ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಜೆಟ್-2009ರ ಮುಖ್ಯಾಂಶಗಳು

By Staff
|
Google Oneindia Kannada News

Mamata Banerjee
ನವದೆಹಲಿ, ಜು. 3 : ಕೇಂದ್ರದ ಯಪಿಎ ಸರಕಾರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ತಮ್ಮ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದು, ಪಶ್ಚಿಮ ಬಂಗಾಲಕ್ಕೆ ಗಮನಾರ್ಹ ಕೊಡುಗೆ ನೀಡಿರುವ ನಿರೀಕ್ಷೆಯ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜನರ ನಿರೀಕ್ಷೆ ಈಡೇರಿಸುವ ಸಮಯ ಯುಪಿಎ ಸರಕಾರದ ಮೂಲಕ ಕೈಗೂಡಿದೆ. ಜನರ ಹಿತಕಾಯುವ ಬಜೆಟ್ ಮಂಡಿಸುವೆ ಎಂದರು.

*ಪ್ರಮುಖ 12 ಮೆಟ್ರೋ ನಗರಗಳಿಗೆ ನೂತನ ಎಸಿ ಸ್ಲಿಪರ್ ತುರಾಂಟ್ ಕೋಚ್ ರೈಲು.
*ತಡೆರಹಿತ ಹವಾನಿಯಂತ್ರಿತ ತುರಾಂಟ್ ರೈಲು ಯೋಜನೆ ಆರಂಭ.
*ಚೈನ್ನೈ -ದೆಹಲಿ ರೈಲು.
*ಮಂಗಳೂರು-ಚೆನ್ನೈ-ಪುದುಚೇರಿ ರೈಲು ಆರಂಭ.
*ಕೊಲ್ಕತ್ತಾ-ಚೆನ್ನೈ ನಡುವೆ ಮಹಿಳೆ ವಿಶೇಷ ರೈಲು.
*ಕೊಲ್ಕತ್ತಾ ನಿಲ್ದಾಣ ಮತ್ತಷ್ಟು ನಿಲುಗಡೆ.
*ಮುಂಬೈ-ಕಾರವಾರ ನಡುವೆ ರೈಲು ಸಂಚಾರ.
*ಅಮೇಥಿ-ಬೆಂಗಳೂರು ನಡುವೆ ವಿಶೇಷ ರೈಲು.
*ಬೆಂಗಳೂರು-ಮಂಗಳೂರು-ಕಣ್ಣೂರು ರೈಲು ಆರಂಭ.
*ಬೆಂಗಳೂರು-ಹುಬ್ಬಳ್ಳಿ- ಸೊಲ್ಲಾಪುರ ಸೂಪರ್ ಫಾಸ್ಟ್ ರೈಲು.
*ಬೆಂಗಳೂರು ತ್ರಿವೇಂದ್ರಮ್ ರೈಲು ಆರಂಭ.
*ಹೌರಾ ಬೆಂಗಳೂರು ರೈಲು ಸಂಚಾರ.
*12 ತಡೆ ರಹಿತ ರೈಲುಗಳು.
*ಅಸಂಘಟಿತ ವಲಯವರಿಗೆ ಮಾಸಿಕ 25 ರುಪಾಯಿ ಪಾಸ್.
*ಶಿವಮೊಗ್ಗ-ಹರಿಹರ ರೈಲು ಸಂಚಾರ.
*ಪುಣೆ -ನಾಸಿಕ್ ರೈಲು.
*ಬೆಂಗಳೂರು-ಕೋಚುವೇಲಿ ಸೂಪರ್ ಫಾಸ್ಟ್ ರೈಲು ಸಂಚಾರ.
*ತತ್ಕಾಲ್ ಸ್ಕೀಮ್ ಜನಸ್ನೇಹಿ ಮುಂದುವರಿಕೆ.

