ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಮೆ ರಹಿತ ಪಾರ್ಕ್ ಗೆ ಮಾಯಾ ಮುಚ್ಚಳಿಕೆ

By Staff
|
Google Oneindia Kannada News

 SC says no to any statues in eco park lucknow
ನವದೆಹಲಿ, ಜುಲೈ. 9 : ತನ್ನದು ಮತ್ತು ತನ್ನಂಥ ದಲಿತ ನಾಯಕರ ಪ್ರತಿಮೆಗಳನ್ನು ಸ್ಥಾಪಿಸುವುದಕ್ಕೆ ಸದಾ ಹಪಹಪಿಸುವ ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿಗೆ ಮುಖಭಂಗವಾಗಿದೆ. ಸಮಸ್ತ ನಾಗರಿಕರ ಉಪಯೋಗಕ್ಕೆಂದೇ ಸೃಷ್ಠಿಯಾಗುವ ಉದ್ಯಾನವನಗಳು ಒಂದ ಪಕ್ಷದ, ವರ್ಗದ, ಸಿದ್ಧಾಂತದ ಷೋಕೇಸ್ ಆಗಬಾರದು ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ.

ಲಖನೌದಲ್ಲಿನ ಹಳೆಯದಾದ ಒಂದು ಸೆರೆಮನೆ ಇದೆ. ಸೆರೆಮನೆ ಕಟ್ಟಡವನ್ನು ಕೆಡವಿ ಅಲ್ಲಿ ಪರಿಸರ ಪಾರ್ಕ್ ಸೃಷ್ಟಿಸುವ ಉದ್ದೇಶ ಮಾಯಾವತಿ ಸರಕಾರಕ್ಕಿದೆ. ಆದರೆ, ಆ ಪಾರ್ಕಿನಲ್ಲಿ ಕೇವಲ ದಲಿತ ನಾಯಕರ ಪ್ರತಿಮೆಗಳು, ಕಾನ್ಸಿರಾಮ್ ಸ್ಥಳ್, ಅಂಬೇಡ್ಕರ್ ಸ್ಥಳ್, ಬಹುಜನ್ ಸಮಾಜ ಪಕ್ಷದ ಚುನಾವಣಾ ಚಿಹ್ನೆ ಆನೆಯ ವಿಗ್ರಹಗಳನ್ನು ಸ್ಥಾಪಿಸುವ ಮಾಯಾಲಹರಿಗೆ ನ್ಯಾಯಾಲಯ ತಣ್ಣೀರೆರೆಚಿದೆ.

ಉದ್ದೇಶಿತ ಇಕೊ ಪಾರ್ಕಿನಲ್ಲಿ ಕೇವಲ ದಲಿತರ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಅನುಮಾನಿಸಿ ಸೆರೆಮನೆ ಕೆಡುವುದರ ವಿರುದ್ಧವೇ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿತ್ತು. ಸೆರೆಮನೆ ಕೆಡಹುವುದಕ್ಕೆ ಇದ್ದ ತಡೆಯನ್ನು ತೆರವು ಮಾಡಿದ ಸರ್ವೋಚ್ಛ ನ್ಯಾಯಾಲಯ ಪಾರ್ಕ್ ನಿರ್ಮಾಣಕ್ಕೆನೋ ಹಸುರು ನಿಶಾನೆ ತೋರಿಸಿದೆ. ಆದರೆ, ಯಾರೊಬ್ಬರ ಪ್ರತಿಮೆಗಳನ್ನು ಪಾರ್ಕಿನಲ್ಲಿ ಸ್ಥಾಪಿಸುವುದಿಲ್ಲ ಎಂದು ಮಾಯಾವತಿ ಪರ ವಕೀಲರ ಹೇಳಿಕೆ ಬುಧವಾರ ಕೋರ್ಟಿನಲ್ಲಿ ದಾಖಲಾದ ನಂತರವೇ ನ್ಯಾಯಾಲಯ ಪರಿಸರ ಪಾರ್ಕ್ ನಿರ್ಮಾಣಕ್ಕೆ ಅವಕಾಶ ನೀಡಿತು.

ವಿವಾದಾಸ್ಪದ ಸೆರೆಮನೆ ಪ್ರದೇಶದ ವಿಸ್ತೀರ್ಣ 195 ಎಕರೆಗಳು. ಹಳೆಯ ಸೆರೆಮನೆ ಕೆಡವಿ ಆನಂತರ ನಗರದ ಹೊರವಲಯದಲ್ಲಿ ಬೇರೊಂದು ಸುಸಜ್ಜಿತ, ಸದೃಢ ಬಂದೀಖಾನೆ ಕಟ್ಟುವುದಾಗಿಯೂ ಮಾಯಾ ಸರಕಾರ ಒಪ್ಪಿಕೊಂಡಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X