ಖಜಾನೆ ಲೂಟಿ : ಸಿಎಂಗೆ ರೇವಣ್ಣ ಸವಾಲ್

ರಾಜ್ಯದ ವಿವಿಧ ಇಲಾಖೆಗಳಲ್ಲಿ ನೂರಾರು ಕೋಟಿ ರೂಪಾಯಿ ಬಿಲ್ ಗಳು ಬಾಕಿ ಇದೆ. ಲೋಕೋಪಯೋಗಿ ಇಲಾಖೆಯೊ೦ದರಲ್ಲೇ ಸುಮಾರು 800 ಕೋಟಿ ರೂಪಾಯಿಯಸ್ಟು ಬಿಲ್ ಬಾಕಿಯಿದೆ. ಇದು ಇಲ್ಲ ಎ೦ದು ದೃಢಪಡಿಸಿದರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎ೦ದು ಮುಖ್ಯಮ೦ತ್ರಿಗಳಿಗೆ ಸವಾಲೆಸೆದಿದ್ದಾರೆ.
ಆರ್ಥಿಕ ಪರಿಸ್ಥಿತಿ ಹದಗೆಟ್ಟ ಬಗ್ಗೆ ಯಾವ ಯಾವ ಇಲಾಖೆಗಳ ಹಣ ಬಾಕಿಯಿದೆ, ಕೇ೦ದ್ರದಿ೦ದ ಎಷ್ಟು ಹಣ ಬ೦ದಿದೆ. ಎಷ್ಟು ವೆಚ್ಚವಾಗಿದೆ ಎ೦ಬಿತ್ಯಾದಿಗಳ ಬಗ್ಗೆ ಸರಕಾರ ಶ್ವೇತಪತ್ರ ಹೊರಡಿಸಲಿ. ಪ್ರಸ್ತುತ ನಡೆಯುತ್ತಿರುವ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ "ಹಗರಣಗಳ ಖ್ಯಾತಿಯ" ಬಿಜೆಪಿ ಸರಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎ೦ದು ರೇವಣ್ಣ ಕಿಡಿಕಾರಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications