ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಟಿಸಿ ಪ್ರಯಾಣ ದರದಲ್ಲಿ ದಿಢೀರ್ ಏರಿಕೆ

By Staff
|
Google Oneindia Kannada News

BMTC hikes bus fares
ಬೆಂಗಳೂರು, ಜು.8: ಕಳೆದ ಬಾರಿ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿತ್ತುಆಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್ ಪ್ರಯಾಣ ದರವನ್ನು ಕಡಿಮೆ ಮಾಡಿರಲಿಲ್ಲ. ಈಗ ಡೀಸೆಲ್ ಬೆಲೆ ಏರಿಕೆಯಾಗಿದ್ದೆ ತಡ ಬಸ್ ಪ್ರಯಾಣ ದರವನ್ನು ಬಿಎಂಟಿಸಿ ಏರಿಸಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬರುವಂತೆ ಬಿಎಂಟಿಸಿ ಆದೇಶ ಹೊರಡಿಸಿದೆ.

ನಗರ, ಹೊರವಲಯ, ವರ್ತುಲ ರಸ್ತೆ, ಅಟಲ್ ಸಾರಿಗೆ ಸೇವೆಗಳ ಪ್ರಯಾಣ ದರವನ್ನು ಏರಿಸಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಜಮೀರ್ ಪಾಷಾ ತಿಳಿಸಿದ್ದಾರೆ. ಬಹುತೇಕ ಹಂತಗಳಲ್ಲಿ ಪ್ರಯಾಣ ದರ ರು.1 ಹೆಚ್ಚಾಗಿದ್ದುದೂರ ಪ್ರಯಾಣದ ಕೆಲವು ಹಂತಗಳಲ್ಲಿ ರು.2ರಷ್ಟು ಹೆಚ್ಚಿಸಲಾಗಿದೆ.

ಸಾಮಾನ್ಯ ಸೇವೆಗಳು, ಪುಷ್ಪಕ್ ಮತ್ತು ಸುವರ್ಣ ಸೇವೆಗಳ ಮೊದಲ ಮೂರು ಹಂತಗಳ ದರಗಳಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಆದರೆ ಮೂರನೇ ಹಂತದ ನಂತರ ಪುಷ್ಪಕ್ ಮತ್ತು ಸುವರ್ಣ ಸೇವೆಗಳ ಪ್ರಯಾಣ ದರ ಏಕರೂಪವಾಗಿರುತ್ತದೆ. ದಿನದ ಪಾಸುಗಳ ದರವನ್ನು ರು.30ರಿಂದ ರು.32ಕ್ಕೆ ಏರಿಸಲಾಗಿದೆ.

ರೆಡ್ ಮತ್ತು ಬ್ಲಾಕ್ ಬೋರ್ಡ್ ಮಾಸಿಕ ಪಾಸಿನ ದರವನ್ನೂ ಏರಿಸಲಾಗಿದೆ. ಬ್ಲಾಕ್ ಬೋರ್ಡ್ ರು.420 ಇದ್ದದ್ದು ರು.450 ಮಾಡಲಾಗಿದೆ. ರೆಡ್ ಬೋರ್ಡ್ ಮಾಸಿಕ ಪಾಸ್ ದರ ರು.565ರಿಂದ ರು.600ಕ್ಕೆ ಏರಿಸಲಾಗಿದೆ. ಬ್ಲಾಕ್ ಬೋರ್ಡ್ ಪಾಸುದಾರರು ಈಗ ರೆಡ್ ಬೋರ್ಡ್, ಪುಷ್ಪಕ್ ಮತ್ತು ಸುವರ್ಣ ಬಸ್ ಗಳಲ್ಲಿ ಪ್ರಯಾಣಿಸುವ ಅವಕಾಶವನ್ನು ಹೊಸದಾಗಿ ಕಲ್ಪಿಸಲಾಗಿದೆ.

ಸುವರ್ಣ ಮತ್ತು ಪುಷ್ಪಕ್ ದಿನದ ಪಾಸುಗಳ ಸೇವೆಯನ್ನು ಹಿಂತೆಗೆದುಕೊಳ್ಳಲಾಗಿದೆ. ದಿನದ ಪಾಸುಗಳ ಪರಿಷ್ಕೃತ ದರ ಜುಲೈ 15ರಿಂದ ಹಾಗೂ ಮಾಸಿಕ ಪಾಸುಗಳ ಪರಿಷ್ಕೃತ ದರ ಆಗಸ್ಟ್ 1ರಿಂದ ಜಾರಿಯಾಗಲಿವೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

ವೇಗದೂತ, ರಾಜಹಂಸ ಬಸ್ ಪ್ರಯಾಣ ದರವನ್ನು ಶೇ.3.56ರಷ್ಟು ಹೆಚ್ಚಳ ಮಾಡಲಾಗಿದೆ. ಆರು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಕೆಎಸ್ ಆರ್ ಟಿಸಿ ದರವನ್ನು ಏರಿಸಿದೆ. ದರ ಹೆಚ್ಚಳ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೂ ಅನ್ವಯವಾಗಲಿದೆ. ಆದರೆ ಕೆಎಸ್ ಆರ್ ಟಿಸಿ ಬಸ್ ಪಾಸ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಬೆಲೆ ಏರಿಕೆಯಿಂದ ಬೆಂಗಳೂರು-ಮೈಸೂರು ನಡುವಿನ ವೇಗದೂತ ಸಾರಿಗೆ ದರ ರು.4 ಹೆಚ್ಚಲಿದೆ. ಬೆಂಗಳೂರಿನಿಂದ ಮಂಡ್ಯ, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗಕ್ಕೆ ಕ್ರಮವಾಗಿ 2, 9, 10, 11 ಮತ್ತು 16 ರು.ಗಳಷ್ಟು ಹೆಚ್ಚಳವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X