36611yeddyurappaಮಳೆ : 20 ಸಾವಿರ ಕೋಟಿ ರುಪಾಯಿ ನಷ್ಟ/news/2009/10/05/losses-due-to-rain-and-floods-is-over-20cr-rs-bsy.htmlಬೆಂಗಳೂರು, ಅ. 5 : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮುನಿಸಿಕೊಂಡ ಮಳೆರಾಯನ ಹೊಡೆತಕ್ಕೆ ಸುಮಾರು 20 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ. ಇದನ್ನು ಸ್ಪಷ್ಟಪಡಿಸಿದವರು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಕಂಡೂ ಕೇಳರಿಯದ ಅತಿವೃಷ್ಟಿಗೆ ರಾಜ್ಯದ ಜನತೆ ತತ್ತರಿಸಿದೆ. ಕೂಡಲೇ ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಕಳುಹಿಸಬೇಕು ಎಂದು ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಈ 39528http://kannada.oneindia.com/img/2009/10/05-rain-submerged-village1.jpg36611yeddyurappaಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg36611yeddyurappaಪ್ರವಾಹ ಪೀಡಿತರ ಕಣ್ಣೀರಿಗೆ ಕೇಂದ್ರದ ತಣ್ಣೀರು/news/2009/10/07/utilise-calamity-relief-fund-chidambaram.htmlನವದೆಹಲಿ, ಅ. 7 : ನೆರೆ ಕಾರ್ಯಕ್ಕೆ ರಾಜ್ಯ ಸರಕಾರ ತುರ್ತಾಗಿ ವಿಪತ್ತು ಪರಿಹಾರ ನಿಧಿಯ ಹಣ ಬಳಸಿಕೊಳ್ಳಬೇಕು ಎನ್ನುವ ಮೂಲಕ ಗೃಹ ಸಚಿವ ಪಿ ಚಿದಂಬರಂ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಿದ್ದಾರೆ. ವಿಪತ್ತು ಪರಿಹಾರ ನಿಧಿಯ ಶೇ. 75ರಷ್ಟು ಹಣ ಖರ್ಚಾಗುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮುಂಗಡ ಹಣ ನೀಡುವ ವ್ಯವಸ್ಥೆ ಮಾಡಲಾಗುವುದು 39554http://kannada.oneindia.com/img/2009/10/07-flood-andhra1.jpg36611yeddyurappaಕೇಂದ್ರ ಪರಿಹಾರ : ರಾಜ್ಯಕ್ಕೆ ಮತ್ತೆ ಕಮ್ಮಿ ಹಣ /news/2009/10/07/centre-releases-funds-for-flood-hit-ap-karnataka.htmlನವದೆಹಲಿ, ಅ. 7 : ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ ಸಾಕಷ್ಟು ಪ್ರಮಾಣದ ಆಸ್ತಿ ಪಾಸ್ತಿ, ಮತ್ತು ಪ್ರಮಾಣ ನಷ್ಟ ಉಂಟಾಗಿದ್ದು, ಮಂಗಳವಾರ ಕೇಂದ್ರ ಸರಕಾರ ಎರಡನೇ ಹಂತದ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಎರಡನೇ ಹಂತದ ಪರಿಹಾರದಲ್ಲೂ ಕೇಂದ್ರ ಸರಕಾರ ತಾರತಮ್ಯ ಅನುಸರಿಸಿರುವುದು ಸಾಬೀತಾಗಿದೆ. ಅತಿವೃಷ್ಟಿಗೆ ತುತ್ತಾಗಿರುವ ಈ ಎರಡು ರಾಜ್ಯಗಳಿಗೆ ಪ್ರಕೃತಿ ವಿಕೋಪ ನಿಧಿಯಡಿ 39564http://kannada.oneindia.com/img/2009/10/07-rain-havoc-nk1.jpg36611yeddyurappaಇತರ ರಾಜ್ಯಗಳತ್ತ ಕೈಯೊಡ್ಡಿದ ಯಡಿಯೂರಪ್ಪ/news/2009/10/07/yeddyurappa-writes-letter-to-other-chief-ministers.htmlಬೆಂಗಳೂರು, ಅ. 7 : ಹಿಂದೆಂದೂ ಕಾಣದ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಉತ್ತರ ಕರ್ನಾಟಕದ 18 ಜಿಲ್ಲೆಗಳ ನಿರ್ವಸಿತ ಜನರಿಗೆ ಜೀವನ ಕಲ್ಪಿಸಿಕೊಡಲು ಮತ್ತು ರಸ್ತೆ, ಸೇತುವೆ, ಕಟ್ಟಡಗಳ ಪುನರ್ ನಿರ್ಮಾಣಕ್ಕಾಗಿ ಮುಕ್ತಹೃದಯದಿಂದ ಸಹಾಯಹಸ್ತ ಚಾಚಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ರಾಜಸ್ತಾನ, ಪಂಜಾಬ್, ಬಿಹಾರ್, ಚತ್ತೀಸ್ ಘರ್, ದೆಹಲಿ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಖಂಡ್, 39569http://kannada.oneindia.com/img/2009/10/07-yediyurappa3.jpg278701m karunanidhiಸೇನಾ ಕಾರ್ಯಾಚರಣೆ : ಏ 23 ತಮಿಳುನಾಡು ಬಂದ್/news/2009/04/22/karunanidhi-calls-for-strike-in-tn-for-sl.htmlಚೆನ್ನೈ, ಏ. 22 : ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ವಿರೋಧಿಸಿ ಗುರುವಾರ (ಏಪ್ರಿಲ್ 23) ರಂದು ರಾಜ್ಯಾದ್ಯಂತ 12 ಗಂಟೆಗಳ ಕಾಲ ಬಂದ್ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಆದೇಶಿಸಿದ್ದಾರೆ. ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಯುಪಿಎ ಸರ್ಕಾರದ ಮೇಲೂ ಒತ್ತಡ ಹೇರಲು ಈ ತಂತ್ರ 36135http://kannada.oneindia.com/img/2009/04/22-karunanidhi2e.jpg278701m karunanidhiರಾಷ್ಟ್ರಪತಿಗಳ ಭೇಟಿ ರದ್ದುಗೊಳಿಸಿದ ಮನಮೋಹನ್ /news/2009/05/21/allies-want-more-berths-pm-prez-meet-cancelled.htmlನವದೆಹಲಿ, ಮೇ. 21 : ಸರಕಾರ ರಚನೆ ಕುರಿತಂತೆ ನಿಯೋಜಿತ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಭೇಟಿ ಮಾಡಿ ನಡೆಸಬೇಕಿದ್ದ ಚರ್ಚೆಯನ್ನು ರದ್ದುಗೊಳಿಸಿದ್ದಾರೆ. ಸಂಪುಟ ರಚನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಸಂಪುಟದಲ್ಲಿ ಹೆಚ್ಚು ಸಚಿವ ಸ್ಥಾನಗಳು ಬೇಕು ಎಂದು ಪಟ್ಟುಹಿಡಿದಿದ್ದಾರೆ. ಅಂಗ ಪಕ್ಷಗಳಿಗೆ ಸ್ಥಾನ ಹಂಚಿಕೆ ವಿಷಯ 36799http://kannada.oneindia.com/img/2009/05/21-m-m-singh1.jpg278701m karunanidhiಸ್ಟಾಲಿನ್ ತಮಿಳುನಾಡು ಉಪಮುಖ್ಯಮಂತ್ರಿ/news/2009/05/29/karunanidhi-picks-son-stalin-as-deputy-cm.htmlಚೆನ್ನೈ, ಮೇ. 29 : ಕೇಂದ್ರದಲ್ಲಿ ಕ್ಯಾಬಿನೆಟ್ ಕಸರತ್ತು ಮುಗಿದ ತಕ್ಷಣ ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ತನ್ನ ಪುತ್ರ ಎಂ ಕೆ ಸ್ಟಾಲಿನ್ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ಘೋಷಿಸಿದ್ದಾರೆ.ರಾಜ್ಯಪಾಲ ಎಸ್ ಎಸ್ ಬರ್ನಾಲ ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ಇದನ್ನು ಇಂದು ಪ್ರಕಟಿಸಿದರು. ತನ್ನ ಇನ್ನೊಬ್ಬ ಮಗ ಅಳಗಿರಿಗೆ ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವ 36982http://kannada.oneindia.com/img/2009/05/29-mk-stalin1.jpg278701m karunanidhiತಮಿಳುನಾಡು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ :ಡಿಎಂಕೆ/news/2009/06/10/karunanidhi-awards-sslc-toppers-with-laptops-cash.htmlಚೆನ್ನೈ, ಜೂ. 10 : ತಮಿಳುನಾಡು ಮುಖ್ಯಮಂತ್ರಿ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ತಮಿಳು ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಲ್ಎಸ್ಎಸ್ ಸಿ ಪರೀಕ್ಷೆ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ಬಹುಮಾನ ನೀಡುವ ನೂತನ ಯೋಜನೆಗ ಚಾಲನೆ ನೀಡಿದ್ದಾರೆ. 2009ರ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದಿರುವ ವಿದ್ಯಾರ್ಥಿಗಳಿಗೆ ಮಂಗಳವಾರ ಸರಕಾರ ಲ್ಯಾಪ್ ಟಾಪ್ 37247http://kannada.oneindia.com/img/2009/06/10-mk-sslc-toppers.jpg278701m karunanidhiಕರುಣಾನಿಧಿ ಭೇಟಿ ಮಾಡಲಿರುವ ಯಡಿಯೂರಪ್ಪ/news/2009/07/02/yeddyurappa-to-meet-m-karunanidhi-today.htmlಬೆಂಗಳೂರು, ಜು. 2 : ಆರೋಗ್ಯ ತಪಾಸಣೆಗಾಗಿ ಚೆನ್ನೈಗೆ ತೆರಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಯಡಿಯೂರಪ್ಪ ಚೆನ್ನೈನಲ್ಲಿ ಇರುವುದನ್ನು ತಿಳಿದು ಕರುಣಾನಿಧಿ ಅವರೇ ಭೇಟಿಗೆ ಆಸಕ್ತಿ ತೋರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ತಾವೇ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಕರುಣಾನಿಧಿ ಅವರ ಗೋಪಾಲಪುರ ನಿವಾಸದಲ್ಲಿ 37716http://kannada.oneindia.com/img/2009/07/02-karunanidhi2e.jpg535830sarvajnaಆ.10 ರಂದು ತಿರುವಳ್ಳುವರ್ ಪ್ರತಿಮೆ ಅನಾವರಣ/news/2009/07/12/sarvajna-thiruvalluvar-statue-unveiling-dates-fix.htmlಬೆಂಗಳೂರು, ಜು. 12 : ಕರ್ನಾಟಕ-ತಮಿಳುನಾಡು ನಡುವೆ ಹಲವು ವರ್ಷಗಳಿಂದ ವಿವಾದದ ಕೇಂದ್ರವಾಗಿದ್ದ ಸರ್ವಜ್ಞ ಮತ್ತು ತಿರುವಳ್ಳುವರ್ ಪ್ರತಿಮೆಗಳ ಅನಾವರಣಕ್ಕೆ ಅಂತೂ ಇಂತೂ ಕಾಲ ಕೂಡಿ ಬಂದಿದೆ. ಆಗಸ್ಟ್ 10 ರಂದು ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಹಾಗೂ ಆಗಸ್ಟ್ 13 ರಂದು ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆಗಳು ಅನಾವವರಣಗೊಳ್ಳಲಿವೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಮುಖ್ಯಮಂತ್ರಿ ಬಿ 37930http://kannada.oneindia.com/img/2009/07/12-thiruvalluvar1e.jpg535830sarvajnaತಿರುವಳ್ಳುವರ್ ಪ್ರತಿಮೆಗೆ ಕನ್ನಡಪರ ಸಂಘ ವಿರೋಧ /news/2009/07/17/tiruvalluvar-statue-opposes-pro-kannada.htmlಬೆಂಗಳೂರು, ಜು. 17 : ಕರ್ನಾಟಕದಲ್ಲಿ ತಮಿಳು ಕವಿ ತಿರುವಳ್ಳವರ್ ಪ್ರತಿಮೆ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ತಿರುವಳ್ಳವರ್ ಪ್ರತಿಮೆ ಸ್ತಾಪನೆಗೆ ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಅಖಿಲ ಕರ್ನಾಟಕ ಕನ್ನಡ ಚಳವಳಿ ಎಚ್ಚರಿಕೆ ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಸಮಿತಿ ಅಧ್ಯಕ್ಷ ಗುರುದೇವ್ ನಾರಾಯಣರಾವ್, ಇದೇ ಆಗಸ್ಟ್ 38037http://kannada.oneindia.com/img/2009/07/17-tiruvalluvar2.jpg535830sarvajnaತಿರುವಳ್ಳುವರ್ ಪ್ರತಿಮೆಗೆ ಷರತ್ತುಬದ್ಧಅವಕಾಶ, ಕರವೇ/news/2009/07/17/sarvajna-statue-in-chennai-prime-location-karave.htmlಬೆಂಗಳೂರು, ಜು. 17 : ಕನ್ನಡಪರ ಸಂಘಟನೆಗಳ ಷರತ್ತುಗಳಿಗೆ ಸರಕಾರ ಬದ್ದರಾದರೆ ಮಾತ್ರ ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಅವಕಾಶ ನೀಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ. ಬೆಂಗಳೂರಿನ ಹೃದಯ ಭಾಗದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಸರಕಾರ ಜಾಗ ನೀಡಿದೆ. ಅದೇ ರೀತಿ ಚೆನ್ನೈ ನಗರದ ಮುಖ್ಯ ರಸ್ತೆಯಲ್ಲಿ ಸರ್ವಜ್ಞ ಪ್ರತಿಮೆ 38038http://kannada.oneindia.com/img/2009/07/17-narayangowda2.jpg535830sarvajnaತಿರುಕ್ಕುರಲ್ ಕರ್ತೃ ಕವಿ ತಿರುವಳ್ಳುವರ್ ಕಿರುಪರಿಚಯ/literature/articles/2009/0720-thirukkural-tamil-poet-thiruvalluvar.htmlತಿರುವಳ್ಳುವರ್ ತಮಿಳುನಾಡಿನ ಮಹಾನ್ ಕವಿ. ಮಧುರೆ ಜಿಲ್ಲೆಯ ಕಾವೇರಿ ತೀರದ ಪೂ೦ಪುಹಾರ್ ಹಳ್ಳಿಯಲ್ಲಿ ಹುಟ್ಟಿದರೆ೦ದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ಚೆನ್ನೈನಲ್ಲಿರುವ ಮೈಲಾಪುರ್ ಸ್ಥಳದವರೆನ್ನುತ್ತಾರೆ. ತಿರುವಳ್ಳುವರ್ ಅವರು 133 ಅಧ್ಯಾಯದ ತಿರುಕ್ಕುರಳ್ ಎ೦ಬ ಮಹಾ ಗ್ರ೦ಥ ರಚಿಸಿದ ಕವಿ. ಈತನ ಕಾಲ ನಿಗದಿಯಾಗಿಲ್ಲವಾದರೂ ಕ್ರಿಸ್ತಪೂರ್ವ 2ರಿಂದ ಹಿಡಿದು ಕ್ರಿಸ್ತಶಕ 8ವರೆಗೆ ಇರಬಹುದು ಎ೦ದು ಹೇಳಲಾಗಿದೆ. ಇವರ ಹೆಸರಿನಲ್ಲಿ 38088http://kannada.oneindia.com/img/2009/07/20-thiruvalluvar1.jpg535830sarvajnaವಚನಕಾರ ಸರ್ವಜ್ಞನಿಗೆ ಒಂದು ಡಜನ್ ಬಹುಪರಾಕ್/literature/people/2009/0721-kannada-vachanakara-poet-sarvajna.html"ಸರ್ವಜ್ಞನೆ೦ಬುವನು ಗರ್ವದಿ೦ದಾದವನೇ, ಸರ್ವರೊಳು ಒ೦ದೊ೦ದು ನುಡಿಗಲಿತು ವಿದ್ಯೆಯ ಪರ್ವತವೇ ಆದ"- ಸರ್ವಜ್ಞ.ಈ ಸರ್ವಜ್ಞನೆ೦ಬುವನು ಯಾರು, ಎಲ್ಲಿ ಬೆಳೆದ, ಯಾವ ವೃತ್ತಿಯವನು, ಕೊನೆಗೆ ಎಲ್ಲಿಗೆ ಹೋಗಿ ಕಣ್ಮರೆಯಾದ ಎ೦ಬುದಲ್ಲೆವೂ ನಿಗೂಢವಾಗಿಯೇ ಉಳಿದಿದೆ. ಚರಿತ್ರಕಾರರ ಪ್ರಕಾರ, ಈತನ ನಿಜವಾದ ಹೆಸರು ಪುಷ್ಪದತ್ತ , ಈತನ ತ೦ದೆಯ ಹೆಸರು ಯಾರಿಗೂ ಗೊತ್ತಿಲ್ಲ. ಬೆಳೆದದ್ದು ಒಬ್ಬ ಶೈವ ದ೦ಪತಿಗಳ ಬಳಿಯಲ್ಲಿ. ಸಾಕು ತ೦ದೆ 38112http://kannada.oneindia.com/img/2009/07/21-sarvajna1.jpgnews"> ತಮಿಳರಿಗೆ ಒಳ್ಳೆ ಬುದ್ದಿ ಕೊಡೋ ಸರ್ವಜ್ಞನೇ | Sarvajna|Karnataka philospher|Statue|BSY|Karunanidhi|Chennai| kannada| ತಮಿಳರಿಗೆ ಒಳ್ಳೆ ಬುದ್ದಿ ಕೊಡೋ ಸರ್ವಜ್ಞನೇ - Kannada Oneindia

ತಮಿಳರಿಗೆ ಒಳ್ಳೆ ಬುದ್ದಿ ಕೊಡೋ ಸರ್ವಜ್ಞನೇ

ಚೆನ್ನೈ, ಆ. 13: ಕನ್ನಡದ ತ್ರಿಪದಿಗಳ ಬ್ರಹ್ಮ ಸರ್ವಜ್ಞನ ಪ್ರತಿಮೆಯನ್ನು ನಗರದ ಅಯನಾವರಂನಲ್ಲಿರುವ ಜೀವಾ ಪಾರ್ಕ್ ನಲ್ಲಿ ಅನಾವರಣಗೊಳಿಸಲಾಯಿತು. ಜೀವಾ ಪಾರ್ಕ್ ನಲ್ಲಿ ಕನ್ನಡಿಗರ ಕಲರವ, ಕನ್ನಡ ಭಾಷೆಯ ಕಂಪಿನೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಿಮೋಟ್ ಕಂಟ್ರೋಲ್ ಮೂಲಕ ಸರ್ವಜ್ಞರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಮೂಲಕ ಉಭಯ ರಾಜ್ಯಗಳ ನಡುವೆ ಉತ್ತಮ ಬಾಂಧವ್ಯ ಬೆಸೆಯುವ ಮುಂದುವರೆದ ಕೈಂಕರ್ಯಕ್ಕೆ ಛಲವಾದಿ ಯಡಿಯೂರಪ್ಪ ಹೊಸ ಟಿಪ್ಪಣಿ ಬರೆದರು.

ವರದಿ : ಅರಿವಳಗನ್, ಚೆನ್ನೈ

ಸರ್ವಜ್ಞರ ಪ್ರತಿಮೆ ಅನಾವರಣಗೊಳಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭಾವುಕದಿಂದಲೇ ತಮ್ಮ ಉದ್ಘಾಟನಾ ಭಾಷಣ ಆರಂಭಿಸಿದರು. ಕೃಷ್ಣ ಜನ್ಮಾಷ್ಠಮಿಯ ಈ ಶುಭ ದಿನದಂದು ಚೆನ್ನೈದ ನಗರದಲ್ಲಿ ಕನ್ನಡದ ತತ್ವಜ್ಞಾನಿ ಹಾಗೂ ತ್ರಿಪದಿಗಳು ಭೀಷ್ಮ ಎಂದೇ ಖ್ಯಾತರಾದ ಸರ್ವಜ್ಞರ ಪ್ರತಿಮೆಯನ್ನು ಅನಾವರಣಗೊಳಿಸಲು ಸಹಕರಿಸಿದ ಹಿರಿಯಣ್ಣ ತಮಿಳುನಾಡಿನ ಮುಖ್ಯಮಂತ್ರಿ ಎಂ ಕರುಣಾನಿಧಿ ಅಭಿನಂದನೆ ಎಂದು ತಮ್ಮ ಆರಂಭಿಕ ಮಾತು ಶುರು ಮಾಡಿದರು.

ಭಾಷೆ ಎರಡು, ಭಾವ ಒಂದೇ, ನಾವೆಲ್ಲಾ ಭಾರತೀಯರು ಎಂಬುದು ಇಂದು ನಡೆದ ಅದ್ಧೂರಿ ಸಮಾರಂಭವೇ ಸಾಕ್ಷಿ. ತತ್ವಜ್ಞಾನಿ, ವಚನಕಾರ ಸರ್ವಜ್ಞ ಹಾಗೂ ತಮಿಳು ದಾರ್ಶನಿಕ ತಿರುವಳ್ಳುವರ್ ಅವರು ಪ್ರತಿಮೆ ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಅನಾವರಣ ಮಾಡಿರುವುದು ಈ ರಾಜ್ಯಗಳ ಸ್ನೇಹ ಸಂಬಂಧ ವೃದ್ಧಿಯಾಗುವ ಜೊತೆಗೆ ಹೊಸ ಮಾರ್ಗ, ಹೊಸ ಪಯಣದ ಕಡೆಗೆ ನಾವೆಲ್ಲರೂ ಸಾಗೋಣ ಎಂದರು.

ತಮಿಳುನಾಡು ಮತ್ತು ಕರ್ನಾಟಕದ ವಿವೇಕಯುತ ತೀರ್ಮಾನದಿಂದ ಉಭಯ ರಾಜ್ಯಗಳಲ್ಲಿ ಸ್ನೇಹ ಉತ್ತಮಗೊಳ್ಳಲಿದೆ. ನಮ್ಮ ನಡುವೆ ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳೋಣ. ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆ ಅನಾವರಣ ಮಾಡುವುದಕ್ಕೆ ಕರುಣಾನಿಧಿ ಅವರು ನಿರ್ಧರಿಸಿದ್ದು, ಮಹತ್ವದ ತೀರ್ಮಾನ ಮತ್ತು ಅತ್ಯಂತ ಬದ್ಧತೆ ಕೆಲಸವಾಗಿದೆ ಎಂದರು.

