ಟಿಪ್ಪು ವಂಶಸ್ಥರಿಗೆ ಸರಕಾರಿ ಸಹಾಯ : ಖಾನ್

ಜೆಡಿಎಸ್ ನ ಅಬ್ಧುಲ್ ಅಜೀಂ, ಕೆಟಿ ಶ್ರೀಕಂಠೇಗೌಡ ಮತ್ತು ಖಾದಿ ಅರ್ಷದ್ ಅಲಿ ಅವರು ಟಿಪ್ಪು ಸುಲ್ತಾನ್ ವಂಶಸ್ಥರಾದ ಆಸೀಫ್ ಅಲಿ ಶಾ ಅವರು ಕೊಲ್ಕತ್ತಾದಲ್ಲಿ ನೆಲೆಸಿದ್ದು, ಸಂಕಷ್ಟದ ಸ್ಥಿತಿ ಎದುರಿಸುತ್ತಿದೆ, ಆದ್ದರಿಂದ ಸರಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಮಮ್ತಾಜ್ ಅಲಿ ಖಾನ್, ಟಿಪ್ಪುವಂಶಸ್ಥರಿಗೆ ಸಂಪೂರ್ಣ ಸಗಕಾರ ಮತ್ತು ಸಹಾಯ ನೀಡಲು ಸರಕಾರ ನಿರ್ಧರಿಸಿದೆ. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಟಿಪ್ಪು ವಂಶಸ್ಥರ ಕುರಿತು ಸಮಗ್ರ ತನಿಖೆಗೆ ಗೋವಾ ವಿಶ್ವವಿದ್ಯಾಲಯ ನಿವೃತ್ತ ಕುಲಪತಿ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ಈಗಾಗಲೇ ಸರಕಾರಕ್ಕೆ ವರದಿ ಸಲ್ಲಿಸಿದೆ. ಟಿಪ್ಪು ವಂಶಸ್ಥರಾದ ಆಸೀಫ್ ಶಾ ಅವರು ಸಹಾಯಹಸ್ತ ಚಾಚಿ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಟಿಪ್ಪು ಸುಲ್ತಾನ್ ಗೆ ಸಂಬಂಧಿಸಿದ ಸಮಸ್ತ ಆಸ್ತಿಯನ್ನು ತಮ್ಮ ಹೆಸರಿಗೆ ನೋಂದಾಯಿಸುವಂತೆ ಒತ್ತಾಯಿಸಿದ್ದಾರೆ ಎಂದು ಸಚಿವ ಖಾನ್ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications