194428karnataka high courtಕೆಂಪು ಕಟ್ಟಡದಲ್ಲಿ ನಡೆದಿದೆ ಮೋಹಿನಿ ಆಟ್ಟಂ/news/2009/07/06/ghost-menace-in-karnataka-high-court.htmlನಂಬಿದ್ರೆ ನಂಬಿ ಬಿಟ್ರೆ ಬಿಡಿ ರಾಜ್ಯದ ಉಚ್ಚ ನ್ಯಾಯಾಲಯದ ಕಾರಿಡಾರಿನಲ್ಲಿ ಅಮವಾಸ್ಯೆಯ ಕರಾಳ ರಾತ್ರಿಯಂದು ಮೋಹಿನಿ ಕಾಣಿಸಿಕೊಂಡಿದ್ದಾಳೆ ಎಂಬ ಸುದ್ದಿ ಬಲವಾಗಿ ಹಬ್ಬಿದೆ. ಇದು ಕೇವಲ ಭ್ರಮೆ, ಮನಸಿನ ಭ್ರಾಂತಿ ಅಂತ ವಿಜ್ಞಾನಿ ಸಿಆರ್ ಚಂದ್ರಶೇಖರ್ ಹೇಳಿದ್ದರೆ, ಜ್ಯೋತಿಷಿ ದೈವಜ್ಞ ಸೋಮಯಾಜಿ ಹಳೆ ಕಟ್ಟಡಗಳಲ್ಲಿ ಇದು ಸಾಮಾನ್ಯ ಅಂತ ವ್ಯತಿರಿಕ್ತ ಅಭಿಮತ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ನಿಮ್ಮ 37806http://kannada.oneindia.com/img/2009/07/06-ghost-hc1.jpg194428karnataka high courtವಿನಿವಿಂಕ್ ಶಾಸ್ತ್ರಿಗೆ ಸಿಕ್ತು ಮಧ್ಯಂತರ ಜಾಮೀನು/news/2009/07/13/vinivinc-shastry-gets-interim-bail-from-sc.htmlನವದೆಹಲಿ, ಜು. 13 : ನೂರಾರು ಮಂದಿಯ ತಲೆ ಮೇಲೆ ಚಾಪೆ ಎಳೆದಿದ್ದ ಬಹುಕೋಟಿ ಹಗರಣ ರೂವಾರಿ ವಿನಿವಿಂಕ್ ಶಾಸ್ತ್ರಿ ಅಲಿಯಾಸ್ ಕೆ ಎನ್ ಶ್ರೀನಿವಾಸ್ ಶಾಸ್ತ್ರಿಗೆ ಸುಪ್ರಿಂಕೋರ್ಟ್ ನಿಂದ ಎರಡು ತಿಂಗಳ ಅವಧಿಗೆ ಮಧ್ಯಂತರ ಮುಕ್ತಿ ಸಿಕ್ಕಿದೆ. ವಿನಿವಿಂಕ್ ಶಾಸ್ತ್ರಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ನ ವಿಭಾಗೀಯಪೀಠ ಎರಡು ತಿಂಗಳ ಅವಧಿಗೆ ಜಾಮೀನು 37949http://kannada.oneindia.com/img/2009/07/13-vinivinc-shastri1e.jpg194428karnataka high courtಜನರಿಗೆ ನ್ಯಾಯದಾನ ಶೀಘ್ರ ದೊರಕಬೇಕು : ಮುಖ್ಯಮಂತ್ರಿ/news/2009/08/09/people-should-get-speedy-justice-bsy.htmlಬೆಂಗಳೂರು, ಆ, 9 : ಜನ ಸಮಾನ್ಯರ ವಿಶ್ವಾಸವೇ ನ್ಯಾಯಾಲಯದ ಹೆಬ್ಬಾಗಿಲಾಗಬೇಕು. ಹೀಗಾದಾಗ ಮಾತ್ರ ಜನರಿಗೆ ನ್ಯಾಯಾಲಯದ ಮೇಲಿನ ವಿಶ್ವಾಸ, ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಶೀಘ್ರ ಇತ್ಯರ್ಥವಾಗಬೇಕು. ಜನರಿಗೆ ತ್ವರಿತವಾಗಿ, ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅವರು 38518http://kannada.oneindia.com/img/2009/08/09-dinakaran-bsy1.jpg194428karnataka high courtಹೈಕೋರ್ಟ್ ಮೆಟ್ಟಿಲೇರಿದ 'ಜಂಭದ ಹುಡುಗಿ'/movies/controversy/2009/08/21-jambada-hudugi-director-moves-court.htmlತಮ್ಮ 'ಜಂಭದ ಹುಡುಗಿ' ಚಿತ್ರ ಸಬ್ಸಿಡಿಯಿಂದ ವಂಚಿತವಾಗಿದೆ ಎಂದು ಆರೋಪಿಸಿ ನಿರ್ದೇಶಕಿ ಪ್ರಿಯಾ ಹಾಸನ್ ಕೋರ್ಟ್ ನ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ಬುಧವಾರ ರಿಟ್ ಅರ್ಜಿ ಸಲ್ಲಿಸಿದ್ದರು. ಸಬ್ಸಿಡಿ ಪಟ್ಟಿಗೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯವನ್ನು ಪ್ರಿಯಾ ಕೋರಿದ್ದಾರೆ. ಇವರ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್ ವಿವರಣೆ ನೀಡುವಂತೆ ಗುರುವಾರ ರಾಜ್ಯ 38765http://kannada.oneindia.com/img/2009/08/21-priya-hassan1.jpg194428karnataka high courtಬಿಬಿಎಂಪಿ : ಅ 23ರೊಳಗೆ ಚುನಾವಣೆ ಪ್ರಕ್ರಿಯೆ /news/2009/09/17/hc-directs-sec-govt-for-bbmp-election.htmlಬೆಂಗಳೂರು, ಸೆ. 17 : ಬಿಬಿಎಂಪಿ ಚುನಾವಣೆ ನಡೆಸಲು ಆಕ್ಟೋಬರ್ 23ರೊಳಗೆ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸುವಂತೆ ಚುನಾವಣಾ ಆಯೋಗ ಮತ್ತು ಸರಕಾರಕ್ಕೆ ಇಂದು ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ. ಇದರೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಹಿಡಿದಿದ್ದ ಗ್ರಹಣ ಕೊನೆಗೂ ಬಿಟ್ಟಂತಾಗಿದೆ.ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿಡಿ ದಿನಕರನ್ ಹಾಗೂ ಸಭಾಹಿತ್ ಅವರನ್ನೊಳಗೊಂಡ 39238http://kannada.oneindia.com/img/2009/09/17-bcc1e.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpg386134mohiniಕನ್ನಡ ಚಿತ್ರರಂಗಕ್ಕೆ ಟೂ ಬಿಟ್ಟಿದ್ದ ಸದಾ ಆಗಮನ/movies/heroine/2009/03/19-sada-returns-to-sandalwood-for-good.htmlಮೋಹಿನಿ ಚಿತ್ರದ ನಂತರ ದೂರ ಸರಿದಿದ್ದ ಮೋಹಕ ಚೆಲುವೆ ಸದಾ ಮತ್ತೆ ಕನ್ನಡ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ. ಆಕೆ ನಟಿಸಿದ್ದ ಮೋಹಿನಿ ಚಿತ್ರ ವ್ಯವಹಾರಿಕವಾಗಿ ಗೆದ್ದಿತ್ತು. ಆದರೆ ಚಿತ್ರೀಕರಣದಲ್ಲಿ ನನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂಬ ಕಾರಣ ಕೊಟ್ಟು ಕನ್ನಡ ಚಿತ್ರರಂಗದಿಂದ ದೂರವಾಗಿದ್ದರು. 'ಮೊಗ್ಗಿನ ಮನಸು' ಖ್ಯಾತಿಯ ಶಶಾಂಕ್ ರ ಹೆಸರಿಡದ ಚಿತ್ರಕ್ಕೆ ಸದಾ ಈಗಾಗಲೇ ಸಹಿ ಹಾಕಿದ್ದಾರೆ. 35347http://kannada.oneindia.com/img/2009/03/19-sada.jpg386134mohiniಇಮಾನ ಒಳ್ಡತಾವ್ ಮೋಯ್ನಿ ಅಡ್ಡಾಕ್ತಳಂತೆ?/column/humor/2009/0423-mohini-or-air-hostess.html* ನಾ ಭಾಸ್ಕರ, ಆಕ್ಲಂಡ್ ತನ್ನ ಭಾಮೈದನ ನೆಲೆಸೂರಾದ ನ್ಯುಜೀಲೆಂಡಿಗೆ ಪ್ರವಾಸ ಹೊರಟಿದ್ದ ರಾಮಣ್ಣ ಮತ್ತು ಅವನ ಬಲಗೈ ಬಂಟ ಬಚ್ಚಪ್ಪ ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ತಪಾಸಣೆಯ ಸಾಲಿನಲ್ಲಿ ನಿಂತಿದ್ದರು. ವಿಮಾನ ಹತ್ತುವುದಕ್ಕೆ ಮುಂಚೆಯೇ ಅವರಿಗೆ ಬೆಂಗಳೂರಿನಿಂದ ಈಗಾಗಲೇ ಬಹಳ ದೂರ ಹೊರಟುಹೋಗಿದ್ದಂತೆ ಭಾಸವಾಗಿಸುತ್ತಿತ್ತು ಅಲ್ಲಿಯ ವಾತಾವರಣ. ಎಲ್ಲೆಡೆ ಲಾಲೂ ಯಾದವ್ ತಮ್ಮಂದಿರಂತಿದ್ದ ಪೇದೆಗಳು, ಐದು 36161http://kannada.oneindia.com/img/2009/04/23-bhaskara-auckland1.jpg386134mohiniಕೆಂಪು ಕಟ್ಟಡದಲ್ಲಿ ನಡೆದಿದೆ ಮೋಹಿನಿ ಆಟ್ಟಂ/news/2009/07/06/ghost-menace-in-karnataka-high-court.htmlನಂಬಿದ್ರೆ ನಂಬಿ ಬಿಟ್ರೆ ಬಿಡಿ ರಾಜ್ಯದ ಉಚ್ಚ ನ್ಯಾಯಾಲಯದ ಕಾರಿಡಾರಿನಲ್ಲಿ ಅಮವಾಸ್ಯೆಯ ಕರಾಳ ರಾತ್ರಿಯಂದು ಮೋಹಿನಿ ಕಾಣಿಸಿಕೊಂಡಿದ್ದಾಳೆ ಎಂಬ ಸುದ್ದಿ ಬಲವಾಗಿ ಹಬ್ಬಿದೆ. ಇದು ಕೇವಲ ಭ್ರಮೆ, ಮನಸಿನ ಭ್ರಾಂತಿ ಅಂತ ವಿಜ್ಞಾನಿ ಸಿಆರ್ ಚಂದ್ರಶೇಖರ್ ಹೇಳಿದ್ದರೆ, ಜ್ಯೋತಿಷಿ ದೈವಜ್ಞ ಸೋಮಯಾಜಿ ಹಳೆ ಕಟ್ಟಡಗಳಲ್ಲಿ ಇದು ಸಾಮಾನ್ಯ ಅಂತ ವ್ಯತಿರಿಕ್ತ ಅಭಿಮತ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ನಿಮ್ಮ 37806http://kannada.oneindia.com/img/2009/07/06-ghost-hc1.jpg386134mohiniಹೈಕೋರ್ಟ್ : ದೆವ್ವ ಬೆನ್ನಟ್ಟಲು ಸಿದ್ಧವಾದ ಡಿಸಿಪಿ /news/2009/07/22/dcp-kumaraswamy-to-crack-hc-devil-episode.htmlಬೆಂಗಳೂರು, ಜು. 22 : ಇಂದು ಖಗ್ರಾಸ ಸೂರ್ಯಗ್ರಹಣ ಮತ್ತು ದೀವಿಗೆ ಅಮಾವಾಸ್ಯೆ ಬೇರೆ. ದೆವ್ವ ಭೂತಗಳ ಕಾಟಕ್ಕೆ ಹೇಳಿ ಮಾಡಿಸಿದ ದಿನ ! ಬೆಂಗಳೂರಿನ ಹೈಕೋರ್ಟ್ ಆವರಣದ ಕಾರಿಡಾರ್ ನಲ್ಲಿ ಸುಳಿದಾಡುವ ಚೆಲುವೆ ಮೋಹಿನಿಯ ಕಥೆಯನ್ನು ನೀವು ಕೇಳಿದ್ದೀರಷ್ಟೆ. ಅಪಾರ ಸುದ್ದಿ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿರುವ ದೆವ್ವದ ಕಾಟ ಸುದ್ದಿ ನಿಜವೋ ಸುಳ್ಳೋ ಎನ್ನುವುದು 38130http://kannada.oneindia.com/img/2009/07/22-ghost-hc1.jpgnews"> ಕೆಂಪು ಕಟ್ಟಡದಲ್ಲಿ ನಡೆದಿದೆ ಮೋಹಿನಿ ಆಟ್ಟಂ | Karnataka High Court | Mohini | Ghost Menace | Amavasya | Psychology - ಕೆಂಪು ಕಟ್ಟಡದಲ್ಲಿ ನಡೆದಿದೆ ಮೋಹಿನಿ ಆಟ್ಟಂ - Kannada Oneindia

ಕೆಂಪು ಕಟ್ಟಡದಲ್ಲಿ ನಡೆದಿದೆ ಮೋಹಿನಿ ಆಟ್ಟಂ

Ghost menace in Karnataka high court
ನಂಬಿದ್ರೆ ನಂಬಿ ಬಿಟ್ರೆ ಬಿಡಿ ರಾಜ್ಯದ ಉಚ್ಚ ನ್ಯಾಯಾಲಯದ ಕಾರಿಡಾರಿನಲ್ಲಿ ಅಮವಾಸ್ಯೆಯ ಕರಾಳ ರಾತ್ರಿಯಂದು ಮೋಹಿನಿ ಕಾಣಿಸಿಕೊಂಡಿದ್ದಾಳೆ ಎಂಬ ಸುದ್ದಿ ಬಲವಾಗಿ ಹಬ್ಬಿದೆ. ಇದು ಕೇವಲ ಭ್ರಮೆ, ಮನಸಿನ ಭ್ರಾಂತಿ ಅಂತ ವಿಜ್ಞಾನಿ ಸಿಆರ್ ಚಂದ್ರಶೇಖರ್ ಹೇಳಿದ್ದರೆ, ಜ್ಯೋತಿಷಿ ದೈವಜ್ಞ ಸೋಮಯಾಜಿ ಹಳೆ ಕಟ್ಟಡಗಳಲ್ಲಿ ಇದು ಸಾಮಾನ್ಯ ಅಂತ ವ್ಯತಿರಿಕ್ತ ಅಭಿಮತ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

* ಧ್ಯಾನ್ ಪೂಣಚ್ಚ

ಬೆಂಗಳೂರು : ತಂಗಾಳಿಯಲ್ಲಿ ನಾನು ತೇಲಿ ಹೋದೆ, ಓ ಇನಿಯಾ..! ಈ ಜನಪ್ರಿಯ ಚಿತ್ರಗೀತೆಯನ್ನು ಕೇಳದವರು ಅಪರೂಪ.

ಅಮಾವಾಸ್ಯೆಯ ಆ ರಾತ್ರಿ, ಕಾರ್ದಾಲ ಕತ್ತಲು, ದಟ್ಟ ಹೊಗೆ ಆವರಿಸುತ್ತದೆ. ಗಾಳಿ ರೊಯ್ಯನೆ ಬೀಸಲಾರಂಭಿಸುತ್ತದೆ. ಶ್ವೇತವರ್ಣದ ಸೀರೆಯುಟ್ಟ ಸುಂದರಿಯೊಬ್ಬಳು ಮುಖ ತೋರಿಸದೇ ಮರಗಳ ಮಧ್ಯೆ ಹಾಡಿಕೊಂಡು ಹೋಗುತ್ತಿರುತ್ತಾಳೆ...ಹಿನ್ನೆಲೆ ಸಂಗೀತದೊಂದಿಗೆ ಘಲ್ ...ಘಲ್ ಗೆಜ್ಜೆ ನಾದ....ಹೀರೊ ಬಿಡದೇ ಹಿಂಬಾಲಿಸುತ್ತಾನೆ.... ಇಂಥದೊಂದು ದೃಶ್ಯ ನೈಜ ಘಟನೆಯ ಸ್ವರೂಪದಲ್ಲಿ ಕಣ್ಣ ಮುಂದೆ ಬಂದರೆ...? ನೋಡಿದವರ ಎದೆ ಝಲ್ ಎನ್ನದೆ ಇರುತ್ತದೆಯೇ?

ಕಲ್ಪನೆಯೋ, ವದಂತಿಯೋ.... ಏನೋ...ಅಂತೂ ಹೈಕೋರ್ಟ್ ಆವರಣದಲ್ಲಿ ದೆವ್ವ ಇದೆ ಎಂಬ ಗುಸುಗುಸು ಶುರುವಾಗಿರುವುದಂತೂ ನಿಜ. ಅದರಲ್ಲೂ ದೆವ್ವ ಸಾಮಾನ್ಯದ್ದಲ್ಲವಂತೆ. ಚೆಲುವೆಯಂತೆ, ವಯ್ಯಾರವಂತೆ, ಗೆಜ್ಜೆ ಸಪ್ಪಳವಂತೆ, ಇನ್ನೂ ಏನೇನೋ ಅಂತೆಕಂತೆಗಳು.

ಕಬ್ಬನ್ ಪಾರ್ಕ್‌ನಲ್ಲಿ ರಾತ್ರಿ ಹೊತ್ತು ವಯ್ಯಾರದಿಂದ ನಡೆದು ಹೋಗುವ ಮಂಗಳ ಮುಖಿ'ಯರನ್ನು ನೋಡಬಹುದು. ಆದರೆ ಈ ದೆವ್ವ ಎಲ್ಲಿಂದ ಬಂತು? ಎಂಬ ಪ್ರಶ್ನೆ ಎಲ್ಲರ ತಲೆ ತಿನ್ನತೊಡಗಿದೆ. ಅರೆ, ಹೋಗ್ರಿ, ಈ ಕಾಲದಲ್ಲಿ ದೆವ್ವಗಿವ್ವ ಎಲ್ಲಿರ್‍ತದೆ. ಅದೆಲ್ಲ ಸುಳ್ಳು' ಅಂದರೆ, ಇಲ್ಲ ಸಾರ್, ನಾವೇ ನೋಡಿದ್ದೀವಿ. ಅಮಾವಾಸ್ಯೆ ದಿನ ಬೇಕಾದರೆ ಬನ್ನಿ. ನಿಮಗೂ ತೋರಿಸ್ತವೆ' ಎನ್ನುತ್ತಾರೆ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸರು.

ಹೆಣ್ಣು ದೆವ್ವ ವಯ್ಯಾರದಿಂದ ನಡೆದುಕೊಂಡ ಹೋಗ್ತದೆ. ಆವಾಗ ಗಾಳಿ ಕೂಡ ಒಂದು ಕ್ಷಣ ನಿಲ್ಲುತ್ತದೆ. ಇಡೀ ವಾತಾವರಣ ಏನೋ ಒಂಥರಾ ಆಗೋಗ್ತದೆ ಗೊತ್ತಾ?' ಎಂಬುದು ಪೊಲೀಸರ ದೆವ್ವ ಪುರಾಣದ ಮೊದಲ ಅಂಕ. ಭದ್ರವಾಗಿ ಮುಚ್ಚಿರುವ ಬಾಗಿಲುಗಳು ಭಾರಿ ಶಬ್ದದೊಂದಿಗೆ ತೆರೆದುಕೊಳ್ಳುತ್ತವೆ. ನೋಡಲು ಹೋದರೆ ಬಾಗಿಲು ಹಾಕಿದಂತಿರುತ್ತದೆ. ಇದ್ದಕ್ಕಿದ್ದಂತೆ ವಿದ್ಯುತ್ ದೀಪ ಆರುತ್ತದೆ. ಇಡೀ ಕಾರಿಡಾರ್ ನಿರ್ಮಾನುಷವಾಗಿದ್ದರೂ, ಯಾರೋ ಓಡಿಬರುವ ಅನುಭವ. ಕೆಳ ಮಹಡಿಯ ಕೋರ್ಟ್ ಹಾಲ್ ಸಂಖ್ಯೆ 26ರಿಂದ 40ರ ವರೆಗೆ ಈ ರೀತಿ ಆಗುತ್ತದೆ. ಇನ್ನು ಕ್ಯಾಂಟೀನ್ ಮೂಲೆಯಲ್ಲಿರುವ ಶೌಚಾಲಯಕ್ಕೆ ಮಹಿಳಾ' ಆಕೃತಿಯೊಂದು ಬಂದು ಹೊಗುತ್ತದೆ' ಎನ್ನುತ್ತಾರೆ ಕೆಲವರು.

ಒಂದೊಂದು ಸಾರಿ ಹೈಕೋರ್ಟ್ ಮುಂಭಾಗದ ಮೆಟ್ಟಿಲುಗಳ ಮೇಲೆ ಯಾರೋ ನಡೆದು ಹೋದಂತಾಗುತ್ತದೆ. ಗೆಜ್ಜೆ ಶಬ್ದ ಬೇರೆ. ಶಬ್ದ ಬಂದ ದಿಕ್ಕಿನ ಕಡೆಗೆ ಹೋದರೆ ಆಕೃತಿಯೊಂದು ಇಡೀ ಕೋರ್ಟ್ ಸುತ್ತಿಸುತ್ತದೆ. ಪಕ್ಕದಲ್ಲಿ 4-5 ಸಹದ್ಯೋಗಿಗಳಿದ್ದರೂ ಕಿರುಚಿಕೊಂಡಾಗ ಒಬ್ಬರ ಧ್ವನಿ ಮತ್ತೊಬ್ಬರಿಗೆ ಕೇಳಿಸುವುದಿಲ್ಲ. ಇಷ್ಟೇ ಅಲ್ಲ, ಅಮಾವಾಸ್ಯೆ ದಿನ ನಾಯಿಗಳ ಬೊಗಳುವಿಕೆ ಮಿತಿ ಮೀರುತ್ತದೆ. ಮಗುವೊಂದು ಸಣ್ಣ ಧ್ವನಿಯಲ್ಲಿ ಅಳುತ್ತದೆ. ಇನ್ನೂ ಏನೇನೋ ಆಗುತ್ತದೆ' ಎಂಬುದು ಪೊಲೀಸರ ಮುಂದುವರಿದ ಕಾಮೆಂಟ್ರಿ.

ಇತ್ತೀಚಿಗೊಂದು ದಿನ ಆ ಹೆಣ್ಣು ದೆವ್ವ ನಡು ರಾತ್ರಿಯಲ್ಲಿ ಕ್ಯಾಂಟೀನ್ ಬಾಗಿಲು ತಟ್ಟಿದೆ. ಒಳಗೆ ಮಲಗಿದ್ದ ಸಿಬ್ಬಂದಿ ಕಾವೇರಿಯಪ್ಪ ಬಾಗಿಲು ತೆಗೆದು ನೋಡಿದರೆ ಚೆಲುವೆ ನಗುತ್ತಾ ನಿಂತಿದ್ದಾಳೆ. ಕೈ ಸನ್ನೆ ಮಾಡಿ ಬರುವಂತೆ ಕರೆದಿದ್ದಾಳೆ. ಮುಂದೆ ಚೆಲುವೆ, ಹಿಂದೆ ಕಾವೇರಿಯಪ್ಪ. ನೋಡುತ್ತಿದ್ದಂತೆ ಚೆಲುವೆ ಬೀಗ ಹಾಕಿದ್ದ ಗೇಟಿನಲ್ಲಿ ನುಸುಳಿಕೊಂಡು ಹೋಗಿದ್ದಾಳೆ. ಆದರೆ ಕಾವೇರಿಯಪ್ಪನ ಕೈಲಿ ಗೇಟು ನುಸುಳಲು ಆಗಿಲ್ಲ. ಆತ ತಲೆ ಎತ್ತಿ ನೋಡಿದರೆ ಚೆಲುವೆಯ ಕಾಲುಗಳು ನೆಲದ ಮೇಲಿಲ್ಲ. ಕತ್ತು ಗಿರಗಿರ ತಿರುಗುತ್ತಿದೆ. ಚೆಲುವೆ ದೆವ್ವವಾಗಿ ಗಹಗಹಿಸುತ್ತಿದೆ. ತನಗಾದ ಈ ಅನುಭವವನ್ನು ಕಾವೇರಿಯಪ್ಪ ಹೇಳಿಕೊಂಡಿದ್ದಾನೆ.

ಈ ದೆವ್ವ ಕೊಡುತ್ತಿರುವ ಕಾಟ ಅಷ್ಟಿಷ್ಟಲ್ಲವಂತೆ. ಕ್ಯಾಂಟೀನ್‌ನಲ್ಲಿ 3 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ರಿತೀಶ್ ಎಂಬಾತ ಮಗು ಅಳುತ್ತಿರುವ ಶಬ್ದ ಕೇಳಿ ಹೊರಗೆ ಹೋಗಿ ನೋಡಿದರೆ ಅದೇ ಚೆಲುವೆ. ಅಷ್ಟೇ, ಜ್ವರ ಎಂದು ಮಲಗಿದವನು ಮೇಲೆ ಏಳಲಿಲ್ಲ. ಊರಿಗೆ ಹೋದವನು ವಾಪಸ್ ಬಂದೂ ಇಲ್ಲ. ಅಮಾವಾಸ್ಯೆ ದಿನ ಪೇದೆಯೊಬ್ಬರು ಸಹದ್ಯೋಗಿಳೊಂದಿಗೆ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮಾತು ನಿಂತಿದೆ. ಕೈ ಕಾಲು ಸ್ವಾಧೀನ ಕಳೆದುಕೊಂಡಿದೆ. ಬಳಿಕ ಜ್ವರ ಕಾಣಿಸಿಕೊಂಡಿದೆ.

ಮತ್ತೊಂದು ಅಮಾವಾಸ್ಯೆ ದಿನ ದಫೇದಾರ್ ಒಬ್ಬರು ಕೆಳಗಿನ ಕೋರ್ಟ್ ಹಾಲ್ ಕಡೆ ಬಂದಾಗ ತಣ್ಣನೆಯ ಗಾಳಿ ಆವರಿಸಿದೆ. ಕಡತಗಳಿರುವ ಕೊಠಡಿಯಲ್ಲಿ ಬಾಗಿಲು ಒಡೆಯುವ ಶಬ್ದ. ಕಳ್ಳರಿರಬಹುದು ಎಂದು ಗಮನಿಸಿದರೆ ಗಾಳಿ ನಿಂತ ಅನುಭವ ಆಯಿತಂತೆ. ಅಂದ ಹಾಗೆ, ಈ ದೆವ್ವದ ಕಾಟದ ಬಗ್ಗೆ ನ್ಯಾಯಾಧೀಶರವರೆಗೆ ದೂರು ಹೋಗಿದೆ. ಒಂದು ದಿನ ನ್ಯಾಯಾಧೀಶರೇ ಖುದ್ದಾಗಿ ಪರೀಕ್ಷೆ ಮಾಡಲು ಬಂದಿದ್ದಾರೆ. ಆದರೆ ಅವರು ಬಂದ ದಿನ ಏನೂ ನಡೆದಿಲ್ಲವಂತೆ. ಕೆಂಪು ಕಟ್ಟಡದಲ್ಲಿ ನಡೆದಿದೆ

ಅಭಿಮತ

ಡಾ.ಸಿ.ಆರ್.ಚಂದ್ರಶೇಖರ್, ಮಾನಸಿಕ ತಜ್ಞ : ಯಾವ ದೆವ್ವವೂ ಇಲ್ಲ. ಭೂತವೂ ಇಲ್ಲ. ಇವೆಲ್ಲ ಕಲ್ಪನೆಗಳು. ಈ ರೀತಿಯ ಘಟನೆಗಳು ನಡೆಯಲಾರವು. ತನಿಖೆ ನಡೆಸಿದರೆ ನಿಜ ಸಂಗತಿ ಹೊರಬರುತ್ತದೆ. ಭ್ರಮೆಯಿಂದ ಹೀಗಾಗುತ್ತೆ. ಇದನ್ನು ಉಪೇಕ್ಷೆ ಮಾಡಬೇಕು.

ದೈವಜ್ಞ ಸೋಮಯಾಜಿ, ಖ್ಯಾತ ಜ್ಯೋತಿಷಿ : ಹಳೇ ಕಟ್ಟಡಗಳಲ್ಲಿ ಈ ರೀತಿ ಕಂಡು ಬರುವುದು ಸಾಮಾನ್ಯ. ಇತ್ತೀಚಿನ ತಮ್ಮ ಥಾಯ್‌ಲ್ಯಾಂಡ್ ಭೇಟಿಯಲ್ಲಿ ಇಂತಹ ಹಲವಾರು ವಿಚಾರಗಳು ಗಮನಕ್ಕೆ ಬಂದಿದೆ. ಹುಣ್ಣಿಮೆ, ಅಮಾವಾಸ್ಯೆ, ಸಂಕ್ರಾತಿಯ ದಿನಗಳಲ್ಲಿ ಈ ರೀತಿ ನಡೆಯುತ್ತದೆ. ದೆವ್ವಗಳು ಸಾಮಾನ್ಯವಾಗಿ ಹೆಣ್ಣಿನ ರೂಪದಲ್ಲೇ ಕಾಣಿಸಿಕೊಳ್ಳುತ್ತವೆ. ಕೊಲೆಯಂತಹ ಘಟನೆಗಳು ಈ ಪರಿಸರದಲ್ಲಿ ನಡೆದಿದ್ದರೆ ಅಥವ ನ್ಯಾಯ ಸಿಗದಿದ್ದಲ್ಲಿ ಈ ರೀತಿಯಾಗಬಹುದು. ಇಲ್ಲವೆ ಬೇರೆ ಕಡೆಯಿಂದ ಆವಾಹನೆ ಮಾಡಿ ತಂದು ಬಿಡುವ ಸಾಧ್ಯತೆಗಳೂ ಇವೆ.

(ಸ್ನೇಹಸೇತು : ವಿಜಯ ಕರ್ನಾಟಕ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+