ಶೌಚಾಲಯದಲ್ಲಿ ಜಾರಿಬಿದ್ದ ದೇವೇಗೌಡರು

ಮೊಣಕೈನಲ್ಲಿ ಸಣ್ಣಮಟ್ಟದ ಮೂಳೆ ಮುರಿದಿದ್ದು ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿರಿಯ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಒಂದು ವಾರ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ ಎಂದು ದೇವೇಗೌಡರ ಕುಟುಂಬದವರು ತಿಳಿಸಿದ್ದಾರೆ.
ಇಂದಿನ ಜೆಡಿಎಲ್ ಪಿ ಸಭೆಗೆ ಹಾಜರಾಗಲು ಸಿದ್ಧರಾಗುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಮುಂಜಾನೆ ಶೌಚಾಲಯಕ್ಕೆ ಹೋದಾಗ ಈ ಘಟನೆ ನಡೆಯಿತು ಎಂದು ದೇವೇಗೌಡರ ಆಪ್ತ ದೇವೇಂದ್ರ ಅವರು ತಿಳಿಸಿದ್ದಾರೆ. ಚಿಕಿತ್ಸೆಯಿಂದ ದೇವೇಗೌಡರು ಚೇತರಿಸಿಕೊಂಡಿದ್ದು ಸಮಾರಂಭದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ ಎಂದು ದೇವೇಂದ್ರ ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications