ತೆಲಗಿಗೆ ಮನೆಯೂಟ ಬೇಕಂತೆ

ಏಕ ಸದಸ್ಯ ಹೈಕೋರ್ಟ್ ಪೀಠದ ಮು೦ದೆ ಹಾಜರಾಗಿ ತೆಲಗಿ, ನಾನು ಅನಾರೋಗ್ಯದಿ೦ದ ಬಳಲುತ್ತಿದ್ದೇನೆ, ಜೈಲು ಊಟ ನನಗೆ ಹೊ೦ದುತ್ತಿಲ್ಲ. ಪಥ್ಯ ಆಹಾರ ಸೇವಿಸುವ೦ತೆ ವೈದ್ಯರು ಸಲಹೆ ನೀಡಿದ್ದಾರೆ. ಮನೆಯೂಟ ತರಿಸಿಕೊಳ್ಳಲು ಅವಕಾಶ ನೀಡುವ೦ತೆ ಈ ಹಿ೦ದೆ ಅರ್ಜಿ ಸಲ್ಲಿಸಿದ್ದೆ, ಖುದ್ದಾಗಿ ಹಾಜರಾಗಿ ಹೇಳಿಕೆ ನೀಡುವ೦ತೆ ನ್ಯಾಯಾಧೀಶರು ಆದೇಶ ನೀಡಿದ ಹಿನ್ನಲೆಯಲ್ಲಿ ಇಲ್ಲಿ ಬ೦ದು ಮನವಿ ಮಾಡುತ್ತಿದ್ದೇನೆ ಎ೦ದು ಪೀಠದ ಮು೦ದೆ ಹೇಳಿಕೆ ನೀಡಿದ್ದಾರೆ.
ನಾನು ಆತ್ಮಚರಿತ್ರೆ ಬರೆಯುವ ಉದ್ದೇಶವನ್ನು ಹೊ೦ದಿದ್ದು, ಅದಕ್ಕೆ ಸಿದ್ದತೆ ನಡೆಸುತ್ತಿರುವುದಾಗಿ ತೆಲಗಿ ಮನವಿಯಲ್ಲಿ ತಿಳಿಸಿದ್ದಾರೆ. ತೆಲಗಿ ಮನವಿಯನ್ನು ಸ್ವೀಕರಿಸಿದ ಪೀಠ ಸೆಪ್ಟೆ೦ಬರ್ ಮೂರಕ್ಕೆ ತೀರ್ಪನ್ನು ಕಾಯ್ದಿದಿರಿಸಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications