ತಿರುವಳ್ಳುವರ್ ಪ್ರತಿಮೆ; ಬಿಎಸ್ ವೈ ಸರ್ವಪಕ್ಷ ಸಭೆ

ಸರ್ವಪಕ್ಷ ಮುಖಂಡರಿಂದ ಒಮ್ಮತ ವ್ಯಕ್ತವಾದರೆ ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡಲು ಯಾವುದೇ ಸಮಸ್ಯೆ ಎದುರಾಗದು ಎಂದು ಸರಕಾರ ಭಾವಿಸಿದೆ. ತಿರುವಳ್ಳುವರ್ ಪ್ರತಿಮೆ ಬೆಂಗಳೂರಿನಲ್ಲಿ ಸ್ಥಾಪಿಸಬೇಕಾದರೆ, ಸರ್ವಜ್ಞ ಪ್ರತಿಮೆಯನ್ನು ಚೆನ್ನೈನ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಬೇಕು ಎಂಬುದು ಕನ್ನಡ ಸಂಘಟನೆಗಳ ಒತ್ತಾಯ.
ನಗರದಲ್ಲಿ ತಿರುವಳ್ಳುವರ್ ಪ್ರತಿಮೆಯನ್ನು ಯಾವುದೇ ಕಾರಣಕ್ಕೂ ಸ್ಥಾಪಿಸಬಾರದು ಎಂದು ಇನ್ನೂ ಕೆಲವು ಕನ್ನಡಪರ ಸಂಘಟನೆಗಳು ಪಟ್ಟುಹಿಡಿದಿವೆ. ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು ಸಮಸ್ಯೆಯನ್ನು ಬಗೆಹರಿಸಿ ಸರ್ವಪಕ್ಷ ಸಭೆ ಕರೆದಿದ್ದು ತಿರುವಳ್ಳುವರ್ ಪ್ರತಿಮೆ ಅನಾವರಣಗೊಳಿಸಲು ಮುಂದಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications