ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರೇಡ್ ಅಸ್ :ಬೆಂಗಳೂರಿಗೆ ಬಂದ ಇಬಿಬೊ

By Staff
|
Google Oneindia Kannada News

ಬೆಂಗಳೂರು, ಜುಲೈ . 13 : ದಕ್ಷಿಣ ಆಫ್ರಿಕಾದ ಮೀಡಿಯ ಗ್ರೂಪ್ ನ್ಯಾಸ್ಪರ್ಸ್ ಸಂಸ್ಥೆಯು ತನ್ನ ಇ-ಕಾಮರ್ಸ್ http://tradus.in/ ತಾಣವನ್ನು ಭಾರತಕ್ಕೆ ವಿಸ್ತರಿಸಿದೆ. ibibo.com ನ ಮಾಲೀಕರಾಗಿರುವ ನ್ಯಾಸ್ಪರ್ಸ್, ತನ್ನ ಕಾರ್ಯಚಟುವಟಿಕೆಗಳನ್ನು ಏಶಿಯಾ ಖಂಡದಲ್ಲಿ ವಿಸ್ತರಿಸುವ ಸಲುವಾಗಿ ಮೊದಲು ಭಾರತವನ್ನು ಆಯ್ದುಕೊಂಡಿದೆ. ಭಾರತದ ಪ್ರಮುಖ ಮೆಟ್ರೋಗಳಾದ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ ಮತ್ತು ಹೈದರಾಬಾದ್ ನಲ್ಲಿರುವ ಚಾರಣಿಗ ಗ್ರಾಹಕರನ್ನು ತಲುಪಲು http://tradus.in/ ಉದ್ದೇಶಿಸಿದೆ.

ಸ್ಥಳೀಯ ಗ್ರಾಹಕರ ಅನುಕೂಲಗಳನ್ನು ಗಮನವಿರಿಸಿರುವ ಕಂಪನಿ ಪ್ರತಿ ಮೆಟ್ರೋಗೆ ಅನ್ವಯವಾಗುವಂತೆ ವೆಬ್ ಪುಟಗಳನ್ನು ನಿರ್ಮಿಸಿದೆ. ಯೂರೋಪಿನ ಹನ್ನೆರಡು ರಾಷ್ಟ್ರಗಳಲ್ಲಿ ಈಗಾಗಲೇ ನೆಲೆಯೂರಿರುವ ಈ ತಾಣ ಭಾರತದ ಮೆಟ್ರೋಗಳಿಗೆ ಪ್ರತ್ಯೇಕ ವೆಬ್ ಪುಟಗಳನ್ನು ನಿರ್ಮಿಸಿದೆ.

ಉದಾಹರಣೆಗೆ, ನ್ಯಾಸ್ಪರ್ಸ್ ನ ಇ ಕಾಮರ್ಸ್ ಪುಟ ಬಲ್ಗೆರಿಯಾಗೆ Aukro.bg ಎಂದಿದ್ದರೆ, ರಷಿಯಾಗೆ Molotok.ru ಎಂದಿದೆ. ಭಾರತದ ವೆಬ್ ತಾಣದ ವಿಳಾಸ Tradus.in. ಈ ವೆಬ್ ತಾಣದ ವ್ಯವಹಾರಗಳನ್ನು ನೋಡಿಕೊಳ್ಳಲು ನ್ಯಾಸ್ಪರ್ಸ್ ರಾಹುಲ್ ಸೇಠಿ ಇವರನ್ನು ತಾಣದ ಅಧ್ಯಕ್ಷರನ್ನಾಗಿ ನೇಮಿಸಿದೆ. ಈ ಮುನ್ನ ಸೇಠಿ web18 ತಾಣದ ಇ ಕಾಮರ್ಸ್ ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.

ವಾಣಿಜ್ಯದಿಂದ ಗ್ರಾಹಕನಿಗೆ ಅಂದರೆ B2C, C2C ಅಂದರೆ ಗ್ರಾಹಕನಿಂದ ಗ್ರಾಹಕನಿಗೆ ಮಂತ್ರ ಟ್ರೇಡಸ್ ತಾಣದ ಧ್ಯೇಯವಾಕ್ಯವಾಗಿದೆ ಎಂದು ರಾಹುಲ್ ಹೇಳಿದ್ದಾರೆ. ವಿವಿಧ ಕಂಪನಿಗಳು ತಮ್ಮ ನಾನಾ ಉತ್ಪನ್ನಗಳನ್ನು ತಮ್ಮ ವೆಬ್ ತಾಣದಿಂದ ಗ್ರಾಹಕರಿಗೆ ತಲುಪಿಸಬಹುದು, ಅಂತೆಯೇ ಗ್ರಾಹಕರೂ ಕೂಡ ತಮ್ಮ ವಸ್ತುಗಳನ್ನು ಮಾರಾಟ, ಖರೀದಿ ಅಥವಾ ಹರಾಜಿನಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X