36611yeddyurappaಮಳೆ : 20 ಸಾವಿರ ಕೋಟಿ ರುಪಾಯಿ ನಷ್ಟ/news/2009/10/05/losses-due-to-rain-and-floods-is-over-20cr-rs-bsy.htmlಬೆಂಗಳೂರು, ಅ. 5 : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮುನಿಸಿಕೊಂಡ ಮಳೆರಾಯನ ಹೊಡೆತಕ್ಕೆ ಸುಮಾರು 20 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ. ಇದನ್ನು ಸ್ಪಷ್ಟಪಡಿಸಿದವರು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಕಂಡೂ ಕೇಳರಿಯದ ಅತಿವೃಷ್ಟಿಗೆ ರಾಜ್ಯದ ಜನತೆ ತತ್ತರಿಸಿದೆ. ಕೂಡಲೇ ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಕಳುಹಿಸಬೇಕು ಎಂದು ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಈ 39528http://kannada.oneindia.com/img/2009/10/05-rain-submerged-village1.jpg36611yeddyurappaಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg36611yeddyurappaಪ್ರವಾಹ ಪೀಡಿತರ ಕಣ್ಣೀರಿಗೆ ಕೇಂದ್ರದ ತಣ್ಣೀರು/news/2009/10/07/utilise-calamity-relief-fund-chidambaram.htmlನವದೆಹಲಿ, ಅ. 7 : ನೆರೆ ಕಾರ್ಯಕ್ಕೆ ರಾಜ್ಯ ಸರಕಾರ ತುರ್ತಾಗಿ ವಿಪತ್ತು ಪರಿಹಾರ ನಿಧಿಯ ಹಣ ಬಳಸಿಕೊಳ್ಳಬೇಕು ಎನ್ನುವ ಮೂಲಕ ಗೃಹ ಸಚಿವ ಪಿ ಚಿದಂಬರಂ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಿದ್ದಾರೆ. ವಿಪತ್ತು ಪರಿಹಾರ ನಿಧಿಯ ಶೇ. 75ರಷ್ಟು ಹಣ ಖರ್ಚಾಗುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮುಂಗಡ ಹಣ ನೀಡುವ ವ್ಯವಸ್ಥೆ ಮಾಡಲಾಗುವುದು 39554http://kannada.oneindia.com/img/2009/10/07-flood-andhra1.jpg36611yeddyurappaಕೇಂದ್ರ ಪರಿಹಾರ : ರಾಜ್ಯಕ್ಕೆ ಮತ್ತೆ ಕಮ್ಮಿ ಹಣ /news/2009/10/07/centre-releases-funds-for-flood-hit-ap-karnataka.htmlನವದೆಹಲಿ, ಅ. 7 : ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ ಸಾಕಷ್ಟು ಪ್ರಮಾಣದ ಆಸ್ತಿ ಪಾಸ್ತಿ, ಮತ್ತು ಪ್ರಮಾಣ ನಷ್ಟ ಉಂಟಾಗಿದ್ದು, ಮಂಗಳವಾರ ಕೇಂದ್ರ ಸರಕಾರ ಎರಡನೇ ಹಂತದ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಎರಡನೇ ಹಂತದ ಪರಿಹಾರದಲ್ಲೂ ಕೇಂದ್ರ ಸರಕಾರ ತಾರತಮ್ಯ ಅನುಸರಿಸಿರುವುದು ಸಾಬೀತಾಗಿದೆ. ಅತಿವೃಷ್ಟಿಗೆ ತುತ್ತಾಗಿರುವ ಈ ಎರಡು ರಾಜ್ಯಗಳಿಗೆ ಪ್ರಕೃತಿ ವಿಕೋಪ ನಿಧಿಯಡಿ 39564http://kannada.oneindia.com/img/2009/10/07-rain-havoc-nk1.jpg36611yeddyurappaಇತರ ರಾಜ್ಯಗಳತ್ತ ಕೈಯೊಡ್ಡಿದ ಯಡಿಯೂರಪ್ಪ/news/2009/10/07/yeddyurappa-writes-letter-to-other-chief-ministers.htmlಬೆಂಗಳೂರು, ಅ. 7 : ಹಿಂದೆಂದೂ ಕಾಣದ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಉತ್ತರ ಕರ್ನಾಟಕದ 18 ಜಿಲ್ಲೆಗಳ ನಿರ್ವಸಿತ ಜನರಿಗೆ ಜೀವನ ಕಲ್ಪಿಸಿಕೊಡಲು ಮತ್ತು ರಸ್ತೆ, ಸೇತುವೆ, ಕಟ್ಟಡಗಳ ಪುನರ್ ನಿರ್ಮಾಣಕ್ಕಾಗಿ ಮುಕ್ತಹೃದಯದಿಂದ ಸಹಾಯಹಸ್ತ ಚಾಚಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ರಾಜಸ್ತಾನ, ಪಂಜಾಬ್, ಬಿಹಾರ್, ಚತ್ತೀಸ್ ಘರ್, ದೆಹಲಿ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಖಂಡ್, 39569http://kannada.oneindia.com/img/2009/10/07-yediyurappa3.jpg194428karnataka high courtಕೆಂಪು ಕಟ್ಟಡದಲ್ಲಿ ನಡೆದಿದೆ ಮೋಹಿನಿ ಆಟ್ಟಂ/news/2009/07/06/ghost-menace-in-karnataka-high-court.htmlನಂಬಿದ್ರೆ ನಂಬಿ ಬಿಟ್ರೆ ಬಿಡಿ ರಾಜ್ಯದ ಉಚ್ಚ ನ್ಯಾಯಾಲಯದ ಕಾರಿಡಾರಿನಲ್ಲಿ ಅಮವಾಸ್ಯೆಯ ಕರಾಳ ರಾತ್ರಿಯಂದು ಮೋಹಿನಿ ಕಾಣಿಸಿಕೊಂಡಿದ್ದಾಳೆ ಎಂಬ ಸುದ್ದಿ ಬಲವಾಗಿ ಹಬ್ಬಿದೆ. ಇದು ಕೇವಲ ಭ್ರಮೆ, ಮನಸಿನ ಭ್ರಾಂತಿ ಅಂತ ವಿಜ್ಞಾನಿ ಸಿಆರ್ ಚಂದ್ರಶೇಖರ್ ಹೇಳಿದ್ದರೆ, ಜ್ಯೋತಿಷಿ ದೈವಜ್ಞ ಸೋಮಯಾಜಿ ಹಳೆ ಕಟ್ಟಡಗಳಲ್ಲಿ ಇದು ಸಾಮಾನ್ಯ ಅಂತ ವ್ಯತಿರಿಕ್ತ ಅಭಿಮತ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ನಿಮ್ಮ 37806http://kannada.oneindia.com/img/2009/07/06-ghost-hc1.jpg194428karnataka high courtವಿನಿವಿಂಕ್ ಶಾಸ್ತ್ರಿಗೆ ಸಿಕ್ತು ಮಧ್ಯಂತರ ಜಾಮೀನು/news/2009/07/13/vinivinc-shastry-gets-interim-bail-from-sc.htmlನವದೆಹಲಿ, ಜು. 13 : ನೂರಾರು ಮಂದಿಯ ತಲೆ ಮೇಲೆ ಚಾಪೆ ಎಳೆದಿದ್ದ ಬಹುಕೋಟಿ ಹಗರಣ ರೂವಾರಿ ವಿನಿವಿಂಕ್ ಶಾಸ್ತ್ರಿ ಅಲಿಯಾಸ್ ಕೆ ಎನ್ ಶ್ರೀನಿವಾಸ್ ಶಾಸ್ತ್ರಿಗೆ ಸುಪ್ರಿಂಕೋರ್ಟ್ ನಿಂದ ಎರಡು ತಿಂಗಳ ಅವಧಿಗೆ ಮಧ್ಯಂತರ ಮುಕ್ತಿ ಸಿಕ್ಕಿದೆ. ವಿನಿವಿಂಕ್ ಶಾಸ್ತ್ರಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ನ ವಿಭಾಗೀಯಪೀಠ ಎರಡು ತಿಂಗಳ ಅವಧಿಗೆ ಜಾಮೀನು 37949http://kannada.oneindia.com/img/2009/07/13-vinivinc-shastri1e.jpg194428karnataka high courtಜನರಿಗೆ ನ್ಯಾಯದಾನ ಶೀಘ್ರ ದೊರಕಬೇಕು : ಮುಖ್ಯಮಂತ್ರಿ/news/2009/08/09/people-should-get-speedy-justice-bsy.htmlಬೆಂಗಳೂರು, ಆ, 9 : ಜನ ಸಮಾನ್ಯರ ವಿಶ್ವಾಸವೇ ನ್ಯಾಯಾಲಯದ ಹೆಬ್ಬಾಗಿಲಾಗಬೇಕು. ಹೀಗಾದಾಗ ಮಾತ್ರ ಜನರಿಗೆ ನ್ಯಾಯಾಲಯದ ಮೇಲಿನ ವಿಶ್ವಾಸ, ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಶೀಘ್ರ ಇತ್ಯರ್ಥವಾಗಬೇಕು. ಜನರಿಗೆ ತ್ವರಿತವಾಗಿ, ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅವರು 38518http://kannada.oneindia.com/img/2009/08/09-dinakaran-bsy1.jpg194428karnataka high courtಹೈಕೋರ್ಟ್ ಮೆಟ್ಟಿಲೇರಿದ 'ಜಂಭದ ಹುಡುಗಿ'/movies/controversy/2009/08/21-jambada-hudugi-director-moves-court.htmlತಮ್ಮ 'ಜಂಭದ ಹುಡುಗಿ' ಚಿತ್ರ ಸಬ್ಸಿಡಿಯಿಂದ ವಂಚಿತವಾಗಿದೆ ಎಂದು ಆರೋಪಿಸಿ ನಿರ್ದೇಶಕಿ ಪ್ರಿಯಾ ಹಾಸನ್ ಕೋರ್ಟ್ ನ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ಬುಧವಾರ ರಿಟ್ ಅರ್ಜಿ ಸಲ್ಲಿಸಿದ್ದರು. ಸಬ್ಸಿಡಿ ಪಟ್ಟಿಗೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯವನ್ನು ಪ್ರಿಯಾ ಕೋರಿದ್ದಾರೆ. ಇವರ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್ ವಿವರಣೆ ನೀಡುವಂತೆ ಗುರುವಾರ ರಾಜ್ಯ 38765http://kannada.oneindia.com/img/2009/08/21-priya-hassan1.jpg194428karnataka high courtಬಿಬಿಎಂಪಿ : ಅ 23ರೊಳಗೆ ಚುನಾವಣೆ ಪ್ರಕ್ರಿಯೆ /news/2009/09/17/hc-directs-sec-govt-for-bbmp-election.htmlಬೆಂಗಳೂರು, ಸೆ. 17 : ಬಿಬಿಎಂಪಿ ಚುನಾವಣೆ ನಡೆಸಲು ಆಕ್ಟೋಬರ್ 23ರೊಳಗೆ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸುವಂತೆ ಚುನಾವಣಾ ಆಯೋಗ ಮತ್ತು ಸರಕಾರಕ್ಕೆ ಇಂದು ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ. ಇದರೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಹಿಡಿದಿದ್ದ ಗ್ರಹಣ ಕೊನೆಗೂ ಬಿಟ್ಟಂತಾಗಿದೆ.ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿಡಿ ದಿನಕರನ್ ಹಾಗೂ ಸಭಾಹಿತ್ ಅವರನ್ನೊಳಗೊಂಡ 39238http://kannada.oneindia.com/img/2009/09/17-bcc1e.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpgnews"> ಜನರಿಗೆ ನ್ಯಾಯದಾನ ಶೀಘ್ರ ದೊರಕಬೇಕು : ಮುಖ್ಯಮಂತ್ರಿ | Yeddyurappa | Christ college | DP Dinakar | Justice | Judiciary - ಜನರಿಗೆ ನ್ಯಾಯದಾನ ಶೀಘ್ರ ದೊರಕಬೇಕು : ಮುಖ್ಯಮಂತ್ರಿ - Kannada Oneindia

ಜನರಿಗೆ ನ್ಯಾಯದಾನ ಶೀಘ್ರ ದೊರಕಬೇಕು : ಮುಖ್ಯಮಂತ್ರಿ

Dinakaran felicitates BS Yeddyurappa
ಬೆಂಗಳೂರು, ಆ, 9 : ಜನ ಸಮಾನ್ಯರ ವಿಶ್ವಾಸವೇ ನ್ಯಾಯಾಲಯದ ಹೆಬ್ಬಾಗಿಲಾಗಬೇಕು. ಹೀಗಾದಾಗ ಮಾತ್ರ ಜನರಿಗೆ ನ್ಯಾಯಾಲಯದ ಮೇಲಿನ ವಿಶ್ವಾಸ, ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಶೀಘ್ರ ಇತ್ಯರ್ಥವಾಗಬೇಕು. ಜನರಿಗೆ ತ್ವರಿತವಾಗಿ, ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅವರು ನಗರದ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿಂದು ರಾಜ್ಯ ಉಚ್ಛ ನ್ಯಾಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ನ್ಯಾಯಾಂಗ ಅಧಿಕಾರಿಗಳ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.

