ವಿಕಲಚೇತನ ದಿನೇಶನ ಕುಮಾರ'ಸ್ವಾಮಿ'ನಿಷ್ಠೆ

ಈತ ಯಾವುದೇ ರಾಜಕೀಯ ಅಭಿಲಾಶೆ ಇಟ್ಟುಕೊಂಡಿಲ್ಲ. ಜೆಡಿಎಸ್‌ನ ಅಪ್ಪಟ ಅಭಿಮಾನಿಯಾಗಿರುವ ದಿನೇಶ್ ಪ್ರಚಾರಕ್ಕೆ ಬರುವುದು ಚುನಾವಣೆ ಬಂದಾಗ ಮಾತ್ರ. ಈ ಹಿಂದೆಯೂ ಕುಮಾರಸ್ವಾಮಿ ಪರ ದಿನೇಶ್ ಪ್ರಚಾರ ಕೈಗೊಂಡಿದ್ದಾನೆ. ಮೂಲತಃ ಮಂಡ್ಯಜಿಲ್ಲೆಯ ಬೂಕನಕೆರೆಯ ದಿನೇಶ್ ಗೆ ಕುಮಾರಸ್ವಾಮಿಯವರ ಆಡಳಿತಾವಧಿಯಲ್ಲಿ ಸರ್ಕಾರದಿಂದ 20 ಸಾವಿರ ಸಹಾಯಧನ, ಬೈಸಿಕಲ್ ಮತ್ತು ಮಾರ್‍ಸ್ ಆಡಿಯೋದಲ್ಲಿ ಉದ್ಯೋಗಾವಕಾಶವನ್ನ ಕಲ್ಪಿಸಲಾಗಿತ್ತು.
ಬಾಲ್ಯದಲ್ಲೇ ಪೋಲಿಯೋ ಪೀಡಿತನಾಗಿ ಅಂಗವಿಕಲನಾದ ಈ ದಿನೇಶ್ ತಂದೆ ತಾಯಿಯೊಂದಿಗೆ ಗ್ರಾಮದಲ್ಲೇ ಜೀವನ ನಿರ್ವಹಣೆ ಮಾಡುತ್ತಿದ್ದಾನೆ. ಚುನಾವಣೆ ಸಮಯದಲ್ಲಿ ಮಾತ್ರ ಪ್ರಚಾರಕ್ಕೆ ಆಗಮಿಸುವ ಈ ದಿನೇಶ್, ಕುಮಾರಸ್ವಾಮಿಯವರಿಗೇ ತನ್ನ ನಿಷ್ಠೆ ಎಂದು ಯಾವ ಮುಲಾಜೂ ಇಲ್ಲದೆ ಹೇಳುತ್ತಾನೆ.
ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುವ ದಿನೇಶ್, ಕುಮಾರಸ್ವಾಮಿಯವರ ಸಾಧನೆಗಳನ್ನ ಪ್ರಚಾರ ಮಾಡುತ್ತಾ ಜೆಡಿಎಸ್ ವಲಯದಲ್ಲಿ ಚಿರಪರಿಚಿತನಾಗಿದ್ದಾನೆ. ಕುಮಾರಸ್ವಾಮಿಯವರು ಕೂಡ ದಿನೇಶನ ಶ್ರಮವನ್ನ ಮೆಚ್ಚಿ ಬೆನ್ನುತಟ್ಟಿದ್ದಾರೆ.












Click it and Unblock the Notifications