ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ ಗಾಂಧಿ ಮೌನವೇಕೆ ? ಮಾಯಾವತಿ

By Staff
|
Google Oneindia Kannada News

Mayawati
ಲಖನೌ, ಜು. 16 : ತಮ್ಮ ವಿರುದ್ಧ ಅನಾಗರಿಕ ಹೇಳಿಕೆ ನೀಡಿರುವ ಯುಪಿಸಿಸಿ ಅಧ್ಯಕ್ಷೆ ರೀಟಾ ಜೋಶಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮೌನ ವಹಿಸಿರುವುದು ಏಕೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಪ್ರಶ್ನಿಸಿದ್ದಾರೆ.

ಸೋನಿಯಾ ಮೌನ ನೋಡಿದರೆ ರೀಟಾ ಅವರ ಅನಾಗರಿಕ ಹೇಳಿಕೆಯನ್ನೂ ಸಮರ್ಥಿಸಿಕೊಳ್ಳುವಂತಿದೆ. ಕಾಂಗ್ರೆಸ್ ಪಕ್ಷವೇ ರೀಟಾ ಬೆನ್ನಿಗೆ ನಿಂತಿದೆ. ಇದು ದೇಶದ ಮಹಿಳೆಯರಿಗೆ ಮಾಡಿದ ಭಾರಿ ಅವಮಾನ. ಕಾಂಗ್ರೆಸ್ ಪಕ್ಷದಿಂದ ದಲಿತ ಮಹಿಳೆಗೆ ಸಾರ್ವಜನಿಕವಾಗಿ ಅವಮಾನಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರೀಟಾ ಹೇಳಿಕೆಯಿಂದ ಪಕ್ಷಬೇದ ಮರೆತು ಎಲ್ಲ ವರ್ಗಗಳಿಂದಲೂ ಪ್ರತಿಭಟನೆ ಆರಂಭವಾಗಿದೆ. ಬುಧವಾರ ರಾತ್ರಿ ರೀಟಾ ಮನೆಗೆ ದಾಳಿ ನಡೆಸಿದ್ದು, ಬಿಎಸ್ಪಿ ಕಾರ್ಯಕರ್ತರಲ್ಲ. ದಾಳಿ ಮಾಡಿರುವುದು ಕಾಂಗ್ರೆಸ್ ಕಾರ್ಯಕರ್ತರೆ ಎಂದು ಮಾಯಾವತಿ ಹೇಳಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷೆ ರೀಟಾ ಬಹುಗುಣ ಜೋಶಿ ಅವರನ್ನು ಪೊಲೀಸರು ಬಂಧಿಸಲಾಗಿದ್ದು. 14 ದಿನ ನ್ಯಾಯಾಂಗ ವಶದಲ್ಲಿ ಇರಿಸಲಾಗಿದೆ. ರೀಟಾ ಬಂಧನ ಖಂಡಿಸಿ ಉತ್ತರ ಪ್ರದೇಶದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದು, ಕೆಲ ಕಡೆಗಳಲ್ಲಿ ಗಂಭೀರ ವಾತಾವರಣ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.

ಉತ್ತರಪ್ರದೇಶದಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರ ನಡೆದರೆ ಸರಕಾರದ ಅಧಿಕಾರಿಗಳು ಇಪ್ಪತ್ತು ಸಾವಿರ ಪರಿಹಾರ ಹಣ ನೀಡುತ್ತಾರೆ. ಒಂದು ಹೆಣ್ಣಿನ ಶೀಲಕ್ಕೆ ಸರಕಾರ ಬೆಲೆ ಕಟ್ಟುತ್ತಿದೆ. ಇದೇ ರೀತಿ ಮುಖ್ಯಮಂತ್ರಿ ಮಾಯಾವತಿಗೇನಾದರೂ ಆದರೆ, ನಾವು ಒಂದು ಕೋಟಿ ರುಪಾಯಿ ಪರಿಹಾರ ನೀಡಲು ಸಿದ್ದ ಎನ್ನುವ ವಿವಾದಕಾರಿ ಹೇಳಿಕೆಯನ್ನು ರೀಟಾ ಜೋಶಿ ನೀಡಿದ್ದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X