ಒಂದೇ ತಾಯಿಯ ಮಕ್ಕಳಾದ ನಮ್ಮಲ್ಲಿ ಭಿನ್ನ ನಿಲುವು, ಬೇರೆ ಬೇರೆ ವಿಚಾರಗಳು ಇರುವುದು ಸಹಜ, ಅದು ಪ್ರಕೃತಿಯ ನಿಯಮವೂ ಕೂಡಾ. ಆದರೆ, ಅವುಗಳನ್ನ ನಾವುಗಳು ಸ್ನೇಹ ಮತ್ತು ಪ್ರೀತಿಯಿಂದ ಬಗೆಹರಿಸಿಕೊಳ್ಳೋಣ. ದಕ್ಷಿಣ ನಾಲ್ಕು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ರಾಜ್ಯದ ಮುಖ್ಯಮಂತ್ರಿಗಳು ಒಂದಡೆ ಕುಳಿತುಕೊಂಡು ಸಮಸ್ಯೆಗಳ ನಿವಾರಣೆ ನಾಂದಿ ಹಾಡೋಣ. ಇದಕ್ಕಾಗಿ ಅರಿವು ಕಮ್ಮಟಗಳನ್ನು ಆಯೋಜಿಸೋಣ. ಇದಕ್ಕೆ ಕರ್ನಾಟಕ ಉತ್ಸುಕವಾಗಿದ್ದು, ನನ್ನ ಹಿರಿಯಣ್ಣ ಕಲೈಂಜರ್ ಕರುಣಾನಿಧಿ ಸಮ್ಮತಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಭಾನುವಾರ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಆನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರುಣಾನಿಧಿ ಅವರು ನನ್ನನ್ನು ಚಿನ್ನ ತಂಬಿ ಎಂದು ಕರೆದು ತಮ್ಮ ಹೃದಯದಲ್ಲಿ ನನಗೆ ಸ್ಥಾನ ಕೊಟ್ಟರು. ಕಳೆದ ಎರಡು ವರ್ಷಗಳ ಹಿಂದೆ ನನ್ನ ಸ್ವಂತ ಅಣ್ಣನನ್ನು ಕಳೆದುಕೊಂಡ ನನಗೆ ಇನ್ನೊಬ್ಬ ದೊಡ್ಡಣ್ಣ ಸಿಕ್ಕಂತಾಗಿದೆ ಎಂದರು. ಸರ್ವಜ್ಞ ಮಹಾನ್ ಕವಿ. ತಿರುವಳ್ಳುವರ್ ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ. ಈ ಇಬ್ಬರ ಪ್ರತಿಮೆಗಳು ಉಭಯ ರಾಜ್ಯಗಳು ಅನಾವರಣಗೊಂಡಿದ್ದು, ಸ್ನೇಹ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಯಡಿಯೂರಪ್ಪ ಹೇಳಿದರು.

ಜೀವಾ ಪಾರ್ಕ್ ಅಭಿವೃದ್ಧಿಗೆ ಕರ್ನಾಟಕ ಸರಕಾರ 60 ಲಕ್ಷ ರುಪಾಯಿ ಸಹಾಯ ನೀಡಿದೆ. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು ಯಡಿಯೂರಪ್ಪ ಅವರಿಗೆ ಗಿನ್ನಿಸ್ ದಾಖಲೆ ಬರೆದ ತಿರುವಾರು ರಥ ಹಾಗೂ ತಮ್ಮ ಹಸ್ತಾಕ್ಷರ ಹೊಂದಿದ ಸರ್ವಜ್ಞರ ಮತ್ತು ಯಡಿಯೂರಪ್ಪ ಅವರ ಭಾವಚಿತ್ರ ಇರುವ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು. ಚೆನ್ನೈ ಕನ್ನಡ ಸಂಘದ ಅಧ್ಯಕ್ಷ ಅತ್ತಾವರ ರಾಮದಾಸ್ ಸ್ವಾಗತ ಭಾಷಣ ಮಾಡಿದರು. ಗೃಹ ಸಚಿವ ವಿ ಎಸ್ ಆಚಾರ್ಯ ಆಶಯ ಭಾಷಣ ಮಾಡಿದರು. ತಮಿಳುನಾಡಿನ ಹಣಕಾಸು ಸಚಿವ ಪ್ರೊ ಅನ್ಬಂಗಮ್ ಅವನರು ಪ್ರಾಸ್ತಾವಿಕ ಭಾಷಣ ಮಾಡಿದರು. ಮತ್ತೂರು ಕೃಷ್ಣಮೂರ್ತಿ ಅವರು ಯಡಿಯೂರಪ್ಪ ಅವರ ಭಾಷಣವನ್ನು ಸಂಕ್ಷಿಪ್ತವಾಗಿ ತಮಿಳಿಗೆ ಭಾಷಾಂತರಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಕರುಣಾನಿಧಿ ಅವರು, ಯಡಿಯೂರಪ್ಪ ಅವರ ಕಾರ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಅನೇಕ ದಿನಗಳ ತಮಿಳರ ಕನಸನ್ನು ನನಸು ಮಾಡಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲಬೇಕು. ನನಗೆ ತಮ್ಮ ಇಲ್ಲದಿರುವ ಕೊರಗಿತ್ತು. ಅದೀಗ ಕರ್ನಾಟಕದಲ್ಲೊಬ್ಬ ತಮ್ಮ ಸಿಕ್ಕಿದ್ದಾನೆ. ಆತನೇ ಈ ಯಡಿಯೂರಪ್ಪ ಎಂದು ಹಾಡಿಹರಸಿದರು. ಈ ಸಂದರ್ಭದಲ್ಲಿ ತಮಿಳರು ಹಾಗೂ ಕನ್ನಡಿಗರು ಕುಣಿದು ಕುಪ್ಪಳಿಸಿದರು. ಸರ್ವಜ್ಞ ಮತ್ತು ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡುವ ಮೂಲಕ ಸಮಾಜಕ್ಕೆ ಸ್ಪಷ್ಟವಾದ ಸಂದೇಶ ರವಾನೆ ಮಾಡಿದಂತಾಗಿದ್ದು, ನಮ್ಮಲ್ಲಿನ ಏಕತೆಯನ್ನು ಪ್ರದರ್ಶಿಸಿದಂತಾಯಿತು. ಇದನ್ನು ಮುಂದುವರೆಸಿಕೊಂಡು ಹೋಗೋಣ ಎಂದು ಕರುಣಾನಿಧಿ ಹೇಳಿದರು. ಯಡಿಯೂರಪ್ಪ ಅವರು ಕರುಣಾನಿಧಿ ಅವರಿಗೆ ಚಿನ್ನದ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.

ಕರ್ನಾಟದ ಸಚಿವರಾದ ಕರುಣಾಕರರೆಡ್ಡಿ, ರಾಮಚಂದ್ರೇಗೌಡ, ಆರ್ ಅಶೋಕ್, ಸಂಸದ ಅನಂತ್ ಕಮಾರ್, ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್, ಸಂಸದ ಪಿ ಸಿ ಮೋಹನ್, ಚಿತ್ರನಟರಾದ ಕಮಲಹಾಸನ್, ರಜಿನಿಕಾಂತ್, ತಾರಾ, ಜಯಾಮಾಲಾ, ಪ್ರಕಾಶ ರೈ, ಪೂಜಾ ಗಾಂಧಿ ಉಪಸ್ಥಿತರಿದ್ದರು. ಅಲ್ಲದೇ ತಮಿಳುನಾಡು ಹಾಗಾ ಕರ್ನಾಟಕದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಚೆನ್ನೈ ಕನ್ನಡ ಸಂಘ ಪದಾಧಿಕಾರಿಗಳು ಕರುಣಾನಿಧಿ ಅವರಿಗೆ ಕನ್ನಡಿಗರ ತಮಿಳು ಕಣ್ಮಣಿ ಎಂಬ ಬಿರುದು ನೀಡಿ ಸನ್ಮಾನಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+