* ಬೆಂಗಳೂರು, ಮಂಗಳೂರು ರೈಲ್ವೆ ನಿಲ್ದಾಣಗಳು ಸೇರಿ ಒಟ್ಟು 50 ರೈಲ್ವೆ ನಿಲ್ದಾಣ ಅಂತಾರಾಷ್ಟ್ರೀಯ ದರ್ಜೆಗೆ
* ರೈಲ್ವೆ ನಿಲ್ದಾಣದಲ್ಲಿ ಸ್ವಚ್ಚತೆ ಮತ್ತು ಭದ್ರತೆಗೆ ಅದ್ಯತೆ
* 49 ರೈಲು ನಿಲ್ದಾಣಗಳನ್ನು ಉನ್ನತ ದರ್ಜೆಗೆ
* ದೇಶದ ಮೂಲೆಮೂಲೆಗೂ ರೈಲು ಸಂಪರ್ಕಕ್ಕೆ ನಿರ್ಧಾರ
* ಅಂಚೆ ಕಚೇರಿಯಲ್ಲೂ ರೈಲು ಟಿಕೇಟ್
* ರೈಲುಗಳಲ್ಲಿ ಪರಿಸರಲ ಸ್ನೇಹಿ ಶೌಚಾಲಯ
* ಅಂಗವಿಕಲರಿಗೆ ವಿಶೇಷ ಕೋಚ್ ಗಳು
* ದೂರ ಪ್ರಮಾಣ ಮಾರ್ಗದಲ್ಲಿ ವೈದ್ಯರ ಸೇವೆ
* ರೈಲು ಶುದ್ದ ನೀರು ಮತ್ತು ಆಹಾರ ಸೌಲಭ್ಯ
* ಮಹಿಳೆ ಮತ್ತ ಮಕ್ಕಳ ಭದ್ರತೆಗಾಗಿ ಹೆಚ್ಚುವರಿಯಾಗಿ ಮಹಿಳೆ ಕಮಾಂಡೋಗಳ ನೇಮಕ
* ಇಂಟರ್ ಸಿಟಿ ರೈಲುಗಳ ಡಬಲ್ ಡೆಕ್ಕರ್ ಕೋಚ್ ಗಳನ್ನು ಹವಾನಿಯಂತ್ರಿತಗೊಳಿಸುವುದು
* ರೈಲ್ವೆ ಉದ್ಯೋಗಿಗಳಿಗಾಗಿ ರೈಲ್ವೆ ಆಸ್ಪತ್ರೆಗಳನ್ನು ಉನ್ನತ ದರ್ಜೆಗೆ
* ಮೆಟ್ರೋ ರೈಲು ನಿಲ್ದಾಣದಲ್ಲಿರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವುದು
* ಬಿ ದರ್ಜೆಯ ರೈಲ್ವೆ ಉದ್ಯೋಗಿಗಳ ಹೆಣ್ಣು ಮಕ್ಕಳಿಗೆ ಸ್ಕಾಲರ್ ಶಿಫ್ ಯೋಜನೆ
* ರೈಲ್ವೆ ಇಲಾಖೆಯಲ್ಲಿ ಅಂಗವಿಕಲರಿಗೆ ಉದ್ಯೋಗ
* ತೋಳಿಗಂಜ್ ನಲ್ಲಿರುವ ಮೆಟ್ರೋ ಆಸ್ಪತ್ರೆಯನ್ನು ಮೇಲ್ದರ್ಜೆಗೆ
* ಮಹಿಳೆಯರಿಗೆ ವಿಶೇಷ ವಿಶ್ರಾಂತಿ ಯೋಜನೆ
* ರೈಲ್ವೆ ಇಲಾಖೆಗೆ ಸಂಬಂಧಿಸಿದ ಜಾಗೆಯನ್ನು ವಾಣಿಜ್ಯಕ್ಕಾಗಿ ಬೋಗ್ಯಕ್ಕೆ ನೀಡುವುದು
* ಖಾಸಗಿ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ಕಾನೂನು ರಚನೆ
* ರಾಜಧಾನಿ, ಶತಾಬ್ಧಿ ರೈಲುಗಳಲ್ಲಿ ಮಾಹಿತಿ. ಮನರಂಜನೆ ಸೌಲಭ್ಯ
* ಪ್ರಿಮಿಯಂ ಪಾರ್ಸೆಲ್ ಸರ್ವೀಸ್ ಯೋಜನೆ ಪ್ರತಿ ಮೂರು ನಿಲ್ದಾಣಕ್ಕೆ ಒಂದರಂತೆ ಆರಂಭ
* ಸರಕು ಸಾಗಾಣಿ ಅಭಿವೃದ್ದಿಪಡಿಸಲು ಪೂರ್ವ ಮತ್ತಪ ಪಶ್ಚಿನ ವಲಯದ ಕಾರಿಡಾರ್ ನಿರ್ಮಾಣ
* ರೈಲ್ವೆಯಲ್ಲಿರುವ ಬ್ಯಾಕ್ ಲಾಗ್ ಹುದ್ದೆ ಭರ್ತಿ
* 18 ಸಾವಿರ ಗೂಡ್ಸ್ ರೈಲು ಖರೀದಿ
* ಹೊಸ ತಂತ್ರಜ್ಞಾನ ಬಳಿಕೆಗೆ ಆದ್ಯತೆ
* 37 ರೈಲ್ವೆ ನಿಲ್ದಾಣದಲ್ಲಿ ವಿಶೇಷ ಸೌಲಭ್ಯ ಗುರಿ
* ಪಶ್ಚಿಮ ಬಂಗಾಲದ ಕಂಚಾರ್ ಪುರ್ ದಲ್ಲಿ ಕೋಚ್ ಫ್ಯಾಕ್ಟರಿ ಸ್ಥಾಪನೆ
* ಅಂಗವಿಕಲರು, ಹಿರಿಯ ನಾಗರಿಕರಿಗೆ ರಿಯಾಯ್ತಿ ದರ
* ರೈಲ್ವೆ ಇಲಾಖೆಯಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷ ಅದ್ಯತೆ
* ಸರಕು ಸಾಗಣೆ ವ್ಯಾಪ್ತಿ ಹೆಚ್ಚಳ
* ಒಟ್ಟು ಕಾಮಗಾರಿ ವೆಚ್ಚ 81,685 ಕೋಟಿ ರುಪಾಯಿ
* ಮಾಧ್ಯಮ ಪ್ರತಿನಿಧಿಗಳಿಗೆ ಪ್ರಮಾಣದರದಲ್ಲಿ ಶೇ. 50 ರಷ್ಟು ರಿಯಾಯ್ತಿ
* ಕಡಿಮೆ ದರದ ಇಜ್ಜತ್ ಹೆಸರಿನ ನೂತನ ಯೋಜನೆ ಜಾರಿ
* ತೋಟಗಾರಿಕಾ ಬೆಳೆಗಳಿಗೆ ಕೋಲ್ಡ್ ಸ್ಟೋರೇಜ್

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X