ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಣೆಯರಿಗೆ ಈ ದೇಶದಲ್ಲಿ ಸಂಬಳ ಕಡಿಮೆ

By Staff
|
Google Oneindia Kannada News

ಲಂಡನ್, ಆ. 10 :ಅವಳು ತನ್ನ ವೃತ್ತಿ, ಉದ್ಯೋಗದಲ್ಲಿ ತುಂಬಾ ಚುರುಕು. ಕೆಲಸದ ಸೂಕ್ಷ್ಮಗಳನ್ನು ಅವಳು ಬೇಗಬೇಗ ಕಲಿತು ಜಾಣೆ ಎನಿಸಿಕೊಳ್ಳುತ್ತಾಳೆ. ಅಷ್ಟೇ ಅಲ್ಲ, ದಕ್ಷ ಕೆಲಸಗಾರ್ತಿ ಎಂದು ಕಚೇರಿಯಲ್ಲಿ ಹೆಸರು ತೆಗೆದುಕೊಳ್ಳುತ್ತಾಳೆ. ಹಾಗಾಗಿ ವೃತ್ತಿಯ ಏಣಿಯನ್ನು ಆಕೆ ಪುರುಷರಿಗಿಂತ ವೇಗವಾಗಿ ಹತ್ತಬಲ್ಲಳು, ಹತ್ತುತ್ತಾಳೆ ಕೂಡ. ಆದರೆ ಪಾಪ, ದುಡಿಮೆಯ ಫಲ ಅಂದರೆ ಸಂಬಳ ಪಡೆಯುವಾಗ ಮಾತ್ರ ಗಂಡಸರಿಂತ ಸರಾಸರಿ ಶೇಖಡಾ ಏಳರಷ್ಟು ಹಣ ಕಡಿಮೆ ಎಣಿಸುತ್ತಾಳೆ.

ಲಂಡನ್ನಿನ ನೌಕರಿ ಅಂತರಜಾಲ ತಾಣ ಬ್ರಿಟನ್ನಿನಲ್ಲಿ ಕೈಗೊಂಡ ಒಂದು ಸಮೀಕ್ಷೆಯಲ್ಲಿ ಈ ಅಂಶ ಗೋಚರವಾಗಿದೆ. ಸಮೀಕ್ಷೆ ನಡೆಸಿದ ಸಂಸ್ಥೆ ಎಕ್ಸ್ ಪರ್ಟೀರ್. ಮಹಿಳೆಯರು ಶ್ರದ್ಧೆಯಿಂದ ಚೆನ್ನಾಗಿ ಕೆಲಸ ಮಾಡಬಹುದು, ವೃತ್ತಿಯಲ್ಲಿ ಮೇಲೆ ಬರಬಹುದು. ಆದರೆ ಪೇ ಸ್ಲಿಪ್ ಮಾತ್ರ ಆಕೆಯ ದಕ್ಷತೆಯನ್ನು ಬಿಂಬಿಸುವುದಿಲ್ಲ ಎಂದು ಅಧ್ಯಯನ ಸಾರುತ್ತದೆ.

ತಮಾಷೆ ಅಥವಾ ವಿಪರ್ಯಾಸವೆಂದರೆ ಉನ್ನತ ಸ್ಥಾನಗಳಿಗೆ ಮಹಿಳಾ ಉದ್ಯೋಗಿಗಳು ಲಗುಬಗೆಯಿಂದ ಏರುತ್ತಾರೆ ನಿಜ. ಆದರೆ, ಆ ಜಾಗದಲ್ಲಿ ಅವರು ಗಂಡಸರಿಗಿಂತ ಹೆಚ್ಚು ಕಾಲ ನಿಲ್ಲುವುದಕ್ಕೆ ಆಗುವುದಿಲ್ಲ ಎಂದೂ ಸಮೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಸಮೀಕ್ಷೆಯನ್ನು ಬ್ರಿಟನ್ನಿನ ನಾನಾ ಉದ್ಯಮ ಕ್ಷೇತ್ರದಲ್ಲಿ ದುಡಿಯುತ್ತಿರುವರರನ್ನು ಸಂದರ್ಶಿಸಿ ಮಾಡಲಾಗಿದೆ.

ಇನ್ನೊಂದು ಪ್ರಮುಖ ಅಂಶವೆಂದರೆ ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರು ಬಹಳ ಬೇಗ ಮೇಲಕ್ಕೆ ಏರುತ್ತಾರೆ. ಕೆಲಸಕ್ಕೆ ಸೇರಿಕೊಂಡ ಮೂರೇ ವರ್ಷದಲ್ಲಿ ಅವರು ದೊಡ್ಡ ದೊಡ್ಡ ಸ್ಥಾನವನ್ನು ಅಲಂಕರಿಸುತ್ತಾರೆ. ಆದರೆ ಒಬ್ಬ ಪುರುಷ ಅಧಿಕಾರಿಗಿಂತ ಆಕೆ ಕಡಿಮೆ ಅಂದರೆ ಶೇ 34 ರಷ್ಟು ಸಂಬಳ ಕಡಿಮೆ ಪಡೆಯುತ್ತಾಳೆ. ಇಲ್ಲೂ ಕೂಡ ಲಿಂಗ ಪಕ್ಷಪಾತ ಇಣುಕುತ್ತದೆ. ಪ್ರತಿ 10 ಪುರುಷ ಅಧಿಕಾರಿಗಳಿಗೆ ಒಬ್ಬಳು ಅಧಿಕಾರಿಯಂತೆ ಮಹಿಳೆಯರ ಪಾಲು ಕಾಣಿಸುತ್ತದೆ. ಈ ಅಂಕಿಅಂಶ ಮಧ್ಯಮ ಗಾತ್ರದ ಒಂದು ಸಂಸ್ಥೆಯ ಆಡಳಿತ ನಿರ್ದೇಶಕ ಹುದ್ದೆಗೆ ಅನ್ವಯಿಸುತ್ತದೆ.
(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X