ಪರಿಶೀಲನಾ ಸಭೆ ನ್ಯಾಯಾಂಗ ಅಧಿಕಾರಿಗಳಿಗೆ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಸ್ವಯಂ ಕಾರ್ಯ ಯೋಜನೆ ರೂಪಿಸಿಕೊಳ್ಳಲು ಅನುಕೂಲವಾಗಲಿದ್ದು, ಹೊಸ ವಿಧಾನಗಳ ಮೂಲಕ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ರಾಜ್ಯ ಉಚ್ಛ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಪಿ.ಡಿ.ದಿನಕರನ್ ಅವರು ಮಾತಾಡುತ್ತಾ, ಪರಿಶೀಲನಾ ಸಭೆ ನ್ಯಾಯಾಂಗ ಅಧಿಕಾರಿಗಳ ತಪ್ಪನ್ನು ತೋರಲು ಅಥವಾ ಕಾರ್ಯಒತ್ತಡ ಹೇರುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿಲ್ಲ, ಬದಲಿಗೆ ಯಾವ ಜನ ಸಾಮಾನ್ಯರಿಂದ ನಾವು ನಮ್ಮ ಜೀವನ ನಿರ್ವಹಣೆಗೆ ವೇತನ ಮುಂತಾದ ಸವಲತ್ತುಗಳನ್ನು ಪಡೆಯುತ್ತೇವೆಯೋ ಅಂತಹ ಜನರ ಅಗತ್ಯತೆಯ ಬಗ್ಗೆ ಕೆಲವರು ಕಣ್ಣು ಮುಚ್ಚಿ ಕುಳಿತಿದ್ದು, ಇಂತಹವರ ಕಣ್ಣನ್ನು ತೆರೆಸುವ ಸಭೆ ಇದಾಗಲಿದೆ ಎಂದರು.

ಇಂದು ನ್ಯಾಯಾಂಗ ವ್ಯವಸ್ಥೆಯಲ್ಲಿ ಎದುರಾಗಿರುವ ಸವಾಲುಗಳು, ಭವಿಷ್ಯದಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಪ್ರತಿಯೊಬ್ಬ ನ್ಯಾಯಾಂಗ ಅಧಿಕಾರಿಗಳು ಸ್ವಯಂ ಯೋಚಿಸುವಂತಾಗಬೇಕು. ಈ ನಿಟ್ಟಿನಲ್ಲಿ ಗುಣಮಟ್ಟ ಆಧಾರಿತ ಕಾರ್ಯ ಯೋಜನೆ ಸಿದ್ದಪಡಿಸುವ ಕುರಿತು ಯೋಚಿಸುವಿಕೆ, ಕಾರ್ಯಯೋಜನೆ ಸಿದ್ದಪಡಿಸುವಿಕೆ ಹಾಗೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ಇಂದಿನ ಸಭೆಯ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.

ಶುದ್ಧ ಗಾಳಿ , ಶುದ್ಧ ನೀರು ಹೇಗೆ ಜನರಿಗೆ ಅತಿ ಅವಶ್ಯಕವೋ ಹಾಗೆಯೇ ಶುದ್ಧ ನ್ಯಾಯದಾನ ಇಂದಿನ ಅಗತ್ಯತೆಗಳಲ್ಲಿ ಒಂದಾಗಿದೆ. ಆದ್ಯತೆ ಮೇರೆಗೆ ಪ್ರಕರಣಗಳ ಶೀಘ್ರ ಇತ್ಯರ್ಥಗೊಳಿಸುವಿಕೆ, ಪ್ರಕರಣ ಇತ್ಯರ್ಥಕ್ಕೆ ಸಮಯ ನಿಗದಿಗೊಳಿಸುವಿಕೆ ಇವೇ ಮುಂತಾದ ಕಾರ್ಯಯೋಜನೆ ರೂಪಿಸುವ ಹೊಣೆ ನಿಮ್ಮೆಲ್ಲರ ಮೇಲಿದೆ ಎಂದರು. ನ್ಯಾಯಮೂರ್ತಿ ವಿ. ಗೋಪಾಲ ಹೆಗಡೆ ಹಾಗೂ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+