ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಹತ್ಯೆ ನಿಷೇಧ : ಡಿವೈಎಫ್ಐ ವಿರೋಧ

By Staff
|
Google Oneindia Kannada News

DYFI opposes cow slaughter ban
ಬೆ೦ಗಳೂರು, ಜು. 28 : ಉದ್ದೇಶಪೂರ್ವಕವಾಗಿ ಮುಸ್ಲಿ೦, ಕ್ರಿಸ್ಚಿಯನ್, ಮೂಲಭೂತವಾದ ಹಾಗೂ ದಲಿತರ ಪ್ರತ್ಯೇಕಿಕರಣದ ಮೂಲಕ ಸರಕಾರ ಸಮಾಜದಲ್ಲಿ ಅಶಾ೦ತಿ ಸೃಷ್ಟಿಗೆ ಆಸ್ಪದ ನೀಡುತ್ತಿದೆ.

ಬಡ, ದಲಿತ, ಕ್ರಿಶ್ಚಿಯನ್ ಮತ್ತು ಅಲ್ಪಸ೦ಖ್ಯಾತರ ಆಹಾರದ ಮೇಲೆ ನಿಷೇಧ ಹೇರುವ೦ತ ಕೆಲಸ ಮಾಡುತ್ತಿದೆ. ಸ೦ಘ ಪರಿವಾರದ ಆದೇಶದ೦ತೆ ಸರಕಾರ ಗೋಹತ್ಯೆ ನಿಷೇಧ ಕ್ರಮಕ್ಕೆ ಮು೦ದಾಗಿದೆ ಇ೦ತಹ ಕ್ರಮವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ತೀವ್ರವಾಗಿ ವಿರೋಧಿಸುತ್ತದೆ ಎ೦ದು ಸ೦ಘಟನೆ ಅಧ್ಯಕ್ಷ ಭರತ್ ರಾಜ್ ಸರಕಾರವನ್ನು ಎಚ್ಚರಿಸಿದ್ದಾರೆ.

ಒಟ್ಟು ಶೇ.40ಕ್ಕಿ೦ತ ಹೆಚ್ಚಿರುವ ಜನಸಮುದಾಯದ ಆಹಾರದ ಹಕ್ಕಿನ ಮೇಲೆ ನಿಷೇಧ ಹೇರಲು ಹೊರಟಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಜಾತಿ, ಅಸ್ಪೃಶ್ಯತೆ, ದೌರ್ಜನ್ಯ, ದಬ್ಬಾಳಿಕೆಗಳಿ೦ದ ಅರ್ಧಗ೦ಟೆಗೊಬ್ಬರ೦ತೆ ಅಮಾನುಷವಾಗಿ ನಡೆಯುತ್ತಿರುವ ಮಾನವ ಹತ್ಯೆಯನ್ನು ಖ೦ಡಿಸಲಾಗದ ಕೆಲವು ಸ್ವಾಮೀಜಿಗಳು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬರಬೇಕೆನ್ನುವುದು ಕೋಮುವಾದಿ ಕುತ೦ತ್ರವಾಗಿದೆ.

ರಾಜ್ಯಾದ್ಯ೦ತ ಪ್ರಗತಿಪರ ಸಂಘಟನೆಗಳ ಸಹಯೋಗದೊ೦ದಿಗೆ ಜನಾ೦ದೋಲನ ಪ್ರತಿಭಟನೆಗಳನ್ನು ಡಿವೈಎಫ್ಐ ಹಮ್ಮಿಕೊಳ್ಳಲಿದೆ ಎ೦ದು ಭರತ್ ರಾಜ್ ಸರಕಾರವನ್ನು ಎಚ್ಚರಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X