108098bangaloreರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg108098bangaloreಗಂಗಮ್ಮನ ಜೀರಿಗೆ/literature/my-karnataka/2007/090707mango-maveric-tree.htmlನಿನ್ನೆ ರಾತ್ರಿಯ ಅಡುಗೆಗೆ ನಾನು ಮಾಡಿದ್ದ ಹುಣಸೇಹಣ್ಣಿನ ಗೊಜ್ಜು ಅದೆಷ್ಟು ಹುಳಿಯಾಗಿಬಿಟ್ಟಿತ್ತೆಂದರೆ ನನಗೆ ಅಮ್ಮ ನೆನಪಾಗುವಷ್ಟು ಹುಳಿಹುಳಿಯಾಗಿತ್ತು. ಹುಣಸೇಹಣ್ಣಿನ ಗೊಜ್ಜು ಹುಳಿಯಾಗುವುದಕ್ಕೂ ನಿನಗೆ ನಿನ್ನ ಅಮ್ಮ ನೆನಪಾಗುವುದಕ್ಕೂ ಯಾವ ಸೀಮೆ ಸಂಬಂಧವಯ್ಯಾ ಎಂದು ನೀವು ಮುಖ ಹಿಂಡಿ ಹುಬ್ಬೇರಿಸಿದಿರಲ್ಲವೇ? ಆ ಏರಿಸಿದ ಹುಬ್ಬನ್ನು ಹಾಗೇ ಹಿಡಿದು ಮುಂದೆ ಓದಿ: ಸುಶ್ರುತ ದೊಡ್ಡೇರಿ ನನ್ನ ಅಮ್ಮನಿಗೆ ಹುಳಿ ಅಂದ್ರೆ 7012http://kannada.oneindia.com/img/2009/07/21-mango-tree1.jpg108098bangaloreಗುಬ್ಬಿಗಳಿಗೊಂದು ಮನೆಯ ಕಟ್ಟಿಕೊಟ್ಟೆವು!/literature/articles/2005/040205gubbi.html* ರಘುನಾಥ ಚ. ಹಮನೆಯ ಉತ್ತರಕ್ಕೆ ಸಮುದ್ರ, ದಕ್ಷಿಣಕ್ಕೆ ಮರುಭೂಮಿ, ಪೂರ್ವಕ್ಕೆ ಬೆಟ್ಟ , ಪಶ್ಚಿಮಕ್ಕೆ ಕಾಡು !ಆಗಷ್ಟೇ ಎದ್ದುನಿಲ್ಲುತ್ತಿದ್ದ ಊರಾಚೆಯ ಬಡಾವಣೆಯಲ್ಲಿ ಕಟ್ಟಿದ ಹೊಸಮನೆಯನ್ನು ನಾವು ತಮಾಷೆ ಮಾಡಿಕೊಳ್ಳುತ್ತಿದ್ದುದು ಹೀಗೆ. ನಮ್ಮ ವರ್ಣನೆಯಲ್ಲೂ ಒಂದಿಷ್ಟು ಸತ್ಯವಿತ್ತು : ಸುತ್ತಲ ಪ್ರದೇಶಕ್ಕೆ ಜೀವವುಣಿಸುತ್ತಿದ್ದ ಸಣ್ಣಕೆರೆ ನಮ್ಮ ಪಾಲಿಗೆ ಸಮುದ್ರವಾಗಿತ್ತು , ಮನೆಯ ಪಕ್ಕದ ಬಂಡೆಕಲ್ಲುಗಳ ಪ್ರದೇಶ ಬೆಟ್ಟವಾಗಿತ್ತು 8661http://kannada.oneindia.com/img/2009/11/03-sparrow1.jpg108098bangaloreಸಂಜೆಯ ರಂಗಿಗೆ ಬಿಯರ್‌/ಬೌಲಿಂಗ್‌ ಜೊತೆಗೆ ಶಾಪಿಂಗ್‌/news/2002/05/03/bang_bowl.htmlಬೆಂಗಳೂರಿನ ಕವಲುಗಳು ಅಗಲಗೊಳ್ಳುತ್ತಿದ್ದರೆ ಸಂಜೆಯ ಅವಶ್ಯಕತೆಗಳೂ ಹೆಚ್ಚಾಗುತ್ತಿವೆ. ಈ ಸಂಜೆ ಎಲ್ಲಿಗೆ ಹೋಗುವುದು : ಬಿಡುವಿದೆ, ಕಿಸೆಯಲ್ಲಿ ಕಾಸೂ ಇದೆ. ಸಮಸ್ಯೆ ಅದಲ್ಲ - ನೆಮ್ಮದಿ ಹಾಗೂ ಖುಷಿ ಕೊಡುವ ಜಾಗೆಗಳ ಆಯ್ಕೆ ಯಾವತ್ತಿಗೂ ತಲೆ ನೋವಿನ ಸಮಸ್ಯೆಯೇ. ಇದರೊಂದಿಗೆ ಸಾರಿಗೆ ಕಿರಿಕಿರಿ ಬೇರೆ. ಇದರಿಂದಾಗಿ- ರಾಮ ರಾಮ ಸಾಕಪ್ಪಾ ಸಾಕು, ಎಲ್ಲಿಗೆ ಹೋಗುವುದೂ ಬೇಡ, ಮನೆಯೇ 22001http://kannada.oneindia.com/img/2009/06/22-beer-mug1.jpg108098bangaloreಚಾಲೆಂಜರ್ಸ್ ತಂಡಕ್ಕೆ ರಾಬಿನ್ ಉತ್ತಪ್ಪ ನಾಯಕ?/news/2009/01/22/ipl-uthappa-likely-to-captain-mallya-team.htmlಬೆಂಗಳೂರು, ಜ. 22 : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಇಟ್ಟಿರುವ ಬೆನ್ನಲ್ಲೇ ರಾಹುಲ್ ಅಭಿಮಾನಿಗಳಿಗೆ ಇನ್ನೊಂದು ಕಹಿ ಸುದ್ದಿ ಕ್ರಿಕೆಟ್ ವಲಯದಲ್ಲಿ ದಟ್ಟವಾಗಿದೆ. ಇನ್ನೇನು ಏಪ್ರಿಲ್-ಮೇ ತಿಂಗಳಲ್ಲಿ ಟ್ವಂಟಿ-20 ಕ್ರಿಕೆಟ್ ಆರಂಭವಾಗಲಿವೆ. ತಂಡದ ಆಟಗಾರರ ಆಯ್ಕೆಯಲ್ಲಿ ಎಂಟು ಪ್ರಾಂಚೈಸಿಗಳ ಮುಖ್ಯಸ್ಥರು ಮಗ್ನರಾಗಿದ್ದಾರೆ, ಇದೇ ಕಾರಣಕ್ಕೆ 34235http://kannada.oneindia.com/img/2009/01/22-robin-uthappa1e.jpg278318karunanidhiಎಲ್ ಟಿಟಿಇ ಪ್ರಭಾಕರನ್ ಉಗ್ರನಲ್ಲ, ಕರುಣಾನಿಧಿ/news/2009/04/20/prabhakaran-is-not-a-terrorist-asserts-karunanidhi.htmlನವದೆಹಲಿ, ಏ. 20 : ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಭಯೋತ್ಪಾದಕನಲ್ಲ. ಶ್ರೀಲಂಕಾ ಸೇನೆ ನಡೆಸುತ್ತಿರುವ ಸೇನೆ ಕಾರ್ಯಾಚರಣೆಯಲ್ಲಿ ಆತ ಮೃತಪಟ್ಟರೆ ನಾನು ಅತ್ಯಂತ ದುಃಖಪಡುವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಹೇಳಿದ್ದಾರೆ. ಪ್ರಭಾಕರನ್ ಭಯೋತ್ಪಾದಕನೆಂದು ನಾನು ಭಾವಿಸುವುದಿಲ್ಲ. ಆತ ಒಳ್ಳೆಯ ಮಿತ್ರನಾಗಿದ್ದಾನೆ. ಒಂದೊಮ್ಮೆ ಆತನ ಬೆಂಬಲಿಗರು ಕೃತ್ಯ ನಡೆಸಿದ್ದರೆ, ಅದು ಆತನ ತಪ್ಪಲ್ಲ 36063http://kannada.oneindia.com/img/2009/04/20-karunanidhi1e.jpg278318karunanidhiಸಚಿವ ಸ್ಥಾನದ ಬಿಕ್ಕಟ್ಟು ; ಡಿಎಂಕೆ ದೊಂಬರಾಟ/news/2009/05/22/dmk-cong-deadlock-karuna-leaves-for-chennai.htmlನವದೆಹಲಿ, ಮೇ. 22 : ಸಚಿವ ಸ್ಥಾನ ಹಂಚಿಕೆ ಸಂಬಂಧ ಯುಪಿಎಯೊಳಗೆ ಭಿನ್ನಮತ ಸ್ಫೋಟಗೊಂಡಿದ್ದು ಪ್ರಮುಖ ಮಿತ್ರಪಕ್ಷವಾದ ಡಿಎಂಕೆ ಮುನಿಸಿಕೊಂಡು ಬಾಹ್ಯ ಬೆಂಬಲ ನೀಡಿ ಸಂಪುಟದಿಂದ ಹೊರಗುಳಿಯಲು ನಿರ್ಧರಿಸಿದೆ. ಹಠಾತ್ತನೇ ನಡೆದ ಈ ಬೆಳವಣಿಗೆ ಶುಕ್ರವಾರ ಸಂಜೆ ಆರೂವರೆ ಗಂಟೆಗೆ ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಮನಮೋಹನ್ ಸಿಂಗ್ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದ ಸಂಭ್ರಮ ಕಳೆಗುಂದಿದೆ. ನವದೆಹಲಿಯಿಂದ 36815http://kannada.oneindia.com/img/2009/05/22-karunanidhi4.jpg278318karunanidhiಸಂಪುಟದರ್ಜೆ ಸಚಿವರೊಂದಿಗೆ ಪ್ರಮಾಣ ವಚನ/news/2009/05/22/only-cabinet-ministers-to-be-sworn-along-with-pm.htmlನವದೆಹಲಿ, ಮೇ. 22 : ಶುಕ್ರವಾರ ಸಂಜೆ ಮನಮೋಹನ್ ಸಿಂಗ್ ಅವರು ಎರಡನೇ ಅವಧಿಗೆ ನೂತನ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಇವರೊಂದಿಗೆ ಕ್ಯಾಬಿನೆಟ್ ದರ್ಜೆಯ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಖ್ಯವಾಗಿ ಪಿ ಚಿದಂಬರಂ, ಪ್ರಣಬ್ ಮುಖರ್ಜಿ, ಎ ಕೆ ಎಂಟನಿ, ಕಮಲನಾಥ್, ಕಪಿಲ್ ಸಿಬಲ್ ಹಾಗೂ ಎಸ್ ಎಂ ಕೃಷ್ಣ, 36823http://kannada.oneindia.com/img/2009/05/22-manmohan-singh3.jpg278318karunanidhiಕರಗಿದ ಡಿಎಂಕೆಗೆ ಮೂರು ಕ್ಯಾಬಿನೆಟ್ /news/2009/05/24/baalu-out-dmk-chiefs-son-to-get-cabinet-berth.htmlನವದೆಹಲಿ, ಚೆನ್ನೈ, ಮೇ. 24 : ಖಾತೆಗೆ ಸಂಬಂಧಿಸಿದಂತೆ ಕಳೆದೆರಡು ದಿನಗಳಿಂದ ಖ್ಯಾತೆ ತೆಗೆದಿದ್ದ ಡಿಎಂಕೆ ಕೊನೆಗೂ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದಿದ್ದು ರಾಜಿ ಸೂತ್ರಕ್ಕೆ ಬಂದಿದೆ. ಕಳೆದ ಯುಪಿಎ ಸರಕಾರದಲ್ಲಿ ಸಚಿವರಾಗಿದ್ದ ಟಿ ಆರ್ ಬಾಲು ಅವರಿಗೆ ಕೊಕ್ ನೀಡಲಾಗಿದ್ದು, ಎ ರಾಜಾ, ದಯಾನಿಧಿ ಮಾರನ್ ಹಾಗೂ ಮುಖ್ಯಮಂತ್ರಿ ಕರುಣಾನಿಧಿ ಮಗ ಎಂ ಕೆ ಅಳಗಿರಿ 36858http://kannada.oneindia.com/img/2009/05/24-karunanidhi2e.jpg278318karunanidhiತಮಿಳು ಹೆಸರಿಡಿ; ಚಿನ್ನದುಂಗುರ ಪಡೆಯಿರಿ/news/2009/06/03/karunanidhi-turns-86.htmlಚೆನ್ನೈ, ಜೂ.3: ತಮಿಳರ ಭಾಷಾಭಿಮಾನ ಅಥವಾ ಕುರುಡು ಅಭಿಮಾನದ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇವರು ತಮ್ಮ ಮೆಚ್ಚಿನ ನಟ ನಟಿಯರಿಗೆ ದೇವಾಲಯ ಕಟ್ಟಿ ಪೂಜಿಸುತ್ತಾರೆ. ತಮ್ಮ ರಾಜ್ಯ ಬಿಟ್ಟು ಬೇರೆಕಡೆ ಹೋದಾಗಲೂ ತಮ್ಮ ಭಾಷೆಯ ಮೇಲಿನ ಅಭಿಮಾನವನ್ನು ತೋರುತ್ತಿರುತ್ತಾರೆ. ತಮಿಳರ ಭಾಷಾಭಿಮಾನದ ಬಗ್ಗೆ ಇಲ್ಲಿದೆ ಮತ್ತೊಂದು ನಿದರ್ಶನ. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರ 86ನೇ ಹುಟ್ಟುಹಬ್ಬದ ದಿನವಾದ 37081http://kannada.oneindia.com/img/2009/06/03-m-karunanidhi2.jpg36618bsyನೋಟು ಎಣಿಸಿಯೆಣಿಸಿ ಯಡ್ಡಿ ಸುಸ್ತು/news/2009/10/14/bsy-tired-after-counting-cash-hd-revanna.htmlಬೆಂಗಳೂರು ಅ 14 : ಮುಖ್ಯಮಂತ್ರಿಗಳು ಬೇಗ ಗುಣಮುಖರಾಗಿ ಜಿಂದಾಲ್ ಆಸ್ಪತ್ರೆಯಿಂದ ಬಿಡುಗಡೆಯಾಗಲಿ ಎಂದು ಹಾರೈಸುತ್ತೇನೆ. ಪಾದಯಾತ್ರೆಯಲ್ಲಿ ಸಿಎಂ 700 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದಾರೆ. ಇದೇನು ಸಾಮಾನ್ಯವೇ, ನೋಟುಗಳನ್ನು ಎಣಿಸಿ ಎಣಿಸಿ ಪಾಪ ಅವರಿಗೆ ಆಯಾಸವಾಗಿದೆ ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ರೇವಣ್ಣ ಲೇವಡಿ ಮಾಡಿದ್ದಾರೆ.ದೇಶವೇ ತಲೆ 39694http://kannada.oneindia.com/img/2009/10/14-hd-revanna1.jpg36618bsyಭಾರತದ ಸುತ್ತ ಕೋಟೆ ಕಟ್ಟುತ್ತಿರುವ ದುಷ್ಟಕೂಟ/news/2009/10/22/china-sharpening-knives-for-another-war-part3.html(ಮುಂದುವರಿದಿದೆ...)ರಣಕಹಳೆ..ಭಯೋತ್ಪಾದನೆಯ ನಿಗ್ರಹಕ್ಕೆಂದು ಅಮೆರಿಕ ನೀಡುತ್ತಿರುವ ಆರ್ಥಿಕ ಮತ್ತು ಮಿಲಿಟರಿ ನೆರವುಗಳನ್ನು ಆರಂಭದಿಂದಲೂ ಪಾಕಿಸ್ತಾನವು ಭಾರತದ ವಿರುದ್ಧ ಬಳಸುತ್ತಿದೆ. (ಈ ವಿಷಯವನ್ನು ಈಚೆಗೆ ಪಾಕ್‌ನ ಮಾಜಿ ಅಧ್ಯಕ್ಷ ಮುಷರಫ್ ಅವರೇ ಒಪ್ಪಿಕೊಂಡಿದ್ದಾರೆ. ನಂತರ ಅವರು ತಮ್ಮ ಹೇಳಿಕೆಯನ್ನು ನಿರಾಕರಿಸುವ ನಾಟಕ ಆಡಿದ್ದು ಬೇರೆ ಮಾತು.) ಈ ದುರ್ಬಳಕೆಯ ಸಂಗತಿ ಗೊತ್ತಿದ್ದೂ ಅಮೆರಿಕವು ಪಾಕಿಸ್ತಾನಕ್ಕೆ ನೆರವು ಮುಂದುವರಿಸಿದೆ. * ಚೀನಾವು 39798http://kannada.oneindia.com/img/2009/10/22-india-china-flags1.jpg36618bsyಭಾರತದ ಸುತ್ತ ಕೋಟೆ ಕಟ್ಟುತ್ತಿರುವ ದುಷ್ಟಕೂಟ/news/2009/10/22/china-sharpening-knives-for-another-war-part2.html(ಮುಂದುವರಿದಿದೆ...)ಮತ್ತೆ ಯುದ್ಧವೇ?1962ರಂತೆಯೇ ಮತ್ತೊಂದು ಯುದ್ಧಕ್ಕೆ ಚೀನಾ ತನ್ನನ್ನಿಂದು ಅಣಿಮಾಡಿಕೊಳ್ಳುತ್ತಿದೆ. ಅದಕ್ಕೆ ಮುನ್ನುಡಿಯಾಗಿ ಭಾರತದ ಸನ್ನದ್ಧತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳುತ್ತಿದೆ. ಇಡೀ ಮಣಿಪುರ ಪ್ರಾಂತ್ಯವೇ ತನ್ನದೆಂದು ಹೇಳಿಕೊಳ್ಳುತ್ತಿರುವ ಧೂರ್ತ ಚೀನಾ ಮುಖ್ಯವಾಗಿ ತವಾಂಗ್ ಬೌದ್ಧಕ್ಷೇತ್ರದಮೇಲೆ ತನ್ನ ಕಣ್ಣಿರಿಸಿದೆ.ನಾವಿಂದು 62ರ ಸ್ಥಿತಿಗಿಂತ ಹೆಚ್ಚು ಶಕ್ತರಾಗಿರಬಹುದು. ಆದರೆ ಚೀನಾ ನಮಗಿಂತ ಹೆಚ್ಚು ಶಕ್ತವಾಗಿದೆಯೆನ್ನುವುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನಮಗಿಂತ ಹೆಚ್ಚು ಸೈನ್ಯಬಲ ಮತ್ತು ಶಸ್ತ್ರಾಸ್ತ್ರಗಳನ್ನು 39799http://kannada.oneindia.com/img/2009/10/22-india-china-flags1.jpg36618bsyಭಾರತದ ಸುತ್ತ ಕೋಟೆ ಕಟ್ಟುತ್ತಿರುವ ದುಷ್ಟಕೂಟ/news/2009/10/22/china-sharpening-knives-for-another-war.htmlಯುದ್ಧ ಯಾರಿಗೂ ಒಳ್ಳೆಯದಲ್ಲ. ಯುದ್ಧದ ಪರಿಣಾಮ ಎಂದಿದ್ದರೂ ನಷ್ಟ ಮತ್ತು ನಾಶವೇ. ಆದ್ದರಿಂದ, ಸಂಭವನೀಯ ಯುದ್ಧವು ತಪ್ಪಬೇಕೆಂದರೆ ಭಾರತವು ತನ್ನ ಪರವಾಗಿ ವಿಶ್ವದ ಒಲವನ್ನು ಗಳಿಸಬೇಕಾದುದು ಅತ್ಯವಶ್ಯ. ಭಾರತದ ನಿಲುವಿಗೆ ವಿಶ್ವದ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸತೊಡಗಿದವೆಂದರೆ ಆಗ ಚೀನಾವು ಯುದ್ಧದ ಬಗ್ಗೆ ಮರುಚಿಂತನೆ ಮಾಡುತ್ತದೆ. * ಎಚ್. ಆನಂದರಾಮ ಶಾಸ್ತ್ರೀ5 ಸೆಪ್ಟೆಂಬರ್ 2009. ಮುಖ್ಯಮಂತ್ರಿ ಯಡಿಯೂರಪ್ಪನವರು ಚೀನಾದ 39800http://kannada.oneindia.com/img/2009/10/22-india-china-flags1.jpg36618bsyನಾವು ನೀವು ಮತ್ತು ಬಿಜೆಪಿ ಕರೆಂಟು/column/sham/2009/1027-power-failures-and-back-up-power.htmlಬೆಂಗಳೂರು, ಅ.27 : "ಮತ್ತೆ ವಿದ್ಯುತ್ ಕಡಿತ, ನಗರದಲ್ಲಿ ದಿನಕ್ಕೆ 2 ಗಂಟೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 8 ಗಂಟೆ ಕರೆಂಟು ಖೋತಾ" ಎಂಬಂತಹ ಸುದ್ದಿ ಪತ್ರಗಳನ್ನು ಬರೆದೂ ಬರೆದೂ ನಮ್ಮ ಉಪಸಂಪಾದಕರಿಗೆ ಬೇಜಾರಾಗಿದೆಯಂತೆ. "ಈ ಭಾಜಪ ಸರಕಾರ ಬಂದನಂತರವಂತೂ ಬರೆದದ್ದನ್ನೇ ಬರೆಯಬೇಕಾಗಿರುವ ಕೆಲಸ ಸಾಕು ಸಾಕಾಗಿದೆ ಸಾರ್" ಎಂದು ಜನರೇಟರ್ ಕರೆಂಟಿನಿಂದ ಉದ್ದೀಪನಗೊಂಡ ಕಂಪ್ಯೂಟರ್ ನಲ್ಲಿ 39897http://kannada.oneindia.com/img/2009/10/27-sham7.jpgnews"> ಇದು ಪ್ರತಿಮೆಯಲ್ಲ,ಸಾಮರಸ್ಯಕ್ಕೆ ಎರಕ | History of Karnataka|Tiruvallavar|Statue|Karunanidhi| bSY| Bangalore East| ಇದು ಪ್ರತಿಮೆಯಲ್ಲ,ಸಾಮರಸ್ಯಕ್ಕೆ ಎರಕ - Kannada Oneindia

ಇದು ಪ್ರತಿಮೆಯಲ್ಲ,ಸಾಮರಸ್ಯಕ್ಕೆ ಎರಕ

Tiruvalluvar
ಬೆಂಗಳೂರು, ಆ. 9 : ಹದಿನೆಂಟು ವರ್ಷಗಳ ಕಾಲ ಕತ್ತಲೆಯ ಕೋಣೆಯಲ್ಲಿ ಕೊಳೆಯುತ್ತ ಬಿದ್ದಿದ್ದ ಜ್ಞಾನಮೂರ್ತಿ ತಿರುವಳ್ಳವರ್ ಅವರ ಪ್ಲಾಸ್ಟರ್ ಆಫ್ ಪ್ಯಾರಿಸ್ ಕಂ ಕಂಚಿನ ಪ್ರತಿಮೆಗೆ ಇಂದು ಬೆಂಗಳೂರಿನಲ್ಲಿ ಬೆಳಕು ತೋರಿಸಲಾಯಿತು. ತನ್ಮೂಲಕ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಂಬಂಧಕ್ಕೆ ಹೊಸ ಭಾಷ್ಯ ಬರೆಯಲಾಯಿತು. ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಪ್ರತಿಮೆಯ ಅನಾವರಣವನ್ನು ಭಾನುವಾರ ಬೆಳಗ್ಗೆ 11.30ಗೆ ವಿದ್ಯುಕ್ತವಾಗಿ ನೆರವೇರಿಸಿದರು.

ಈ ಮೂಲಕ ಕರ್ನಾಟಕದ ಸಮಕಾಲೀನ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲು ನೆಡಲಾಯಿತು.ಪೂರ್ವ ಬೆಂಗಳೂರಿನ ಹಲಸೂರು ಬಡಾವಣೆಯಲ್ಲಿರುವ ಆರ್ ಬಿ ಎ ಎನ್ ಎಂ ಎಸ್ ಮೈದಾನದಲ್ಲಿ ಜರುಗಿದ ಅನಾವರಣ ಕಾರ್ಯಕ್ರಮ ಎಲ್ಲ ಸರಕಾರಿ ಶಿಷ್ಟೋಪಚಾರ ಮತ್ತು ಬಿಗಿಭದ್ರತೆಯ ನಡುವೆ ಸಾಕಾರಗೊಂಡಿತು.

ಭಾಷೆ,ಪ್ರಾಂತ್ಯದ ಮಿತಿಗಳನ್ನು ಮೀರಿ ಬೆಳೆದ ದಾರ್ಶನಿಕ ತಿರುವಳ್ಳುವರ್ ಎಂದು ಯಡಿಯೂರಪ್ಪ ತಮ್ಮ ಭಾಷಣದಲ್ಲಿ ನುಡಿದರು. ಉಭಯ ರಾಜ್ಯಗಳ ಸಾಹಿತಿಗಳು, ಪ್ರತಿಪಕ್ಷಗಳು ಈ ಕಾರ್ಯಕ್ರಮಕ್ಕೆ ಪೂರ್ಣ ಬೆಂಬಲ ನೀಡಿದ್ದಾರೆ ಎಂದರು. ತಿರುವಳ್ಳುವರ್ ಅವರ ಕೃತಿ ತಿರುಕ್ಕುರಳ್ ವೇದ ಉಪನಿಷತ್ತಿಗೆ ಸಮ. ಮಾನವೀಯ ಮೌಲ್ಯ ಮತ್ತು ಆದರ್ಶಗಳನ್ನು ಸರ್ವಕಾಲಕ್ಕೆ ಸಲ್ಲುವಂತೆ ಬರೆದ ಹೆಗ್ಗಳಿಕೆ ಅವರ 1300 ತ್ರಿಪದಿಗಳಲ್ಲಿ ಅಡಗಿದೆ ಎಂದು ಯಡ್ಡಿ ವಿವರಿಸಿದರು. ಇದು ಕೇವಲ ಪ್ರತಿಮೆಗಳ ಅನಾವರಣವಲ್ಲ, ತಮಿಳುನಾಡು ಮತ್ತು ಕರ್ನಾಟಕದ ನಡುವೆ ಸುಮಧುರ ಬಾಂಧವ್ಯಕ್ಕೆ ಹೊಯ್ಯುತ್ತಿರುವ ಎರಕ ಎಂದು ಯಡ್ಡಿಯೂರಪ್ಪ ಬಣ್ಣಿಸಿದರು.

ಅಂತೆಯೇ, ಸರ್ವಜ್ಞಮೂರ್ತಿ ಕೂಡ ತಮ್ಮ ತ್ರಿಪದಿಗಳ ಮೂಲಕ ಮನುಷ್ಯ ವಿವೇಕಕ್ಕೆ ಭಾಷ್ಯ ಬರೆದವರು ಎಂದು ಹೇಳಲು ಅವರು ಮರೆಯಲಿಲ್ಲ. ಭಾರತದ ಅನೇಕ ರಾಜ್ಯಗಳಲ್ಲಿ ಗಡಿನಾಡಲ್ಲಿ ಭಿನ್ನಾಭಿಪ್ರಾಯಗಳು ಇವೆ. ಸಾಮರಸ್ಯ ಮತ್ತು ಉದಾತ್ತ ಭಾವನೆಯಿಂದ ಇವೆಲ್ಲ ಪರಿಹಾರಗೊಳ್ಳಬೇಕು. ಈ ದಿಸೆಯಲ್ಲಿ ಪ್ರತಿಮೆಗಳ ಅನಾವರಣ ಮೂಲಕ ತಮಿಳುನಾಡು ಮತ್ತು ಕರ್ನಾಟಕ ಇಡೀ ಭಾರತಕ್ಕೆ ಮಾದರಿ ಎನಿಸಿದೆ. ಸ್ನೇಹ ಮತ್ತು ಹೊಂದಾಣಿಕೆಯ ಬದುಕಿಗೆ ನಾಂದಿ ಹಾಡಿದೆ ಎಂದು ಯಡ್ಡಿ ಹೇಳಿದರು.

ಕರ್ನಾಟಕದಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಬೇಕೆನ್ನುನುವುದು ನನ್ನ 18 ವರ್ಷಗಳ ಕನಸಾಗಿತ್ತು. ಆದರೆ ಅದು ಈಡೇರಿರಲಿಲ್ಲ. ಇವತ್ತು ಈಡೇರಿತು. ಇದಕ್ಕೆ ಕಾರಣ ಯಡಿಯೂರಪ್ಪ ಅವರ ಸ್ನೇಹ ಮತ್ತು ರಚನಾತ್ಮಕ ನಿಲವು ಎಂದು ಪ್ರತಿಮೆ ಅನಾವರಣದ ನಂತರ ಎಂ. ಕರುಣಾನಿಧಿ ತಮ್ಮ ಭಾಷಣದಲ್ಲಿ ಹೇಳಿದರು. ಅವರು ತಮಿಳಿನಲ್ಲಿ ಭಾಷಣ ಮಾಡಿದರು. ರಾಜಕೀಯ, ಪ್ರಾಂತೀಯ ಭಾವನೆಗಳ ಎಲ್ಲೆಗಳನ್ನು ಮೀರಿ, ಹೃದಯ ಹೃದಯಗಳನ್ನು ಬೆಸೆಯುವುದಕ್ಕೆ ಪ್ರತಿಮೆ ಅನಾವರಣ ಸಾಕ್ಷಿಯಾಗಿದೆ. ನನಗೆ 89 ವರ್ಷ, ಯಡಿಯೂರಪ್ಪನವರಿಗೆ 67 ವರ್ಷ. ನನಗಿಂತ ಚಿಕ್ಕವರು. ಅವರನ್ನು ತಂಬಿ ಎಂದು ಸಂಭೋಧಿಸುವುದಕ್ಕೆ ತಮಗೆ ಹೆಮ್ಮೆ ಎನಿಸುತ್ತದೆ ಎಂದರು. ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪನೆ ಕಾರ್ಯಕ್ರಮ ಅತ್ಯಂತ ಸಂಭ್ರಮ ಮತ್ತು ಗೌರವದಿಂದ ನಡೆಯುತ್ತದೆ ಎಂದು ಭರವಸೆ ನೀಡಿದರು. ಆಡುಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಿವೇಕದ ಮಾತಿಲ್ಲ ಎಂದೂ ಈ ಸಂದರ್ಭದಲ್ಲಿ ಕರುಣಾ ನುಡಿದರು. ಅಂತಿಮವಾಗಿ ಕನ್ನಡಿಗರನ್ನು ಅಭಿನಂದಿಸಿದರು. ಕರುಣಾನಿಧಿ ಅವರ ಮಡದಿ ದಯಾಳು ಅಮ್ಮಾಳ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಲ್ಲೇಶ್ವರಂನಲ್ಲಿ ಸುಮಾರು 50 ಮಂದಿ ಕರವೇ ಕಾರ್ಯಕರ್ತರನ್ನು ಭಾನುವಾರ ಬೆಳಗ್ಗೆ ಬಂಧಿಸಿದ ಪ್ರಕರಣ ಹಾಗೂ ಮೂಡಲಪಾಳ್ಯದಲ್ಲಿ ರಸ್ತೆ ತಡೆ ಘಟನೆ ಹೊರತುಪಡಿಸಿದರೆ ನಗರ ಬಹುತೇಕ ಶಾಂತವಾಗಿತ್ತು. ಗಣ್ಯರು, ಅತಿಗಣ್ಯರು, ಜೆಡ್ ಸೆಕ್ಯುರಿಟಿ ಭದ್ರತೆಯಲ್ಲಿ ಸಂಚರಿಸುವವರ ಹಾದಿ ಬೀದಿಗಳಲ್ಲಿ ಸಂಚಾರ ನಿಯಂತ್ರಣ ವ್ಯವಸ್ಥೆ ಕಣ್ಣುಕುಕ್ಕುವಂತಿತ್ತು. ಮೋಡ ಮುಸುಕಿದ ವಾತಾವರಣ, ರಭಸದ ಮೇಲ್ಮೈ ಗಾಳಿಯ ವಾತಾವರಣದಲ್ಲಿ ಬೆಂಗಳೂರು ಈ ಭಾನುವಾರವನ್ನು ಕಳೆಯಿತು.
(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+