• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಪಾಸಣೆ : ಮಾಜಿ ರಾಷ್ಟ್ರಪತಿ ಕಲಾಂಗಿಲ್ಲ ರಿಯಾಯ್ತಿ

By Staff
|

ನವದೆಹಲಿ, ಜು. 21 : ಅಣುವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಅಮೆರಿಕ ಕಂಟಿನೆಂಟಲ್ ಏರ್ ಲೈನ್ಸ್ ಸಿಬ್ಬಂದಿ ತಪಾಸಣೆ ನೆಪದಲ್ಲಿ ಅವರ ಸೇರಿದ್ದ ವಸ್ತುಗಳು ಮತ್ತು ಅವರ ಶೋ ಕಳಚಿವಂತೆ ಮಾಡಿದ ಅವಮಾನ ಮಾಡಿರುವ ಪ್ರಸಂಗ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಮಂಗಳವಾರ ಬೆಳಗ್ಗೆ ನಡೆದಿದೆ.

ಭದ್ರತಾ ಸಿಬ್ಬಂದಿಗೆ ಕಲಾಂ ಅವರು ಯಾರು ಎನ್ನುವ ಬಗ್ಗೆ ಪರಿಜ್ಞಾನ ಇಲ್ಲವೋ ಅಥವಾ ಉದ್ದೇಶಪೂರ್ವಕವಾಗಿ ಅವರನ್ನು ಅವಮಾನ ಮಾಡಲು ಈ ಘಟನೆ ನಡೆಗಿದೆಯೋ ಎನ್ನುವುದು ತನಿಖೆಯಿಂದ ದೃಢಪಡಬೇಕಾಗಿದೆ. ಕಲಾಂ ತಪಾಸಣೆ ಮಾಡಿರುವ ಭದ್ರತಾ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸುತ್ತಿರುವ ಪೊಲೀಸರು, ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇತ್ತ ಘಟನೆಗೆ ತೀವ್ರ ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಇಲಾಖೆ ತನಿಖೆ ನಡೆಸುವಂತೆ ಆದೇಶಿಸಿದೆ.

ವಿಮಾನಯಾನ ಇಲಾಖೆ ಪ್ರಕಾರ ಪ್ರಯಾಣಿಸುವ ಪ್ರತಿ ವ್ಯಕ್ತಿಗಳ ತಪಾಸಣೆ ಮಾಡುವುದು ಭದ್ರತಾ ಸಿಬ್ಬಂದಿಯ ಕರ್ತವ್ಯ. ಅದೇ ಪ್ರಕಾರ ನನ್ನನ್ನೂ ಕೂಡಾ ಸಿಬ್ಬಂದಿ ತಪಾಸಣೆ ಮಾಡಿದೆ. ಇದರಲ್ಲಿ ಏನು ಅಪರಾಧವಿದೆ. ಈ ವಿಷಯವನ್ನು ಇಷ್ಟಕ್ಕೆ ಮುಗಿಸಿಬಿಡಿ ಎಂದು ಕಲಾಂ ಅವರು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಪ್ರತಿಕ್ರಿಯೆ ನೀಡಿರುವ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್, ಇದೊಂದು ದುರದೃಷ್ಟಕರ ಸಂಗತಿ ಎಂದು ವಿಷಾದಿಸಿದ್ದಾರೆ. ಕಳೆದ ವರ್ಷ ಪ್ರಸ್ತುತ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರನ್ನು ಮಾಸ್ಕೋದಲ್ಲಿ ಮತ್ತು ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಅಮೆರಿಕದಲ್ಲಿ ಇದೆ ರೀತಿ ತಪಾಸಣೆ ಮಾಡಿ ಅವಮಾನ ಮಾಡಲಾಗಿತ್ತು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X