ರಾಜೀವ್ ಗಾಂಧಿ ಆವಾಸ್ ಯೋಜನೆ ಆರಂಭ
ನವದೆಹಲಿ,
ಜು. 2 : ಮುಂಬೈ ಇತ್ತೀಚೆಗೆ ಉದ್ಘಾಟನೆಗೊಂಡಿರುವ ಸಮುದ್ರ ಮಾರ್ಗಕ್ಕೆ ರಾಜೀವ ಗಾಂಧಿ ಹೆಸರಿಡುವುದಕ್ಕೆ ಸಂಬಂಧಿಸಿದಂತೆ ತೀವ್ರ ರಾಜಕೀಯ ಆರಂಭವಾಗಿದೆ. ಇದರ ಬೆನ್ನಲ್ಲೇ ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಕೊಳಗೇರಿ ಮುಕ್ತಗೊಳಿಸಲು ರಾಜೀವ್ ಗಾಂಧಿ ಆವಾಸ್ ಯೋಜನೆ ಜಾರಿಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. id="toptextpromo">ಇಂದಿರಾ
ಆವಾಸ್ ಯೋಜನೆ ಮಾದರಿಯಲ್ಲೇ ಈ ಯೋಜನೆ ಇರಲಿದೆ. ಕೊಳಗೇರಿ ನಿವಾಸಿಗಳು ಹಾಗೂ ನಗರ ಪ್ರದೇಶಗಳ ಬಡವರಿಗೆ ರಾಜ್ಯ ಸರಕಾರದ ನೆರವಿನಿಂದ ಆಸ್ತಿ ಹಕ್ಕು ಒದಗಿಸಲು ಈ ಯೋಜನೆ ಒತ್ತು ನೀಡಲಿದೆ ಎಂದು ಗೃಹ ಹಾಗೂ ನಗರ ಬಡತನ ನಿರ್ಮೂಲನ ಸಚಿವೆ ಕುಮಾರಿ ಸೆಲ್ಜಾ ತಿಳಿಸಿದ್ದಾರೆ. ತಮ್ಮ ಸಚಿವಾಲಯದ 100 ದಿನಗಳ ಕಾರ್ಯಕ್ರಮ ಪಟ್ಟಿ ಬಿಡುಗಡೆಗೊಳಿಸಿದ ಅವರು, ಬಡವರಿಗೆ ಕಡಿಮೆ ದರದ ಮನೆಗಳನ್ನು ಬಡ ಜನರು, ನಗರಪಾಲಿಕೆಗಳು, ಖಾಸಗಿ ಬಿಲ್ಡರ್ ಗಳು ಹಾಗೂ ರಾಜ್ಯ ಸರಕಾರಗಳ ಜೊತೆ ಪಾಲುದಾರಿಕೆಗೆ ಗಮನಹರಿಸಲಾಗುವುದು ಎಂದು ಸಚಿವೆ ಸೆಲ್ಜಾ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications