ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಜೆಟ್ : ರಾಜ್ಯಕ್ಕೆ ಏಳು ಹೊಸ ರೈಲುಗಳು

By Staff
|
Google Oneindia Kannada News

Bangalore Railway Station
ಬೆಂಗಳೂರು, ಜು. 3 : ಯುಪಿಎ ಸರಕಾರ ತನ್ನ ಚೊಚ್ಚಲ ರೈಲ್ವೆ ಬಜೆಟ್ ನಲ್ಲಿ ಏಳು ಹೊಸ ರೈಲುಗಳನ್ನು ನೀಡುವ ಮೂಲಕ ರಾಜ್ಯಕ್ಕೆ ಭಾರಿ ಕೊಡುಗೆಯನ್ನು ನೀಡಿದೆ. ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ರಾಜ್ಯಕ್ಕೆ ಏಳು ಹೊಸ ರೈಲು ಸಂಚಾರ ಪ್ರಕಟಿಸುತ್ತಿದ್ದಂತೆಯೇ ಸಮಸ್ತ ಕನ್ನಡಿಗರ ಮುಖ ಇಷ್ಟಗಲವಾಗಿದೆ. ರೈಲ್ವೆ ಖಾತೆಯ ರಾಜ್ಯ ಸಚಿವ ಕೆ ಎಚ್ ಮುನಿಯಪ್ಪ ಅವರ ಮೇಲೆ ಜನರು ಇಟ್ಟಿದ್ದ ನಿರೀಕ್ಷೆಯನ್ನು ಅವರ ಹುಸಿಗೊಳಿಸಲಿಲ್ಲ. ಆದರೂ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸಿಲ್ಲ ಎಂಬು ಮಾತೂ ಕೇಳ ಬರತೊಡಗಿದೆ.

ಜಾಫರ್ ಷರೀಫ್ ರೈಲ್ವೆ ಸಚಿವರಾಗಿದ್ದರು ಎನ್ನುದನ್ನು ಬಿಟ್ಟರೆ ರಾಜ್ಯಕ್ಕೆ ಯಾವ ಪ್ರಯೋಜನವು ಆಗಿರಲಿಲ್ಲ. ಆಗುತ್ತಿರುವ ಅನ್ಯಾಯವನ್ನು ಕನ್ನಡಿಗರು ಸಹಿಸುತ್ತಲೇ ಬಂದಿದ್ದರು. ಕಳೆದ ಒಂದು ದಶಕದಿಂದ ರೈಲ್ವೆ ವಿಷಯ ಮಟ್ಟಿಗೆ ಅನೇಕ ಯೋಜನೆಗಳು ನೆನೆಗುದಿಗೆ ಬಿದ್ದಿದ್ದವು. ಕಳೆದ ಸಲದ ಯುಪಿಎ ಸರಕಾರದಲ್ಲಿ ಲಾಲು ಪ್ರಸಾದ ಯಾದವ್ ರಾಜ್ಯಕ್ಕೆ ಏನಾದರೂ ಲಾಭ ಮಾಡಿಕೊಡುವರು ಎಂಬ ನಿರೀಕ್ಷೆಯಿತ್ತಾದರೂ ಅದು ಕೈಗೊಡಲಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಬಲವರ್ಧನೆ ಹಾಗೂ ಬಿಜೆಪಿ ಸರಕಾರಕ್ಕೆ ಸೆಡ್ಡು ಹೊಡೆಯುವ ದೃಷ್ಟಿಯಿಂದ ಈ ಭಾರಿ ರಾಜ್ಯಕ್ಕೆ ಗಮನಾರ್ಹ ಕೊಡುಗೆಯಂತೂ ಸಿಕ್ಕಿದೆ. ಒಟ್ಟಿನಲ್ಲಿ ರಾಜ್ಯಕ್ಕೆ ಹೊಸ ರೈಲುಗಳನ್ನು ನೀಡಿರುವುದು ಸ್ವಾಗತಾರ್ಹ ಸಂಗತಿ.

ಅಲ್ಲದೇ ಲೋಕಸಭೆ ಚುನಾವಣೆಯಲ್ಲಿ ದಯನೀಯವಾಗಿ ಸೋತಿದ್ದ ಕಾಂಗ್ರೆಸ್ ಪಕ್ಷ ರಾಜ್ಯದ ಐದು ಮಂದಿ ಸಂಸದರಿಗೆ ಸಂಪುಟದಲ್ಲಿ ಸೇರಿಸಿಕೊಂಡಿತ್ತು. ಈ ಐದು ಮಂದಿ ಕೇಂದ್ರ ಸಚಿವರು ರೈಲ್ವೆ ಮಂತ್ರಿಯ ಮೇಲೆ ಒತ್ತಡ ತಂದು ರಾಜ್ಯಕ್ಕೆ ಲಾಭ ಮಾಡಿಕೊಡುವರು ಎಂದು ನಂಬಿಕೆ ಇಡಲಾಗಿತ್ತು. ಒಟ್ಟಿನಲ್ಲಿ ರಾಜ್ಯಕ್ಕೆ ಏಳು ಹೊಸ ರೈಲುಗಳು, ಬೆಂಗಳೂರು-ಹುಬ್ಬಳ್ಳಿ ರೈಲನ್ನು ಧಾರವಾಡವರೆಗೆ ವಿಸ್ತರಣೆ, ಬೆಂಗಳೂರು-ಶಿವಮೂಗ್ಗ ಇಂಟರ್ ಸಿಟಿ ರೈಲು, ಹರಿಹರ-ಶಿವಮೂಗ್ಗ ರೈಲು ಸಂಚಾರ, ಕೊಪ್ಪಳ-ಆಲಮಟ್ಟಿ ಮಾರ್ಗ, ಗದಗೃಹಾವೇರಿ ಮಾರ್ಗ, ಆಲಮಟ್ಟಿ -ಯಾದಗಿರಿ ಮಾರ್ಗ, ಆನೇಕಲ್- ಬಿಡದಿ ಮಾರ್ಗ, ಮೈಸೂರು ರೈಲ್ವೆ ನಿಲ್ದಾಣ ವಿಶ್ವದರ್ಜೆಗೇರಿಸುವ ಕಾರ್ಯಕ್ರಮಗಳನ್ನು ಅವರ ಲೋಕಸಭೆಯಲ್ಲಿ ಘೋಷಿಸಿದರು.

* ಬೆಂಗಳೂರು, ಮಂಗಳೂರು ವಿಶ್ವದರ್ಜೆಗೆ
* ಮಂಗಳೂರು-ಚೆನ್ನೈ-ಪುದುಚೇರಿ ರೈಲು ಆರಂಭ.
* ಮುಂಬೈ-ಕಾರವಾರ ನಡುವೆ ರೈಲು ಸಂಚಾರ.
* ಅಮೇಥಿ-ಬೆಂಗಳೂರು ನಡುವೆ ವಿಶೇಷ ರೈಲು.
* ಬೆಂಗಳೂರು-ಮಂಗಳೂರು-ಕಣ್ಣೂರು ರೈಲು ಆರಂಭ.
* ಬೆಂಗಳೂರು-ಹುಬ್ಬಳ್ಳಿ- ಸೊಲ್ಲಾಪುರ ಸೂಪರ್ ಫಾಸ್ಟ್ ರೈಲು.
* ಬೆಂಗಳೂರು ತ್ರಿವೇಂದ್ರಮ್ ರೈಲು ಆರಂಭ.
* ಹೌರಾ ಬೆಂಗಳೂರು ರೈಲು ಸಂಚಾರ.
* ಮೈಸೂರು ತಿರುಪತಿ ರೈಲು ಚಾಮರಾಜನಗರದವರೆಗೆ ಸಂಚಾರ
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X