ಎಸ್‌ಕೆಎಸ್ ಸ್ವಸಹಾಯ ಸಂಘದ ಏಜೆಂಟನ ಕಗ್ಗೊಲೆ
ಶಿವಮೊಗ್ಗ, ಆ. 27 : ಹೈದರಾಬಾದ್ ಮೂಲದ ಸ್ವಸಹಾಯ ಗುಂಪಿನ ಏಜೆಂಟರಿಬ್ಬರ ಮೇಲೆ ಏಕಾಏಕೀ ದಾಳಿ ಮಾಡಿದ ಇಬ್ಬರು ಆಗಂತುಕರು ದೊಣ್ಣೆಗಳಿಂದ ತಲೆಯ ಮೇಲೆ ಹೊಡೆದು ಓರ್ವನನ್ನು ಕೊಂದಿದ್ದಲ್ಲದೆ, ಮತ್ತೋರ್ವನಿಗೆ ಎಚ್ಚರ ತಪ್ಪಿಸಿ, ಅವರ ಬಳಿಯಿದ್ದ 1.6 ಲಕ್ಷ ರೂ.ಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಇಂದು ಬೆಳಿಗ್ಗೆ ಲಕ್ಕಿನಕೊಪ್ಪದಲ್ಲಿ ನಡೆದಿದೆ.
ಹೈದರಾಬಾದ್ ಮೂಲದ ಎಸ್.ಕೆ.ಎಸ್ ಸ್ವಸಹಾಯ ಸಂಘದ ಏಜೆಂಟರಾದ ರಾಯಚೂರು ಜಿಲ್ಲೆ ಮಾನವಿ ಸಮೀಪದ ವಾಸಿ ಶರಣಬಸಪ್ಪ (22) ಕೊಲೆಯಾದ ಯುವಕನಾಗಿದ್ದು, ಈತನ ಜೊತೆಗಿದ್ದ ಮತ್ತೋರ್ವ ಏಜೆಂಟ್ ಬೀದರ್ ಮೂಲದ ಮಾಳಪ್ಪ (22) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗುರುವಾರ ಬೆಳಿಗ್ಗೆ ಶಿವಮೊಗ್ಗ ನಗರದಲ್ಲಿ ಎಸ್.ಕೆ.ಎಸ್.ಸ್ವಸಹಾಯ ಸಂಘದ ಗುಂಪುಗಳಿಂದ ಹಣವನ್ನು ಸಂಗ್ರಹಿಸಿ ಲಕ್ಕಿನಕೊಪ್ಪ ಸರ್ಕಲ್‌ನಿಂದ ಕಡೇಕಲ್ ಗ್ರಾಮದ ಕಡೆ ಹೊರಟಿದ್ದ ಸಂದರ್ಭದಲ್ಲಿ ಮರದ ಬುಡದಲ್ಲಿ ಬಚ್ಚಿಟ್ಟುಕುಳಿತಿದ್ದ ಇಬ್ಬರು ಆಗಂತುಕರು ಏಕಾಏಕೀ ಸಂಘದ ಏಜೆಂಟರಾದ ಶರಣಬಸಪ್ಪ ಮತ್ತು ಮಾಳಪ್ಪರವರಿಬ್ಬರ ಮೇಲೆ ಮುಗಿಬಿದ್ದರು. ದೊಣ್ಣೆಗಳಿಂದ ಇಬ್ಬರ ತಲೆಗೆ ಬಲವಾಗಿ ಹೊಡೆದರು. ಬಲವಾದ ದೊಣ್ಣೆ ಹೊಡೆತದಿಂದ ಶರಣಬಸಪ್ಪನ ತಲೆ ಹೋಳಾಗಿ ಮೆದುಳು ಹೊರಬಿದ್ದು, ಸ್ಥಳದಲ್ಲಿಯೇ ಸಾವಿಗೀಡಾದನು. ಮಾಳಪ್ಪ ಪ್ರಜ್ಞೆ ತಪ್ಪಿದ. 1.6 ಲಕ್ಷ ರೂ. ಹಣವಿದ್ದ ಬ್ಯಾಗನ್ನು ಆಗಂತುಕರು ಲಪಟಾಯಿಸಿ ಪರಾರಿಯಾದರು.
ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಎಸ್.ಮುರುಗನ್, ಡಿವೈಎಸ್ಪಿ ಶೇಖರಪ್ಪ, ತುಂಗಾನಗರ ಸಬ್‌ಇನ್ಸ್‌ಪೆಕ್ಟರ್ ಶ್ರೀನಿವಾಸ್ ಮತ್ತು ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ, ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications