಹಾಸದಲ್ಲಿ ವೈಎಸ್ಆರ್ ದುರಂತ ಅಂತ್ಯ ಮತ್ತೊಂದು ಇತಿಹಾಸವನ್ನು ಹುಟ್ಟು ಹಾಕಿದ್ದಂತೂ ಸುಳ್ಳಲ್ಲ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+